ಐಪಿಎಲ್​​ಗೂ ಮುನ್ನವೇ ಧೋನಿ ಸೆನ್ಸೇಷನ್.. ಅನಿಮಲ್ ಅವತಾರ ಹೊಸ ಟ್ರೆಂಡ್​..!

author-image
Ganesh
Updated On
ಐಪಿಎಲ್​​ಗೂ ಮುನ್ನವೇ ಧೋನಿ ಸೆನ್ಸೇಷನ್.. ಅನಿಮಲ್ ಅವತಾರ ಹೊಸ ಟ್ರೆಂಡ್​..!
Advertisment
  • ಇಂಟರ್​ನೆಟ್​ನಲ್ಲಿ ಧೂಳ್​ ಎಬ್ಬಿಸಿದ ಧೋನಿ ಎಂಟ್ರಿ
  • ಒಂದು ವಿಡಿಯೋ.. ಸೋಷಿಯಲ್​ ಮೀಡಿಯಾ ಶೇಕ್​​
  • ಖಡಕ್​ ಅವತಾರ ಎತ್ತಿದ ಮಿಸ್ಟರ್​ ಕೂಲ್​ ಮಾಹಿ..!

ಧೋನಿ.. ಧೋನಿ.. ಧೋನಿ.. ಪ್ರತಿ ಸೀಸನ್​​ ಐಪಿಎಲ್​ಗೂ ಮುನ್ನ ಧೋನಿಯ ಜಪ ಜೋರಾಗಿರುತ್ತೆ. ಈ ಸೀಸನ್​​ ಆರಂಭಕ್ಕೂ ಮುನ್ನವೂ ಧೋನಿಯ ಫೀವರ್​ ಕ್ರಿಕೆಟ್​ ಲೋಕವನ್ನು ಆವರಿಸಿದೆ. ಐಪಿಎಲ್​ ಬಂತು ಅಂದ್ರೆ ಧೋನಿ ಟ್ರೆಂಡಿಂಗ್​ನಲ್ಲಿರೋದು ಕಾಮನ್​​.

ಧೋನಿಯ ರಗಢ್​​ ಲುಕ್..!​​

ಚೆನ್ನೈ ಸೂಪರ್​​ ಕಿಂಗ್ಸ್​​ ತಂಡಕ್ಕೆ ಧೋನಿ ಎಂಟ್ರಿ ಕೊಟ್ಟಿದ್ರಿಂದ ಹಿಡಿದು ಅಭ್ಯಾಸ ನಡೆಸಿದ್ದು. ಸಿಕ್ಸರ್​ ಸಿಡಿಸಿದ್ದು, ಯುವ ಆಟಗಾರರಿಗೆ ಪಾಠ ಮಾಡಿದ್ದು. ಹೀಗೆ ಧೋನಿಯ ಒಂದಿಲ್ಲೊಂದು ವಿಡಿಯೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ಸೆನ್ಸೇಷನ್​ ಸೃಷ್ಟಿಸ್ತಿವೆ. ಆದ್ರೀಗ ಆಫ್​ ದ ಫೀಲ್ಡ್​ನ ಒಂದು ವಿಡಿಯೋ ಸಖತ್​ ಸೌಂಡ್​ ಮಾಡ್ತಿದೆ. ಧೋನಿಯ ಖಡಕ್​ ಅವತಾರ ಕಂಡು ಫ್ಯಾನ್ಸ್​​, ಫುಲ್​ ಥ್ರಿಲ್​ ಆಗಿದ್ದಾರೆ. ಈ ಬಾರಿ ಅನಿಮಲ್​ ಥೀಮ್​ನಲ್ಲಿ ಧೋನಿಯನ್ನ ನೋಡಿರೋ ಫ್ಯಾನ್ಸ್​ ಈ ಸಂದೀಪ್​ ರೆಡ್ಡಿ​ ವಂಗಾ ಆ ರಣ್​ಬೀರ್​ ಕಪೂರ್​ ಧೋನಿಯನ್ನೇ ಕಾಸ್ಟ್​ ಮಾಡಬಹುದಿತ್ತು ಅಂತಿದ್ದಾರೆ. ಧೋನಿ ಆ್ಯಕ್ಟಿಂಗ್​ಗೆ ಸಂದೀಪ್​ ರೆಡ್ಡಿ ಕೂಡ ಸೆಲ್ಯೂಟ್​​ ಹೊಡೆದಿದ್ದಾರೆ.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್​ ಕರೆ ತರಲು NASA, SpaceX ಎಷ್ಟು ಕೋಟಿ ಖರ್ಚು ಮಾಡಿವೆ..?

ಅಂದ್ಹಾಗೆ ಅದೊಂದು ಖಾಸಗಿ ಕಂಪನಿಯ ಆ್ಯಡ್​ ಶೂಟ್​. ಈ ಮೋಟಾರ್​ ಆ್ಯಡ್​ ಶೂಟ್​​ನಲ್ಲಿ ಧೋನಿ ಬಣ್ಣ ಹಚ್ಚಿದ್ರೆ, ಸಂದೀಪ್​ ರೆಡ್ಡಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಸಂದೀಪ್​​ ರೆಡ್ಡಿ ಲೆಟೆಸ್ಟ್​ ಮೂವಿ ಬಂತಲ್ಲ ಅನಿಮಲ್ ಅಂತಾ.​ ಅದೇ ಥೀಮ್​ನಲ್ಲಿ ಶೂಟ್​ ಮಾಡಿರೋ ಈ ವಿಡಿಯೋ ನಿನ್ನೆ ಮಟಮಟ ಮಧ್ಯಾಹ್ನ ರಿಲೀಸ್​ ಆಗಿದೆ. ರಿಲೀಸ್​ ಆದ ಕ್ಷಣದಿಂದ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದೆ. ಮಾಹಿಯ ಲುಕ್​​ಗೆ ಫ್ಯಾನ್ಸ್​ ಕ್ಲೀನ್​ಬೋಲ್ಡ್​ ಆಗಿದ್ದಾರೆ.

ಜಾಹೀರಾತುದಾರರಿಗೆ ಧೋನಿ ಬೇಕೆ, ಬೇಕು

ಧೋನಿಯನ್ನ ಜಾಹೀರಾತುದಾರರ ಡಾರ್ಲಿಂಗ್​ ಅಂತಾ ಸುಮ್ಮನೆ ಕರಿಯಲ್ಲ. ಧೋನಿ ಆ್ಯಡ್​ನಲ್ಲಿ ಕಾಣಿಸಿಕೊಂಡ್ರೆ ಸಾಕು ಅದು ಸೂಪರ್​ ಹಿಟ್​ ಪಕ್ಕಾ. ವಿಶ್ವ ಗೆದ್ದ ಸಾಮ್ರಾಟ ಧೋನಿ ಅಭಿಮಾನಿಗಳ ಬಳಗ ಅಂತದ್ದು. ಧೋನಿ ಅಂದ್ರೆ ಫ್ಯಾನ್ಸ್​ ವಲಯದಲ್ಲಿ ಪ್ರೀತಿ, ಅಭಿಮಾನ ನೆಕ್ಸ್ಟ್​​ ಲೆವೆಲ್​ನಲ್ಲಿದೆ. 2019ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. ಸದ್ಯ ಫೀಲ್ಡ್​ನಲ್ಲಿ ಕಾಣಿಸಿಕೊಳ್ತಾ ಇರೋದು 3 ತಿಂಗಳು ಮಾತ್ರ. ಧೋನಿಗಿರೋ ಕ್ರೇಜ್​ ಕಿಂಚಿತ್ತೂ ಕಡಿಮೆಯಾಗಿಲ್ಲ. ಸಿಎಸ್​ಕೆನ ಹೋಮ್​​​ಗ್ರೌಂಡ್​ ಚೆನ್ನೈನ ಬಿಟ್ ​ಬಿಟಿ, ದೇಶದ ಉದ್ದಗಲದಲ್ಲಿ ಯಾವುದೇ ಮೈದಾನದಲ್ಲಿ ಸಿಎಸ್​ಕೆ ತಂಡ ಪಂದ್ಯವನ್ನಾಡಲಿ ಅಲ್ಲಿ ಕೇಳೋದು ಧೋನಿ..ಧೋನಿ ಎಂಬ ಕಹಳೆ ಮಾತ್ರ.

ಮೊಳಗಲಿದೆ ಧೋನಿ, ಧೋನಿ ಕಹಳೆ

ಕಳೆದ 3 ವರ್ಷಗಳಿಂದ ಚೆನ್ನೈ ಸೂಪರ್​ ಕಿಂಗ್ಸ್​​ ತಂಡ ಯಾವುದೇ ಸ್ಟೇಡಿಯಂನಲ್ಲಿ ಪಂದ್ಯಗಳನ್ನಾಡಲಿ ಆ ಸ್ಟೇಡಿಯಂ ಫುಲ್​ ಯೆಲ್ಲೋ ಮಯವಾಗ್ತಿದೆ. ಧೋನಿ, ಧೋನಿ ಎಂಬ ಕೂಗು ಮಾರ್ಧನಿಸುತ್ತೆ. ಈ ಐಪಿಎಲ್​​ ಕೂಡ ಇಂತಾ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗೋದ್ರಲ್ಲಿ ಡೌಟೇ ಇಲ್ಲ. ಧೋನಿ ಅನ್ನೋದು ಬರಿ ಹೆಸರಲ್ಲ. ಕ್ರಿಕೆಟ್​ ಪ್ರೇಮಿಗಳ ಎಮೋಷನ್​.

ಇದನ್ನೂ ಓದಿ: ಆರ್​​ಸಿಬಿಗೆ 3 ಸ್ಟಾರ್​ಗಳು ರೀ ಎಂಟ್ರಿ.. ಇಟ್ಟ ನಂಬಿಕೆ ಉಳಿಸಿಕೊಳ್ಳೋದೇ ದೊಡ್ಡ ಚಾಲೆಂಜ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment