/newsfirstlive-kannada/media/post_attachments/wp-content/uploads/2024/12/MS_DONI.jpg)
ವಿಶ್ವದದ್ಯಾಂತ ಕ್ರಿಸ್ಮಸ್ ಅನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಸಾಂತಾ ಕ್ಲಾಸ್ ಡ್ರೆಸ್ನಲ್ಲಿ ಕೆಲವರು ಮಕ್ಕಳು, ಜನರ ಜೊತೆ ಖುಷಿ ಖುಷಿಯಿಂದ ಈ ದಿನ ಕಳೆಯುತ್ತಿದ್ದಾರೆ. ಇದೇ ರೀತಿ ಟೀಮ್ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿಯವರು ಸಾಂತಾ ಕ್ಲಾಸ್ ಡ್ರೆಸ್ ಧರಿಸಿ ಕುಟುಂಬಕ್ಕೆ ಸರ್ಪ್ರೈಸ್ ನೀಡಿದ್ದಾರೆ.
ಭಾರತದ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿಯವರು ತಮ್ಮ ಕುಟುಂಬದ ಜೊತೆ ಕ್ರಿಸ್ಮಸ್ ಅನ್ನು ಸೆಲೆಬ್ರೆಷನ್ ಮಾಡಿದ್ದಾರೆ. ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬಳಿಕ ಬಹುತೇಕ ಸಮಯವನ್ನು ಎಂ.ಎಸ್ ಧೋನಿ ತಮ್ಮ ಕುಟುಂಬದ ಜೊತೆ ಕಳೆಯುತ್ತಿದ್ದಾರೆ. ಸದ್ಯ ಧೋನಿ ಕ್ರಿಸ್ಮಸ್ ದಿನ ಸಾಂತಾ ಕ್ಲಾಸ್ ಬಟ್ಟೆಗಳನ್ನು ಹಾಕಿಕೊಂಡು ಹೆಂಡತಿ ಸಾಕ್ಷಿ, ಮಗಳು ಝೀವಾಗೆ ಸರ್ಪ್ರೈಸ್ ನೀಡಿದ್ದಾರೆ.
ಧೋನಿ ಸಾಂತಾ ಕ್ಲಾಸ್ ರೀತಿ ಡ್ರೆಸ್ ಧರಿಸಿ ಬಂದಾಗ ಮೊದಲು ಹೆಂಡತಿ, ಮಗಳು ಗುರುತಿಸಿಲ್ಲ. ಯಾರೋ ಆಗಿರಬಹುದು ಬಿಡು ಎಂದು ತಿಳಿದಿದ್ದರು. ಆದರೆ ಬಳಿಕ ಈ ವಿಷ್ಯ ಗೊತ್ತಾದ ಮೇಲೆ ತಬ್ಬಿಕೊಂಡು ಖುಷಿ ಪಟ್ಟಿದ್ದಾರೆ. ಧೋನಿ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೆಷನ್ ಮಾಡಲಾಗಿದ್ದು ಇದರಲ್ಲಿ ಬಾಲಿವುಡ್ ಸ್ಟಾರ್ ನಟಿ ಕೃತಿ ಸನೋನ್ ಸೇರಿ ಇನ್ನು ಕೆಲವರು ಭಾಗವಹಿಸಿದ್ದಾರೆ.
ಇದನ್ನೂ ಓದಿ:ಬಾಕ್ಸಿಂಗ್ ಡೇ ಟೆಸ್ಟ್ ಎಂದರೇನು.. Ind vs Aus 4ನೇ ಪಂದ್ಯಕ್ಕೆ ಹೀಗೆ ಕರೆಯೋದು ಯಾಕೆ..?
ಈ ಸಂಬಂಧದ ಫೋಟೋಗಳನ್ನು ಸಾಕ್ಷಿ ಧೋನಿಯವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು ಧೋನಿಯವರನ್ನು ಸಾಂತಾ ಕ್ಲಾಸ್ನಲ್ಲಿ ನೋಡಿ ಆಭಿಮಾನಿಗಳು ಕೂಡ ಫುಲ್ ಶಾಕ್ ಆಗಿದ್ದಾರೆ. ಬಳಿಕ ಖುಷಿಯಿಂದ ಹ್ಯಾಪಿ ಕ್ರಿಸ್ಮಸ್ ಎಂದು ವಿಶ್ ಕೂಡ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ