/newsfirstlive-kannada/media/post_attachments/wp-content/uploads/2025/03/DHONI_SURYA_OUT.jpg)
ವಿಕೆಟ್ ಕೀಪಿಂಗ್ನಲ್ಲಿ ನಾನೇ ಚಾಣಕ್ಷ ಎನ್ನುವುದನ್ನು ಮಹೇಂದ್ರ ಸಿಂಗ್ ಧೋನಿ ಮತ್ತೆ ಸಾಬೀತು ಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕೇವಲ 0.12 ಸೆಕೆಂಡ್ಸ್ ಒಳಗೆ ಸೂರ್ಯಕುಮಾರ್ ಅವರನ್ನು ಎಂ.ಎಸ್ ಧೋನಿ ಸ್ಟಂಪ್ ಔಟ್ ಮಾಡಿದ್ದಾರೆ.
ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಟ್ರೋಫಿಯ 3ನೇ ಪಂದ್ಯದಲ್ಲಿ ಚೆನ್ನೈ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂದುಕೊಂಡಂತೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ಗಳ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ಸ್ ಸವಾರಿ ಮಾಡಿದರು. ರೋಹಿತ್ ಶರ್ಮಾ ಡಕೌಟ್ ಆಗುವ ಮೂಲಕ ತಂಡಕ್ಕೆ ಭಾರೀ ಹೊಡೆತ ಬಿತ್ತು. ಇದರ ಬೆನ್ನಲ್ಲೇ ತಂಡದ ಮೊತ್ತ 21 ಇರುವಾಗ ರಿಕಲ್ಟನ್ ಕೂಡ ಬೋಲ್ಡ್ ಆದ್ರು. ವಿಲ್ ಜಾಕ್ಸ್ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು.
36 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈ ಪರ ಕ್ರೀಸ್ಗೆ ಆಗಮಿಸಿದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಒಳ್ಳೆಯ ಬ್ಯಾಟಿಂಗ್ನಿಂದ ತಂಡವನ್ನು ಉತ್ತಮ ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. 26 ಎಸೆತಗಳಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್ನಿಂದ 29 ರನ್ ಬಾರಿಸಿ ಸೂರ್ಯಕುಮಾರ್ ಆಡುತ್ತಿದ್ದರು.
ಇದನ್ನೂ ಓದಿ: ಕಿಶನ್, ಹೆಡ್ ಮಿಂಚಿನ ಬ್ಯಾಟಿಂಗ್; ಹೈದ್ರಾಬಾದ್ ಬಿಗ್ ಟಾರ್ಗೆಟ್ ಮುಂದೆ ತಲೆ ಬಾಗಿದ ರಾಜಸ್ಥಾನ್
ಈ ವೇಳೆ 11ನೇ ಓವರ್ ಬೌಲಿಂಗ್ ಮಾಡಲು ಬಂದ ನೂರ್ ಅಹ್ಮದ್ ಮೊದಲ ಬೌಲ್ ಹಾಕಿದರು. ಇದರ ನಂತರ ಇನ್ನೊಂದು ಬಾಲ್ ಹಾಕಿದರು. ಇದನ್ನು ಸಿಕ್ಸರ್ಗೆ ಬಾರಿಸಲು ಕ್ರೀಸ್ ಲೈನ್ ದಾಟಿ ಹೋದ ಸೂರ್ಯಕುಮಾರ್ ವಿಫಲವಾದರು. ಆದ್ರೆ ವಿಕೆಟ್ ಹಿಂದಿದ್ದ ಎಂ.ಎಸ್ ಧೋನಿ ಕೇವಲ 0.12 ಸೆಕೆಂಡ್ಸ್ (ಅಂದರೆ ಸೆಕೆಂಡ್ನಲ್ಲಿ 12 ಸೆಕೆಂಡ್ಸ್ ಎನ್ನಬಹುದು) ಒಳಗೆ ಸೂರ್ಯಕುಮಾರ್ ಅವರನ್ನು ಸ್ಟಂಪ್ ಔಟ್ ಮಾಡಿದ್ದಾರೆ. ಸೂರ್ಯ ಹಿಂದಿರುಗಿ ನೋಡದೇ ಬೇಸರಲ್ಲೇ ಪೆವಿಲಿಯನ್ ಅತ್ತ ನಡೆದರು.
ಸದ್ಯ ಎಂ.ಎಸ್ ಧೋನಿ ಸ್ಟಂಪ್ ಮಾಡಿರುವ ವಿಡಿಯೋ, ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಸೂಪರ್ ಫಾಸ್ಟ್ ಎಂದು ಕರೆಯುತ್ತಿದ್ದಾರೆ. ಇನ್ನು ಈ ಟೂರ್ನಿಯಲ್ಲಿ ಆಡುತ್ತಿರುವ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲೇ ಡಕೌಟ್ ಆಗಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 155 ರನ್ ಮಾತ್ರ ಗಳಿಸಿದೆ.
best in the business thala ms Dhoni
Stumping in 0.12 seconds 🥵#MSDhoni𓃵#CSKvsMIpic.twitter.com/MFZR0voZ7y
— 𝐧𝐨𝐛𝐛𝐢𝐞𝐬𝐪𝐮𝐞² (@RibelRana07) March 23, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ