/newsfirstlive-kannada/media/post_attachments/wp-content/uploads/2024/10/MS-Dhoni.jpg)
ಐಪಿಎಲ್ನಲ್ಲಿ ಮಾಹಿ ಆಡ್ತಾರಾ ಇಲ್ವಾ ಅನ್ನೋ ಟೆನ್ಶನ್ ಫ್ಯಾನ್ಸ್ನ ಕಾಡ್ತಿದೆ. ಸಿಎಸ್ಕೆ ಫ್ರಾಂಚೈಸಿಗೂ ಇದು ಉತ್ತರ ಸಿಗದ ಪ್ರಶ್ನೆಯಾಗಿದೆ. ಇತ್ತ ಧೋನಿ ಮಾತ್ರ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಅದೃಷ್ಟದ ಹುಡುಕಾಟಕ್ಕೆ ಇಳಿದಿದ್ದಾರೆ.
ಮಹೇಂದ್ರ ಸಿಂಗ್ ಧೋನಿ. ಸದ್ಯ ಭಾರತೀಯ ಕ್ರಿಕೆಟ್ ಲೋಕದ ಹಾಟ್ ಟಾಪಿಕ್. ಐಪಿಎಲ್ ರಿಟೈನ್ಶನ್ ಡೆಡ್ಲೈನ್ ಹತ್ತಿರವಾಗ್ತಿದ್ದಂತೆ, ಧೋನಿ ಮುಂದಿನ ಸೀಸನ್ ಆಡ್ತಾರಾ? ಇಲ್ವಾ? ಅನ್ನೋ ಪ್ರಶ್ನೆ ಕ್ರಿಕೆಟ್ ವಲಯದ ಚರ್ಚೆಯ ಕೇಂದ್ರ ಬಿಂದುವಾಗಿದೆ. ಸಿಎಸ್ಕೆ ಫ್ರಾಂಚೈಸಿ ಕೂಡ ಈ ವಿಚಾರದಲ್ಲೂ ಕ್ಲೂ ಕೂಡ ಸಿಗದೇ ತಲೆ ಮೇಲೆ ಕೈ ಹೊತ್ತು ಕೂತಿದೆ. ಆದ್ರೆ, ಧೋನಿ ಮಾತ್ರ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಐಪಿಎಲ್ಗೂ ಮುನ್ನ ಅದೃಷ್ಟದ ಹುಡುಕಾಟ ನಡೆಸ್ತಿದ್ದಾರೆ.
ಇದನ್ನೂ ಓದಿ:ಸಿಎಸ್ಕೆಗೆ ಟೆನ್ಶನ್ ಕೊಟ್ಟ MS ಧೋನಿ; ತಲಾ ಸಸ್ಪೆನ್ಸ್ ಸೂತ್ರದ ಹಿಂದಿನ ಸೀಕ್ರೆಟ್ ಏನು..?
ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ಬರ್ತ್ಡೇ ಪಾರ್ಟಿಯಲ್ಲಿ ಧೋನಿ ಕ್ಲಿಕ್ಕಿಸಿಕೊಂಡಿರುವ ಪೋಟೋ ಇದೀಗ ಅದೃಷ್ಟದ ಹುಡುಕಾಟದ ಕಥೆಯನ್ನ ಹೇಳ್ತಿದೆ. ಧೋನಿ ಜೊತೆಯಲ್ಲಿ ನಂಬರ್ 7 ಫೋಸ್ ಕೊಡ್ತಿರುವ ವ್ಯಕ್ತಿಯಿಂದಲೇ ಈ ಚರ್ಚೆ ಶುರುವಾಗಿರೋದು.
ಧೋನಿ IPL ಭವಿಷ್ಯಕ್ಕೂ ಲಕ್ಕಿಮ್ಯಾನ್ಗೂ ಲಿಂಕ್
ಧೋನಿ ಐಪಿಎಲ್ ಆಡ್ತಾರೋ ಇಲ್ವೋ ಗೊತ್ತಿಲ್ಲ. ಬಾಲಿವುಡ್ ಲೋಕದ ಲಕ್ಕಿ ಮ್ಯಾನ್ ಈ ಒರ್ರಿ ಜೊತೆ ಧೋನಿ ತೆಗೆಸಿಕೊಂಡ ಒಂದು ಫೋಟೋ ಧೋನಿ ಐಪಿಎಲ್ ಆಡ್ತಾರೆ ಎಂಬ ಸಂದೇಶ ರವಾನಿಸಿದೆ. ಐಪಿಎಲ್ ಗೆದ್ದು, ಕ್ರಿಕೆಟ್ಗೆ ವಿದಾಯ ಹೇಳೋ ಹೆಬ್ಬಯಕೆ ಹೊಂದಿರೋ ಧೋನಿ, ಆ ಕನಸು ನನಸು ಮಾಡಿಕೊಳ್ಳಲು ಈ ಅದೃಷ್ಟವಂತನ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಹಾರ್ದಿಕ್-ಸಿರಾಜ್ ಜೊತೆನೂ ಫೋಟೋ
ಧೋನಿ ಮಾತ್ರವಲ್ಲ, ಧೋನಿ ಪತ್ನಿ ಸಾಕ್ಷಿ ಕೂಡ ಈ ಹಿಂದೆ ಈತನ ಜೊತೆ ಫೋಟೋ ತೆಗಿಸಿಕೊಂಡಿದ್ರು. ಟೀಮ್ ಇಂಡಿಯಾದ ಹಲವು ಆಟಗಾರರು ಕೂಡ ಈ ಅದೃಷ್ಟ ಬರಲಿ ಅನ್ನೋ ಕಾರಣಕ್ಕೆ ಲಕ್ಕಿ ಮ್ಯಾನ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಕೂಡ ಈ ಲಕ್ಕಿಮ್ಯಾನ್ ಹಿಂದೆ ಬಿದ್ದು ಫೋಟೋ ತೆಗೆಸಿಕೊಂಡಿದ್ದಾರೆ.
ಇದನ್ನೂ ಓದಿ:MS ಧೋನಿ ನ್ಯೂ ಹೇರ್ ಸ್ಟೈಲ್.. ಹೊಸ ಲುಕ್ನಲ್ಲಿ ಐಪಿಎಲ್ಗೆ ಎಂಟ್ರಿ ಕೊಡಲಿರೋ ಮಾಜಿ ಕ್ಯಾಪ್ಟನ್!
ಗಿಲ್ ಪಾಲಿಗೆ ಲಕ್ಕಿಮ್ಯಾನ್ ಒರ್ರಿ
ಈ ಅದೃಷ್ಟದ ಟ್ಯಾಕ್ಟಿಕ್ ವರ್ಕೌಟ್ ಕೂಡ ಆಗುತ್ತೆ. 2023ರ ನವೆಂಬರ್ನಲ್ಲಿ ಶುಭ್ಮನ್ ಗಿಲ್ ಕೂಡ ಒರ್ರಿ ಜೊತೆ ಎದೆ ಮೇಲೆ ಕೈ ಇರಿಸಿಕೊಂಡು ಫೋಟೋ ತೆಗೆಸಿಕೊಂಡಿದ್ರು. ಆ ಬಳಿಕ ಟೆಸ್ಟ್ನಲ್ಲಿ ಕಮ್ಬ್ಯಾಕ್ ಮಾಡಿದ ಗಿಲ್, ಟಿ20, ಏಕದಿನ ತಂಡದ ಉಪ ನಾಯಕನ ಪಟ್ಟವೇರಿದ್ರು.
ಹಲವು ಕ್ರಿಕೆಟಿಗರ ಪಾಲಿಗೆ ಫೇವರಿಟ್ ಈ ಒರ್ರಿ
ಹಾರ್ದಿಕ್, ಸಿರಾಜ್, ಶುಭ್ಮನ್ಗೆ ಮಾತ್ರವಲ್ಲ. ಈ ಒರ್ರಿ ಇಶಾನ್ ಕಿಶನ್, ಯಜುವೇಂದ್ರ ಚಹಲ್, ಪೃಥ್ವಿ ಶಾ, ಕ್ರಿಸ್ ಗೇಲ್ ಸೇರಿದಂತೆ ಹಲವರ ಪಾಲಿನ ಹಾಟ್ ಫೇವರಿಟ್ ಆಗಿದ್ದಾರೆ. ಸಚಿನ್ ಪುತ್ರಿ ಸಾರಾ ತೆಂಡುಲ್ಕರ್ ಕೂಡ ಈ ಲಿಸ್ಟ್ನಲ್ಲಿದ್ದಾರೆ.
ಯಾರು ಈ ಒರ್ರಿ..?
ಈ ಒರ್ರಿಯ ಪೂರ್ತಿ ಹೆಸರು ಒರ್ಹಾನ್ ಅವತ್ರಮಣಿ. ಒರ್ರಿ ಅಂತಾನೇ ಫೇಮಸ್. ಬಾಲಿವುಡ್ ಟಾಪ್ ಸೆಲೆಬ್ರೆಟಿಗಳ ಹಾಟ್ ಫೇವರಿಟ್. ಬಾಲಿವುಡ್ ಮಂದಿ ಹೋಗುವ ಪ್ರತಿಯೊಂದು ಪಾರ್ಟಿಗಳಲ್ಲೂ ಈತ ಇರ್ತಾನೆ. ಸೆಲೆಬ್ರಿಟಿಗಳ ಜೊತೆನೇ ಓಡಾಡುತ್ತಾನೆ. ಸಲ್ಮಾನ್ ಖಾನ್, ಕರಿನಾ ಕಪೂರ್, ದೀಪಿಕಾ ಪಡಿಕೋಣೆ, ಪ್ರಿಯಾಂಕ ಚೋಫ್ರಾ, ಅನನ್ಯಾ ಪಾಂಡೆ, ಜಾನ್ವಿ ಕಪೂರ್, ಆಲಿಯಾ ಭಟ್ ಅಷ್ಟೇ ಯಾಕೆ.. ಕೋಟಿ ಕುಬೇರ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಕೂಡ ಒರ್ರಿ ಫೋಟೋ ಕ್ಲಿಕ್ಕಿಸಿಕೊಳ್ಳೋಕೆ ಕಾಯ್ತಾರೆ. ಒರ್ರಿಗೆ ಎದೆಯ ಮೇಲೆ ಕೈ ಇಟ್ಟು ಪೋಸ್ ಕೋಡುವಂತೆ ಕೇಳಿ ಕೊಳ್ತಾರೆ.
ಇದನ್ನೂ ಓದಿ:CSKಯಲ್ಲಿ ದಿನಕ್ಕೊಂದು ಬೆಳವಣಿಗೆ.. ಧೋನಿ ಬಗ್ಗೆ CEO ಶಾಕಿಂಗ್ ಹೇಳಿಕೆ
ಈತ ಎದೆ ಮೇಲೆ ಕೈ ಇಟ್ಟರೆ ಲಕ್ಷ ಲಕ್ಷ
ಈ ಓರ್ರಿ ಈತ ಸೆಲಬ್ರೆಟಿಗಳ ಪಾಲಿನ ಲಕ್ಕಿಚಾರ್ಮ್. ಈತ ಎದೆಯ ಮೇಲೆ ಕೈ ಇಟ್ರೆ, ಅದೃಷ್ಟ ಖುಲಾಯಿಸುತ್ತೆ ಅನ್ನೋದು ಎಲ್ಲರ ನಂಬಿಕೆ. ಇದಕ್ಕಾಗಿ ಲಕ್ಷ ಲಕ್ಷ ಹಣವನ್ನೂ ನೀಡ್ತಾರೆ. 1ರಿಂದ 5 ಲಕ್ಷದವರೆಗೆ ಒರ್ರಿ ಚಾರ್ಜಸ್ ಇದೇ ಅನ್ನೋ ಮಾಹಿತಿಯೂ ಇದೆ. ಈ ವಿಚಾರವನ್ನು ಸ್ವತಃ ಒರ್ರಿನೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ. ಇಷ್ಟು ದಿನ ಬಾಲಿವುಡ್ಗೆ ಸೀಮಿತವಾಗಿದ್ದ ಒರ್ರಿ, ಇದೀಗ ಕ್ರಿಕೆಟ್ ಲೋಕದಲ್ಲೂ ಸಖತ್ ಫೇಮಸ್ ಆಗ್ತಿದ್ದಾನೆ. ದಿಗ್ಗಜ ಧೋನಿ ಕೂಡ ಫೋಟೋ ತೆಗಿಸಿಕೊಂಡಿದ್ದಾರೆ. ಧೋನಿಗೆ ಅದೃಷ್ಟ ಖುಲಾಯಿಸುತ್ತಾ? ಕಾದು ನೋಡೋಣ.
ಇದನ್ನೂ ಓದಿ:6 ಆಟಗಾರರ ರಿಟೈನ್ಗೆ ಅನುಮತಿ.. ಧೋನಿಗೂ ಗುಡ್ನ್ಯೂಸ್ ಕೊಟ್ಟ ಬಿಸಿಸಿಐ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್