newsfirstkannada.com

ವಿಶ್ವಕಪ್-2011ರಲ್ಲಿ ಧೋನಿ ಬಳಸಿದ್ದ ಬ್ಯಾಟ್ ಲಕ್ಷ ಲಕ್ಷ ರೂ.ಗೆ ಮಾರಾಟ; 10, 20 ಲಕ್ಷ ರೂ. ಅಲ್ಲವೇ ಅಲ್ಲ..!

Share :

Published August 12, 2023 at 2:35pm

  2011ರಲ್ಲಿ ಭಾರತಕ್ಕೆ ODI ವಿಶ್ವಕಪ್ ಒಲಿದಿತ್ತು

  ಫೈನಲ್​ನಲ್ಲಿ ಧೋನಿ ಈ ಬ್ಯಾಟ್​ನಿಂದ ಎಷ್ಟು ರನ್ ಸಿಡಿಸಿದ್ದರು?

  ಧೋನಿ ಬ್ಯಾಟ್ ಖರೀದಿಸಿದ ಕಂಪನಿ ಯಾವುದು ಗೊತ್ತಾ?

2011ರ ಏಕದಿನ ವಿಶ್ವಕಪ್​​ನಲ್ಲಿ ಎಂ.ಎಸ್ ಧೋನಿ ಬಳಸಿದ ಬ್ಯಾಟ್​ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಲಂಡನ್​​ನಲ್ಲಿ ನಡೆದ ಚಾರಿಟಿ ಕಾರ್ಯಕ್ರಮವೊಂದರಲ್ಲಿ ಧೋನಿ ಅವರ ಬ್ಯಾಟ್​​ ಹರಾಜು ಮಾಡಲಾಗಿದೆ.

ಈ ಹರಾಜಿನಲ್ಲಿ ಪಾಲ್ಗೊಂಡಿದ್ದ ಆರ್​​​​.ಕೆ ಗ್ಲೋಬಲ್​ ಶೇರ್ಸ್​ ಆ್ಯಂಡ್​ ಸೆಕ್ಯೂರಿಟಿ ಲಿಮಿಟೆಡ್​​ ಕಂಪನಿಯು ಬ್ಯಾಟನ್ನು 83 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಭಾರಿ ಬೆಲೆಗೆ ಮಾರಾಟವಾದ ಬ್ಯಾಟ್ ಹಣವನ್ನ ಧೋನಿ ಪತ್ನಿ ಸಾಕ್ಷಿ ಫೌಂಡೇಶನ್​​ಗೆ ಬಳಸಲಿದ್ದಾರೆಂದು ವರದಿಯಾಗಿದೆ.

ಏಪ್ರಿಲ್ 2, 2011ರಂದು ವಿಶ್ವಕಪ್​ ಫೈನಲ್ ಪಂದ್ಯ ನಡೆದಿತ್ತು. ಈ ಪ್ರತಿಷ್ಠಿತ ಫೈನಲ್ ಪಂದ್ಯವನ್ನು ಭಾರತ 6 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟ್​ ಮಾಡಿದ್ದ ಶ್ರೀಲಂಕಾ 6 ವಿಕೆಟ್ ಕಳೆದುಕೊಂಡು 274 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತವು 48.2 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 277ರನ್​ಗಳಿಸಿ ಭಾರತ ಐತಿಹಾಸಿಕ ಸಾಧನೆ ಮಾಡಿತ್ತು. ನಾಯಕ ಧೋನಿ ಧೋನಿ ಬ್ಯಾಟ್​ನಿಂದ ಬರೋಬ್ಬರಿ 91 ರನ್​​ ಬಂದಿತ್ತು. 115.8 ಸ್ಟ್ರೈಕ್​ರೇಟ್​​ನಲ್ಲಿ ಆಡಿದ್ದ ಧೋನಿ 2 ಸಿಕ್ಸರ್​, 8 ಬೌಂಡರಿ ಬಾರಿಸಿದ್ದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್-2011ರಲ್ಲಿ ಧೋನಿ ಬಳಸಿದ್ದ ಬ್ಯಾಟ್ ಲಕ್ಷ ಲಕ್ಷ ರೂ.ಗೆ ಮಾರಾಟ; 10, 20 ಲಕ್ಷ ರೂ. ಅಲ್ಲವೇ ಅಲ್ಲ..!

https://newsfirstlive.com/wp-content/uploads/2023/08/DHONI-1.jpg

Load More