/newsfirstlive-kannada/media/post_attachments/wp-content/uploads/2025/04/DHONI-4.jpg)
ಸತತ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆಗೂ ಗೆಲುವಿನ ಹಳಿಗೆ ಮರಳಿತು. ರೋಚಕ ಘಟ್ಟ ತಲುಪಿದ್ದ ಪಂದ್ಯದಲ್ಲಿ ವಿಂಟೇಜ್ ಧೋನಿಯ ದರ್ಶನವೂ ಆಯ್ತು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಕಾನ ಮೈದಾನದಲ್ಲಿ ಆರಂಭದಲ್ಲೇ ಸಕ್ಸಸ್ ಕಂಡುಕೊಳ್ತು. ಏಡೆನ್ ಮರ್ಕರಮ್, ನಿಕೋಲಸ್ ಪೂರನ್ ಸಿಂಗಲ್ ಡಿಜಿಟ್ ಸ್ಕೋರ್ ವಿಕೆಟ್ ಒಪ್ಪಿಸಿದ್ರು. ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್ ಚೆನ್ನೈಗೆ ಆರಂಭಿಕ ಮೇಲುಗೈ ತಂದುಕೊಟ್ರು.
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್ ಅಕ್ಷರ್ ಪಟೇಲ್ಗೆ ಬಿಗ್ ಶಾಕ್
ಮಿಡಲ್ ಓವರ್ಗಳಲ್ಲಿ ಸ್ಪಿನ್ನರ್ಸ್ ಲಕ್ನೋ ಬ್ಯಾಟರ್ಸ್ನ ಕಾಡಿದ್ರು. 30 ರನ್ಗಳಿಸಿದ್ದ ಮಿಚೆಲ್ ಮಾರ್ಷ್ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಕ್ಲೀನ್ಬೋಲ್ಡ್ ಆದ್ರು. 2 ಅದೃಷ್ಟದ ಅವಕಾಶ ಪಡೆದ ಆಯುಷ್ ಬದೋನಿ 22 ರನ್ಗಳಿಸಿ ಜಡೇಜಾಗೆ 2ನೇ ಬಲಿಯಾದ್ರು. ಫಾರ್ಮ್ ಕಂಡುಕೊಂಡ ರಿಷಭ್ ಪಂತ್ ಚೆನ್ನೈ ಬೌಲರ್ಗಳನ್ನ ಕಾಡಿದ್ರು. ಎಚ್ಚರಿಕೆಯ ಆಟವಾಡಿದ ರಿಷಭ್ ಪಂತ್ ಈ ಐಪಿಎಲ್ನಲ್ಲಿ ಕೊನೆಗೂ ರಿದಮ್ ಕಂಡುಕೊಂಡ್ರು. ಸತತ ವೈಫಲ್ಯವನ್ನ ಮೆಟ್ಟಿನಿಂತು ಹಾಫ್ ಸೆಂಚುರಿ ಸಿಡಿಸಿದ್ರು. 4 ಬೌಂಡರಿ, 4 ಸಿಕ್ಸರ್ ಸಿಡಿಸಿದ ಪಂತ್ 49 ಎಸೆತಗಳಲ್ಲಿ 63 ರನ್ಗಳಿಸಿದ್ರು.
ಅಬ್ಧುಲ್ ಸಮದ್ 20 ರನ್ಗಳಿಸಿದರು. ವಿಶೇಷ ಅಂದ್ರೆ ಧೋನಿ ಅವರು ಶಮದ್ರನ್ನು ರನೌಟ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಶಾರ್ದೂಲ್ ಠಾಕೂರ್ 6 ರನ್ಗಳಿಸಿ ಇನ್ನಿಂಗ್ಸ್ನ ಕೊನೆ ಎಸೆತದಲ್ಲಿ ಔಟಾದ್ರು. ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 166 ರನ್ಗಳಿಸಿತು. 167 ರನ್ಗಳ ಚೇಸಿಂಗ್ಗಿಳಿದ ಚೆನ್ನೈಗೆ ಡಿಸೆಂಟ್ ಆರಂಭ ಸಿಗ್ತು. ರಚಿನ್ ರವೀಂದ್ರ, ಶೇಕ್ ರಶೀದ್ 52 ರನ್ಗಳ ಜೊತೆಯಾಟವಾಡಿದ್ರು. ಡೆಬ್ಯೂ ಪಂದ್ಯದಲ್ಲಿ 6 ಬೌಂಡರಿ ಸಿಡಿಸಿ ಮಿಂಚಿದ ಶೇಕ್ ರಶೀದ್ 27 ರನ್ಗಳಿಸಿ ಔಟಾದ್ರು.
ಇದನ್ನೂ ಓದಿ: RCB ನೆಕ್ಸ್ಟ್ ಮ್ಯಾಚ್ ಯಾವಾಗ, ಎಲ್ಲಿ..? ಬಲಿಷ್ಠ ಟೀಮ್ ಜೊತೆ ಹೋರಾಡಲಿರೋ ರಜತ್ ಸೇನೆ
#MSDhoni𓃵 No Looks throw
There is no better wicketkeeper than Dhoni.
Dhoni is performing brilliantly regardless of his age. 😍
Dhoni's name will not be forgotten as long as cricket exists.#LSGvsCSK#CSKvsLSGpic.twitter.com/yvXiZZcWE5— Shashi Kumar Reddy Vura (@vurashashi) April 14, 2025
8ನೇ ಓವರ್ನಲ್ಲಿ ಮರ್ಕರಮ್, ರಚಿನ್ ರವೀಂದ್ರನ ಎಲ್ಬಿ ಬಲೆಗೆ ಬೀಳಿಸಿದ್ರು. ಆ ಬಳಿಕ ರವಿ ಬಿಷ್ನೋಯ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ್ರು. ರಾಹುಲ್ ತ್ರಿಪಾಠಿ, ರವೀಂದ್ರ ಜಡೇಜಾ ಇಬ್ಬರೂ ಬಿಷ್ನೋಯ್ ಸ್ಪಿನ್ ಬಲೆಗೆ ಬಿದ್ರು. ಮತ್ತೊಂದು ಫ್ಲಾಪ್ ಶೋ ನೀಡಿ ವಿಜಯ್ ಶಂಕರ್ ನಿರ್ಗಮಿಸಿದ್ರು. ಲಕ್ನೋ ಸ್ಪಿನ್ ದಾಳಕ್ಕೆ ತತ್ತರಿಸಿದ 15 ಓವರ್ ಅಂತ್ಯಕ್ಕೆ 5 ಪ್ರಮುಖ ವಿಕೆಟ್ ಕಳೆದುಕೊಳ್ತು.
6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಎಮ್.ಎಸ್ ಧೋನಿ ಫ್ಯಾನ್ಸ್ಗೆ ನಿರಾಸೆ ಮೂಡಿಸಲಿಲ್ಲ. ಅಬ್ಬರದ ಆಟವಾಡಿದ್ರು. ಧೋನಿಗೆ ಶಿವಂ ದುಬೆ ಸಾಥ್ ನೀಡಿದ್ರು. 4 ಬೌಂಡರಿ, 1 ಸಿಕ್ಸರ್ ಸಿಡಿಸಿದ ಧೋನಿ ಜಸ್ಟ್ 11 ಎಸೆತಗಳಲ್ಲೇ 26 ರನ್ಗಳಿಸಿದ್ರು. ಅಂತಿಮ ಓವರ್ನ 3ನೇ ಎಸೆತವನ್ನ ಬೌಂಡರಿ ಸಿಡಿಸಿದ ಶಿವಂ ದುಬೆ ಚೆನ್ನೈ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ಗಳ ಗೆಲುವು ಸಾಧಿಸಿತು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಲಕ್ನೋ ನಿರಾಸೆ ಅನುಭವಿಸಿತು.
ಇದನ್ನೂ ಓದಿ: 11 ಬಾಲ್ನಲ್ಲಿ 26 ರನ್ ಚಚ್ಚಿದ ಧೋನಿ, ಕೊನೆಗೂ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್