newsfirstkannada.com

IPL​​ಗೂ ಮೊದಲೇ ಧೋನಿ ಬ್ಯಾಟ್​ ಸ್ಪಾನ್ಸರ್ ಚೇಂಜ್.. ಸ್ನೇಹಿತನಿಗಾಗಿ ಹೀಗೆ ಮಾಡಿದ್ರಾ ಕೂಲ್ ಕ್ಯಾಪ್ಟನ್?

Share :

Published February 9, 2024 at 1:20pm

    ವಿದಾಯ ಹೇಳ್ತಾರೋ, ಇಲ್ವೋ ಮಿಲಿಯನ್​ ಡಾಲರ್​ ಪ್ರಶ್ನೆ

    ಬೆಳೆದು ಬಂದ ಹಾದಿಯನ್ನ ಮರೆಯದಿರೋ ಪ್ಲೇಯರ್ ಧೋನಿ

    ಧೋನಿ ಬ್ಯಾಟ್​ ಮೇಲಿನ ಸ್ಟಿಕ್ಕರ್​ ಬದಲಿಸಲು ಇದೆ ಕಾರಣ

ಎಷ್ಟೇ ಎತ್ತರಕ್ಕೆ ಬೆಳೆದ್ರೂ ಬೆಳೆದ ಬಂದ ಹಾದಿಯನ್ನ ಮರಿಬಾರ್ದು ಅನ್ನೋ ಮಾತಿದೆ. ಈ ಮಾತನ್ನ ಚಾಚೂ ತಪ್ಪಿಸದೇ ಪಾಲಿಸಿದ ಕ್ರಿಕೆಟಿಗ ಎಮ್​.ಎಸ್​ ಧೋನಿ. ಮುಂಬರೋ ಐಪಿಎಲ್​ಗೆ ​ಸಜ್ಜಾಗ್ತಿರೋ ಮಾಹಿ, ಹೊಸ ಹೆಜ್ಜೆಯನ್ನಿಟ್ಟಿದ್ದಾರೆ. ಐಪಿಎಲ್​ ಅಖಾಡದಲ್ಲಿ ಜೀವದ ಗೆಳೆಯನಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಅಷ್ಟಕ್ಕೂ ಚೆನ್ನೈ ಕ್ಯಾಪ್ಟನ್​​ ತೆಗೆದುಕೊಂಡಿರೋ ಆ ನಿರ್ಧಾರ ಏನು, ಆ ಜೀವದ ಗೆಳೆಯ ಯಾರು?.

ಧೋನಿ ದಿ ಅನ್​ಟೋಲ್ಡ್​​ ಸ್ಟೋರಿ ಚಿತ್ರದ ಈ ಸೀನ್​ ನಿಮಗೆ ನೆನಪಿರಬಹುದು. ಧೋನಿ ಆಗಿನ್ನೂ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿರಲಿಲ್ಲ. ಮಿಡಲ್​ ಕ್ಲಾಸ್​ ಫ್ಯಾಮಿಲಿಯ ಧೋನಿ ಆರ್ಥಿಕವಾಗಿ ತುಂಬಾ ಸಮಸ್ಯೆ ಎದುರಿಸ್ತಾ ಇದ್ದ ದಿನಗಳವು. ಆಗ ಧೋನಿಗಾಗಿ ಜೀವದ ಗೆಳೆಯ ಪರಮ್​ಜಿತ್​ ಸಿಂಗ್​ ಕಿಟ್​​ ಸ್ಪಾನ್ಸರ್​​​​ಗಾಗಿ​ ಹುಡುಕಾಟ ಆರಂಭಿಸಿದ್ದ.

ಗೆಳೆಯ ಬೆಳೆಯಬೇಕು ಅನ್ನೋ ಆಸೆ.!

ಅಂದು ಧೋನಿಗಾಗಿ ಕಿಟ್​​​​​ ಸ್ಪಾನ್ಸರ್​​​​ಗಾಗಿ​​ ಹುಡುಕಾಟ ನಡೆಸಿದ ಗೆಳೆಯನಿಗೆ ಡೀಲರ್​​ ಕೇಳಿದ ನೇರವಾದ ಪ್ರಶ್ನೆ. ಇದ್ರಲ್ಲಿ ನಿನ್ನ ಸ್ವಾರ್ಥ ಏನಿದೆ?. ನಿಜ ಹೇಳಬೇಕಂದ್ರೆ, ಅಂದು ಸ್ಪಾನ್ಸರ್​ಗಳಿಗಾಗಿ ಅಂಗಲಾಚಿದ್ದ ಧೋನಿಯ ಗೆಳೆಯನಲ್ಲಿದ್ದಿದ್ದು ಸ್ವಾರ್ಥವಲ್ಲ, ಪ್ರೀತಿ. ಗೆಳೆಯ ಬೆಳೆಯಬೇಕು ಅನ್ನೋ ಆಸೆ.

ಕೇವಲ ಸ್ಪಾನ್ಸರ್​ ಶಿಪ್​ ವಿಚಾರವಾಗಿ ಮಾತ್ರವಲ್ಲ, ಕರಿಯರ್​ ಆರಂಭದ ದಿನಗಳಲ್ಲಿ ಕಷ್ಟ ಬಂದಾಗಲೆಲ್ಲ ಧೋನಿ ಜೊತೆ ನಿಂತಿದ್ದು ಗೆಳೆಯರೇ. ಅದ್ರಲ್ಲೂ, ಪ್ರೈಮ್​ ಸ್ಪೋರ್ಟ್ಸ್​ ಅನ್ನೋ ಚಿಕ್ಕ ಸ್ಪೋರ್ಟ್ಸ್​ ಅಂಗಡಿಯನ್ನಿಟ್ಟುಕೊಂಡಿದ್ದ ಪರಮ್​ಜಿತ್​ ಸಿಂಗ್,​ ಧೋನಿ ದೊಡ್ಡ ಸ್ಟಾರ್​ ಆಗಬೇಕು ಎಂದು ಹಂಬಲಿಸಿದ ವ್ಯಕ್ತಿ. ಧೋನಿಯನ್ನ ಕಷ್ಟವನ್ನ ಅರ್ಥ ಮಾಡಿದ್ದ ಈ ಪರಮ್​​ಜಿತ್​ ಸಿಂಗ್​, ಒಂದು ಸ್ಪಾನ್ಸರ್​ ತರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಕೊನೆಗೂ ಬಿಡಲಿಲ್ಲ, ಡೊಮೆಸ್ಟಿಕ್​ ಕ್ರಿಕೆಟ್​ಗೆ ಕಾಲಿಡೋಕೆ ಮುನ್ನವೇ ಸ್ಪಾನ್ಸರ್​ನ ಹುಡುಕಿ ತಂದೇ ಬಿಟ್ರು.

ಧೋನಿಯ ಬಯೋಪಿಕ್​ನಲ್ಲಿ​ ನೀವು ಏನು ನೋಡಿದ್ದೀರೋ ಅದೆಲ್ಲವೂ ಸತ್ಯ ಘಟನೆಗಳೇ.! ಅಂದು ಸ್ಪಾನ್ಸರ್​ ಸಿಕ್ಕ ಬಳಿಕ ದೋನಿ, ಪರಮ್​ಜಿತ್​ ಅಂಗಡಿಗೆ ತೆರಳಿ ಭಾವುಕರಾಗಿ ತಬ್ಬಿಕೊಂಡು ಧನ್ಯವಾದ ಹೇಳಿದ್ರು. ಇದೀಗ ಕಷ್ಟದಲ್ಲಿ ಕೈ ಹಿಡಿದ ಗೆಳೆಯನಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ.

ಗೆಳೆಯನಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾದ ಮಾಹಿ.!

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 17ಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಮಾರ್ಚ್​​ ಕೊನೆ ವಾರದಲ್ಲಿ ಐಪಿಎಲ್​ ಹಂಗಾಮ ಆರಂಭವಾಗೋ ನಿರೀಕ್ಷೆಯಿದೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ಧೋನಿ ಕೂಡ ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ಇದೇ ಐಪಿಎಲ್​ನಲ್ಲಿ ಗೆಳೆಯನಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ.

ಮಾಹಿ ಬ್ಯಾಟ್​ ಮೇಲೆ ಪ್ರೈಮ್​ ಸ್ಪೋರ್ಟ್ಸ್​ ಸ್ಟಿಕ್ಕರ್​.?

ಕಳೆದ ಐಪಿಎಲ್​ ಟೂರ್ನಿಯಲ್ಲಿ ಧೋನಿ ಬೇರೆ ಬೇರೆ ಸ್ಟಿಕರ್​ಗಳಿದ್ದ ಬ್ಯಾಟ್​ ಹಿಡಿದು ಅಂಗಳಕ್ಕಿಳಿದಿದ್ದು ನಿಮಗೆ ನೆನಪಿರಬಹುದು. ಕರಿಯರ್​ ಆರಂಭದಿಂದ ಈವರೆಗೆ ತಮ್ಮಗೆ ಸ್ಪಾನ್ಸರ್​​ ಮಾಡಿದವರಿಗೆ ಗೌರವ ಸೂಚಿಸಲು ಧೋನಿ ಹಾಗೇ ಮಾಡಿದ್ರು. ಇದೀಗ ಈ ಬಾರಿಯೂ ಧೋನಿ ಬ್ಯಾಟ್​ ಮೇಲಿನ ಸ್ಟಿಕ್ಕರ್​ ಬದಲಾಗಲಿದೆ. ಈ ಬಾರಿ ಧೋನಿ ಅಂದು ಬ್ಯಾಟ್​​ ಸ್ಪಾನ್ಸರ್​​ ಹುಡುಕಿ ತಂದು ಕೊಟ್ಟ ಪರಮ್​ಜಿತ್ ಸಿಂಗ್​ರ ಅಂಗಡಿಯ ಹೆಸರಾದ ಪ್ರೈಮ್​​ ಸ್ಪೋರ್ಟ್ಸ್​ ಸ್ಟಿಕ್ಕರ್​ ಹೊಂದಿರೋ ಬ್ಯಾಟ್​ನಲ್ಲಿ ಆಡಲು ಸಜ್ಜಾಗಿದ್ದಾರೆ.

ಎಲ್ಲಿಂದ ಆರಂಭವೋ, ಅಲ್ಲೇ ಅಂತ್ಯ.?

ಐಪಿಎಲ್​ ಟೂರ್ನಿಗೆ ಅಭ್ಯಾಸ ಆರಂಭಿಸಿರುವ ಧೋನಿ, ನೆಟ್ಸ್​ನಲ್ಲಿ ಪ್ರೈಮ್​ ಸ್ಪೋರ್ಟ್ಸ್ ಸ್ಟಿಕ್ಕರ್​ನ ಬ್ಯಾಟ್​ನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್​ ಟೂರ್ನಿ ಧೋನಿ ಪಾಲಿನ ಕೊನೆಯ ಟೂರ್ನಿ ಎನ್ನಲಾಗ್ತಿದೆ. ಹೀಗಾಗಿ, ಅಂದು ಕರಿಯರ್​ ಆರಂಭದಲ್ಲಿ ಹೆಗಲಾಗಿ ನಿಂತ ಗೆಳೆಯನಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಎಲ್ಲಿಂದ ಆರಂಭವಾಗಿತ್ತೋ.. ಅಲ್ಲೇ ಅಂತ್ಯಗೊಳಿಸೋದು ಮಾಹಿಯ ಪ್ಲಾನ್​.

ಧೋನಿ ನಡೆಯನ್ನ ಯಾರೂ ಪ್ರಿಡಿಕ್ಟ್​ ಮಾಡೋಕೆ ಆಗಲ್ಲ. ಹೀಗಾಗಿ ವಿದಾಯ ಹೇಳ್ತಾರೋ, ಇಲ್ವೋ ಅನ್ನೋದು ಸದ್ಯಕ್ಕೆ ಮಿಲಿಯನ್​ ಡಾಲರ್​ ಪ್ರಶ್ನೆ. ಆದ್ರೆ, ಗೆಳೆಯನಿಗೆ ಗೌರವ ಸಲ್ಲಿಸಲು ಮುಂದಾಗಿರುವ ನಡೆ ನಿಜಕ್ಕೂ ಮೆಚ್ಚುವಂತದ್ದು. ಅದ್ಕೆ ನಾವು ಆರಂಭದಲ್ಲೇ ಹೇಳಿದ್ದು, ಧೋನಿ ಬೆಳೆದು ಬಂದ ಹಾದಿಯನ್ನ ಮರೆಯದೆ ಇರೋ ಕ್ರಿಕೆಟಿಗ ಅಂತಾ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPL​​ಗೂ ಮೊದಲೇ ಧೋನಿ ಬ್ಯಾಟ್​ ಸ್ಪಾನ್ಸರ್ ಚೇಂಜ್.. ಸ್ನೇಹಿತನಿಗಾಗಿ ಹೀಗೆ ಮಾಡಿದ್ರಾ ಕೂಲ್ ಕ್ಯಾಪ್ಟನ್?

https://newsfirstlive.com/wp-content/uploads/2024/02/MS_DHONI_BAT_2.jpg

Load More