newsfirstkannada.com

ನಂಬರ್ 7 ಜೆರ್ಸಿಯನ್ನೇ ಧೋನಿ ಆಯ್ಕೆ ಮಾಡಿದ್ದೇಕೆ? ಕೂಲ್ ಕ್ಯಾಪ್ಟನ್ ಬೆನ್ನ ಹಿಂದೆ ಒಂದು ಸಖತ್​ ಸ್ಟೋರಿ ಇದೆ!

Share :

Published February 12, 2024 at 1:51pm

    ನಂಬರ್ 7 ಆಯ್ಕೆ ಮಾಡಿಕೊಳ್ಳುವುದರ ಹಿಂದಿದೆ ಸಖತ್ ಸ್ಟೋರಿ

    ಟೀಮ್ ಇಂಡಿಯಾದಲ್ಲಿ ಕೀಪಿಂಗ್, ಕ್ಯಾಪ್ಟೆನ್ಸಿಯಲ್ಲಿ ಧೋನಿ ಚಾಣಕ್ಷ

    ನಂ.​7 ಜೆರ್ಸಿ ಸಿಗದಿದ್ರೆ, ಧೋನಿಯ ಇನ್ನೊಂದು ನಂಬರ್ ಯಾವುದು?

ಎಮ್​.ಎಸ್.ಧೋನಿ ವಿಶ್ವ ಕ್ರಿಕೆಟ್​ನಲ್ಲಿ ಈ ಹೆಸರೇ ಒಂದು ಸೆನ್ಸೇಷನ್. ಧೋನಿಯ ಜೆರ್ಸಿ ನಂಬರ್- 7 ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ, ಈ ನಂಬರ್​​ನ ಧೋನಿ ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಒಂದು ಸಖತ್​ ಕಥೆಯಿದೆ.

ಎಮ್​.ಎಸ್​ ಧೋನಿ ವಿಶ್ವ ಕ್ರಿಕೆಟ್​ ಕಂಡ ಚಾಣಾಕ್ಷ ಕ್ರಿಕೆಟಿಗ. ತನ್ನ ಬ್ಯಾಟಿಂಗ್​, ಕ್ಯಾಪ್ಟೆನ್ಸಿ, ಕೀಪಿಂಗ್​ ಎಲ್ಲದರಿಂದ ಮೋಡಿ ಮಾಡಿದ ಮಾಂತ್ರಿಕ. ಧೋನಿ ಅಂದ್ರೆ ಅಭಿಮಾನಿಗಳ ಪಾಲಿಗೆ ಒಂದು ವಿಶೇಷವಾದ ಎಮೋಷನ್​. ಅದ್ರಲ್ಲೂ, ನಂಬರ್​ 7 ಜೆರ್ಸಿಯನ್ನ ಯಾರೂ ಕೂಡ ಮೆರೆಯಲ್ಲ. ಅಷ್ಟಕ್ಕೂ ಧೋನಿ ಕ್ರಿಕೆಟ್​ ಲೋಕಕ್ಕೆ ಕಾಲಿಟ್ಟಾಗ ನಂಬರ್​ 7 ಜೆರ್ಸಿಯನ್ನೇ ಕೇಳಿದ್ದೇಕೆ. ಈ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಅದಕ್ಕೀಗ ಧೋನಿಯೇ ಫುಲ್​ಸ್ಟಾಫ್​ ಇಟ್ಟಿದ್ದಾರೆ.

ಅಂದ್ಹಾಗೆ, ಧೋನಿ ನಂಬರ್​ 7 ಜೆರ್ಸಿ ನಂಬರ್ ಆಯ್ದುಕೊಳ್ಳಲು ಕಾರಣ ಹುಟ್ಟಿದ ದಿನ. ಧೋನಿ ಜನಿಸಿದ್ದು 1981ರ 7ನೇ ತಿಂಗಳಾದ ಜುಲೈ ತಿಂಗಳ 7ನೇ ತಾರೀಖಿನಂದು. ಹೀಗಾಗಿಯೇ ಧೋನಿ ನಂಬರ್​ 7 ಜೆರ್ಸಿಯನ್ನ ಆಯ್ದುಕೊಂಡರು. ಅಕಸ್ಮಾತ್ ನಂಬರ್​ 7 ಜೆರ್ಸಿ ಸಿಗದೇ ಇದ್ದಿದ್ರೆ, ನಂಬರ್​ 22ರ ಜೆರ್ಸಿಯನ್ನ ಕೇಳ್ತಿದ್ರಂತೆ.

ಯಾಕಂದ್ರೆ, ಸ್ಕೂಲ್​ನಲ್ಲಿ ಫುಟ್ಬಾಲ್​ ಆಡುವಾಗ ಧೋನಿ ಆ ಜೆರ್ಸಿಯನ್ನ ತೊಡ್ತಾ ಇದ್ರಂತೆ. ಧೋನಿಗೂ ಮೊದಲು ಕನ್ನಡಿಗ ಜಾವಗಲ್​ ಶ್ರೀನಾಥ್​​ ನಂಬರ್​ 7 ಜೆರ್ಸಿಯನ್ನ ಬಳಸ್ತಾ ಇದ್ರು. ಧೋನಿ ಡೆಬ್ಯೂಗೂ ಮುನ್ನ ಶ್ರೀನಾಥ್​ ನಿವೃತ್ತಿ ಹೇಳಿದ್ರಿಂದ ಧೋನಿಗೆ ನಂಬರ್​ 7 ಜೆರ್ಸಿ ಸಿಗ್ತು. ಆದ್ರೆ, ಈಗ ಬಿಸಿಸಿಐ ನಂಬರ್​ 7 ಜೆರ್ಸಿಯನ್ನ ರಿಟೈರ್​ ಮಾಡಿದ್ದು, ಮುಂದೆ ಭಾರತೀಯ ಕ್ರಿಕೆಟ್​ನಲ್ಲಿ ಯಾರಿಗೂ ಈ ಜೆರ್ಸಿ ಸಿಗಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಂಬರ್ 7 ಜೆರ್ಸಿಯನ್ನೇ ಧೋನಿ ಆಯ್ಕೆ ಮಾಡಿದ್ದೇಕೆ? ಕೂಲ್ ಕ್ಯಾಪ್ಟನ್ ಬೆನ್ನ ಹಿಂದೆ ಒಂದು ಸಖತ್​ ಸ್ಟೋರಿ ಇದೆ!

https://newsfirstlive.com/wp-content/uploads/2023/12/DHONI_JERSY_NO_7.jpg

Load More