ಚೆನ್ನೈನಲ್ಲಿ ಇಂದು MS ಧೋನಿ ನಿವೃತ್ತರಾಗುತ್ತಾರಾ? ಸ್ಟೇಡಿಯಂಗೆ ಮಗನ ಆಟ ನೋಡಲು ಬಂದ ತಂದೆ, ತಾಯಿ!

author-image
Bheemappa
Updated On
ಚೆನ್ನೈ​ಗೆ ಹ್ಯಾಟ್ರಿಕ್ ಮುಖಭಂಗ; IPL ಪಾಯಿಂಟ್ ಟೇಬಲ್​ನಲ್ಲಿ ಮಹತ್ವದ ಬದಲಾವಣೆ!
Advertisment
  • ಎಂ.ಎಸ್ ಧೋನಿ ಅವರ ತಂದೆ, ತಾಯಿಯ ಹೆಸರೇನು ಗೊತ್ತಾ?
  • ಗ್ಯಾಲರಿಯಲ್ಲಿ ಕುಳಿತು ಮಗನ ಆಟ ನೋಡುತ್ತಿರುವ ಪೋಷಕರು
  • ಧೋನಿ ತಂದೆ, ತಾಯಿ ಮೊದಲ ಬಾರಿಗೆ ಸ್ಟೇಡಿಯಂಗೆ ಬಂದಿದ್ದಾರಾ?

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ವಿಕೆಟ್ ಕೀಪಿಂಗ್​ನಲ್ಲಿ ಚಾಣಕ್ಷ, ಐಸಿಸಿ ಟ್ರೋಫಿಗಳ ಒಡೆಯ, ಚೆನ್ನೈನ ಮಾಜಿ ನಾಯಕ ಎಂ.ಎಸ್ ಧೋನಿ ಸದ್ಯ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಪಂದ್ಯವಾಡುತ್ತಿದ್ದಾರೆ. ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯವನ್ನು ವೀಕ್ಷಣೆ ಮಾಡಲು ಎಂ.ಎಸ್ ಧೋನಿ ಅವರ ತಂದೆ, ತಾಯಿ ಆಗಮಿಸಿದ್ದಾರೆ.

publive-image

ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ಅವರ ತಂದೆ ಪಾನ್ ಸಿಂಗ್ ಧೋನಿ ಹಾಗೂ ತಾಯಿ ದೇವಕಿ ದೇವಿ ಅವರು ಎಂ.ಎ ಚಿದಂಬರಂ ಸ್ಟೇಡಿಯಂಗೆ ಆಗಮಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನು ಗ್ಯಾಲರಿಯಲ್ಲಿ ಕುಳಿತು ವೀಕ್ಷಣೆ ಮಾಡುತ್ತಿದ್ದಾರೆ. ಧೋನಿ ಅವರು ಐಪಿಎಲ್ ಕ್ರಿಕೆಟ್​ ಆಡಲು ಪ್ರಾರಂಭ ಮಾಡಿದಾಗಿಂದ ಅಂದರೆ 2008 ರಿಂದ ಇದೇ ಮೊದಲ ಬಾರಿಗೆ ಸ್ಟೇಡಿಯಂಗೆ ಬಂದು ತಂದೆ, ತಾಯಿ ಮಗನ ಆಟ ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಧೋನಿ ಅವರ ತಂದೆ, ತಾಯಿ ಜೊತೆಗೆ ಪತ್ನಿ ಸಾಕ್ಷಿ ಸಿಂಗ್ ಹಾಗೂ ಮಗಳು ಝೀವಾ ಕೂಡ ಇದ್ದಾರೆ. ಅಜ್ಜ, ಅಜ್ಜಿ ಜೊತೆ ಮೊಮ್ಮಗಳು ಝೀವಾ ಖುಷಿ ಖುಷಿಯಾಗಿ ಮ್ಯಾಚ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈಲರ್ ಆಗಿವೆ. ಆದ್ರೆ ಅಭಿಮಾನಿಗಳು ಇದೇ ಧೋನಿ ಅವರ ಕೊನೆಯ ಪಂದ್ಯ ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಎಂ.ಎಸ್ ಧೋನಿ ಅಧಿಕೃತವಾಗಿ ಏನನ್ನು ಹೇಳಿಲ್ಲ.

publive-image

ಡೆಲ್ಲಿ ಕ್ಯಾಪಿಟಲ್ಸ್​ ಜೊತೆ ಐಪಿಎಲ್ ಪಂದ್ಯ ಆಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಗೆಲ್ಲಲು ಭರ್ಜರಿ ಹೋರಾಟ ಆರಂಭಿಸಿದೆ. ಪಂದ್ಯದ ವೇಳೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಧೋನಿ, ಕೆ.ಎಲ್ ರಾಹುಲ್ ಅವರ ಕ್ಯಾಚ್ ಹಿಡಿದು ಔಟ್ ಮಾಡಿದರು. ಇದರ ಜೊತೆಗೆ ಅಶುತೋಷ್ ಶರ್ಮಾರನ್ನು ರನ್​ ಔಟ್ ಮಾಡಿ ಧೋನಿ ಸಂಭ್ರಮಿಸಿದರು. ಡೆಲ್ಲಿ ನೀಡಿರುವ 184 ರನ್​ಗಳ ಟಾರ್ಗೆಟ್ ಹಿಂದೆ ಬಿದ್ದಿರುವ ಚೆನ್ನೈ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದೆ.

ಇದನ್ನೂ ಓದಿ:ಚೆನ್ನೈ ನೆಲದಲ್ಲಿ ಕನ್ನಡಿಗನ ಅಬ್ಬರ.. KL ರಾಹುಲ್ ಅರ್ಧಶತಕ, ಸಿಎಸ್​ಕೆಗೆ ದೊಡ್ಡ ಸವಾಲು

publive-image

ಇಂದಿನ ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಮೊದಲು ಎಂಎಸ್ ಧೋನಿ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ರುತುರಾಜ್ ಗಾಯಕ್ವಾಡ್ ಅವರ ಫಿಟ್ನೆಸ್ ಸರಿಯಾಗಿ ಇದ್ದಿದ್ದರಿಂದ ನಾಯಕನ ಸ್ಥಾನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯ ಗಾಯಕ್ವಾಡ್ ತಂಡವನ್ನು ಮುನ್ನಡೆಸುತ್ತಿದ್ದು ಧೋನಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment