/newsfirstlive-kannada/media/post_attachments/wp-content/uploads/2025/05/vaibhav_suryavanshi_Dhoni.jpg)
ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಐಪಿಎಲ್ನ ಅತ್ಯಂತ ಕಿರಿಯ ಆಟಗಾರ. ರಾಜಸ್ಥಾನ್ ರಾಯಲ್ಸ್ನ ಯುವ ಆಟಗಾರ ಈಗ ಸೆನ್ಸೇಷನಲ್ ಸ್ಟಾರ್. ಗುಜರಾತ್ ಟೈಟನ್ಸ್ ವಿರುದ್ಧ ಅಬ್ಬರಿಸಿದ್ದ ಬಾಲಕ ಕೇವಲ 35 ಎಸೆತದಲ್ಲಿ 11 ಸಿಕ್ಸರ್ಗಳಿಂದ ಭರ್ಜರಿ ಶತಕ ಬಾರಿಸಿ ಐಪಿಎಲ್ನಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದರು. ಇಂತಹ ಯುವ ಬ್ಯಾಟರ್ಗೆ ಎಂ.ಎಸ್ ಧೋನಿ ಕಮೆಂಟ್ ಮಾಡಿದ್ದಾರೆ.
ಭಾರತ ತಂಡವಾಗಲಿ ಅಥವಾ ಐಪಿಎಲ್ ತಂಡವಾಗಲಿ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಆಗಿರುವ ಮಹೇಂದ್ರ ಸಿಂಗ್ ಧೋನಿ ಸದ್ಯ ಐಪಿಎಲ್ನಲ್ಲಿ ಬ್ಯುಸಿ ಇದ್ದಾರೆ. ಧೋನಿ ಅವರು ಯಾರಿಗಾದರೂ ಕಮೆಂಟ್ ಮಾಡೋದು ಅಪರೂಪ. ಯಾರ ಬಗ್ಗೆಯೂ ಎಳ್ಳಷ್ಟು ಮಾತನಾಡದ ಧೋನಿ, ರಾಜಸ್ಥಾನದ ಯುವ ಪ್ಲೇಯರ್ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ:ಪಂದ್ಯ ಗೆದ್ದ ಖುಷಿಯಲ್ಲಿದ್ದ ಶ್ರೇಯಸ್ ಅಯ್ಯರ್ಗೆ ಬಿಗ್ ಶಾಕ್.. ಚೆನ್ನೈ ಮೈದಾನದಲ್ಲಿ ಆಗಿದ್ದೇನು?
ಮಾರ್ಚ್ 30 ರಂದು ರಾಜಸ್ಥಾನ್ ಹಾಗೂ ಚೆನ್ನೈ ತಂಡಗಳ ನಡುವೆ ಗುವಾಹಟಿಯಲ್ಲಿ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 6 ರನ್ಗಳಿಂದ ಗೆದ್ದು ಬೀಗಿತ್ತು. ಇದೇ ಮ್ಯಾಚ್ ವೇಳೆ ವೈಭವ್ ಸೂರ್ಯವಂಶಿ ತನ್ನ ಇಷ್ಟದ ಆಟಗಾರ, ಎಂ.ಎಸ್ ಧೋನಿ ಅವರನ್ನು ಮೀಟ್ ಮಾಡಿ ಕೆಲ ಟಿಪ್ಸ್ಗಳನ್ನು ಪಡೆದಿದ್ದರು.
ಇದಾದ ಮೇಲೆ ರಾಜಸ್ಥಾನ್ ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ಅವರು ಧೋನಿ ಅವರನ್ನು ಅಲ್ಲೇ ಮೀಟ್ ಮಾಡಿದ್ದರು. ಈ ವೇಳೆ ಧೋನಿ ಅವರು, ವೈಭವ್ ಸೂರ್ಯವಂಶಿಯ ಕುರಿತು ರೋಮಿ ಭಿಂದರ್ ಬಳಿ ತಮಾಷೆಯಾಗಿ ಮಾತಾಡಿದ್ದರು. ಧೋನಿ ಮೊದಲು ವೈಭವ್ ಸೂರ್ಯವಂಶಿಯನ್ನು ಹೊಗಳಿ, ಪ್ರಶಂಸೆ ಕೂಡ ವ್ಯಕ್ತಪಡಿಸಿದ್ದರು. ನಿಮ್ಮ ತಂಡದಲ್ಲಿ ಬೇಬಿಯನ್ನು ಹೊಂದಿದ್ದೀರಿ. ಆದ್ರೆ ಕರಗತ ಹೊಂದಿರುವ ಆಟಗಾರನಂತೆ ಅದ್ಭುತ ಶಾಟ್ಗಳನ್ನು ಬೇಬಿ ಹೊಡೆಯುತ್ತಾನೆ ಅಂತ ಧೋನಿ ಹೇಳಿದ್ದರು ಎಂದು ರೋಮಿ ಭಿಂದರ್ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ