/newsfirstlive-kannada/media/post_attachments/wp-content/uploads/2024/11/SANJU_FATHER.jpg)
ಸಂಜು ಸ್ಯಾಮ್ಸನ್ ಸದ್ಯ ಇಂಡಿಯನ್ ಕ್ರಿಕೆಟ್ ಲೋಕದ ಹಾಟ್ ಟಾಫಿಕ್. ಟೀಮ್ ಇಂಡಿಯಾ ಟಿ20 ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುವ ಸರ್ಕಸ್ ನಡೆಸುತ್ತಿದ್ದಾರೆ. ಆದ್ರೆ, ಈ ಹೊತ್ತಿನಲ್ಲೇ ಸಂಜು ಸ್ಯಾಮ್ಸನ್ ತಂದೆ ಆಡಿದ ಒಂದು ಮಾತು ಕ್ರಿಕೆಟ್ ಲೋಕದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸಂಜು ತಂದೆ ಹೇಳಿದ ಸ್ಫೋಟಕ ಹೇಳಿಕೆ ಏನು?.
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಸಂಜು ಸ್ಯಾಮ್ಸನ್ ಸದ್ಯ ಸೌತ್ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಸದ್ಯ ಸೌತ್ ಆಫ್ರಿಕಾ ಎದುರಿನ ಮೊದಲ ಟಿ20ಯಲ್ಲಿ ಪವರ್ ಫುಲ್ ಪರ್ಫಾಮೆನ್ಸ್ ನೀಡಿದ್ದ ಸಂಜು, ಕಳೆದ 2 ಪಂದ್ಯಗಳಲ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿದ್ದಾರೆ. ಡಕೌಟ್ ಹೊರತಾಗಿ ಕಳೆದ 4 ಇನ್ನಿಂಗ್ಸ್ಗಳಲ್ಲಿ ಸಂಜು ಸಿಡಿಸಿರುವ 2 ಶತಕಗಳು ಕ್ರಿಕೆಟ್ ಕರಿಯರ್ಗೆ ಮರು ಜೀವ ನೀಡಿದೆ. ಆದ್ರೆ, ಇದೇ ವೇಳೆ ಸಂಜು ತಂದೆ ವಿಶ್ವನಾಥ್ ನೀಡಿರುವ ಹೇಳಿಕೆ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: ಕ್ಯಾಪ್ಟನ್ ಇಲ್ಲದೇ ಟೀಮ್ ಇಂಡಿಯಾ ಆಟಗಾರರ ಸಮರಾಭ್ಯಾಸ.. ರೋಹಿತ್ ಎಲ್ಲಿದ್ದಾರೆ?
ನನ್ನ ಮಗನ 10 ವರ್ಷಗಳ ವೃತ್ತಿ ಜೀವನವನ್ನ 3-4 ಮಂದಿ ಹಾಳು ಮಾಡಿದ್ದಾರೆ. ಧೋನಿ, ವಿರಾಟ್, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ನನ್ನ ಮಗನ 10 ವರ್ಷಗಳನ್ನ ಹಾಳು ಮಾಡಿದರು. ನನ್ನ ಮಗನನ್ನ ನೋಯಿಸಿದ್ದಾರೆ. ಇದೀಗ ನನ್ನ ಮಗ ಚೇತರಿಸಿಕೊಂಡಿದ್ದಾನೆ.
ವಿಶ್ವನಾಥ್, ಸಂಜು ತಂದೆ
ಸಂಜು ಸ್ಯಾಮ್ಸನ್ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿದ ಬಳಿಕ ತಂದೆ ವಿಶ್ವನಾಥ್, ನೀಡಿರುವ ಹೇಳಿಕೆಯಲ್ಲಿ ನೋವಿದೆ. ಮಗನ ಮೇಲಿನ ಪ್ರೀತಿಯ ವಾತ್ಸಲ್ಯವೂ ಅಡಗಿದೆ. ಆದ್ರೆ, ಈ ಮಾಜಿ ನಾಯಕರಿಂದಲೇ ಸಂಜು ಕರಿಯರ್ ಹಾಳಾಯ್ತಾ, ತಂದೆ ಆರೋಪದಲ್ಲಿ ನಿಜ ಅಂಶ ಇದೆಯಾ ಎಂದು ಕೆದಕುತ್ತಾ ಹೋದ್ರೆ, ಸತ್ಯದ ಜೊತೆ ಮಿಥ್ಯ ಕೂಡ ಅಡಗಿದೆ.
5 ವರ್ಷದ ಬಳಿಕ ಕಮ್ಬ್ಯಾಕ್.. ಚಾನ್ಸ್.. ಬೆಂಚ್.. ಹೈಡ್ರಾಮಾ.!
ದೇಶಿ ಕ್ರಿಕೆಟ್ ಹಾಗೂ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸಂಜು, 2015ರ ಜಿಂಬಾಬ್ವೆ ಪ್ರವಾಸದಲ್ಲಿ ಚಾನ್ಸ್ ಗಿಟ್ಟಿಸಿದ್ದರು. 2ನೇ ಟಿ20 ಪಂದ್ಯದಲ್ಲಿ ಧೋನಿ ನಾಯಕತ್ವದಲ್ಲಿ ಡೆಬ್ಯು ಮಾಡಿದ್ದ 21ರ ಸಂಜು, ಮೊದಲ ಪಂದ್ಯದಲ್ಲಿ 24 ಎಸೆತ ಎದುರಿಸಿ ಜಸ್ಟ್ 17 ರನ್ ಗಳಿಸಿದ್ದರು. ಪರಿಣಾಮ ಮುಂದಿನ ಸಿರೀಸ್ನಿಂದ ಕಿಕ್ಔಟ್ ಆಗಿದ್ದರು.
2015ರಲ್ಲಿ ಟೀಮ್ ಇಂಡಿಯಾದಿಂದ ಹೊರಬಿದ್ದ ಸಂಜು, ಮತ್ತೆ ಟೀಮ್ ಇಂಡಿಯಾಗೆ ವಾಪಸ್ ಆಗಿದ್ದು 2019ರ ಬಾಂಗ್ಲಾ ಸಿರೀಸ್ನಲ್ಲಿ. ಆದ್ರೆ, ಈ ಸಿರೀಸ್ ಪೂರ್ತಿ ಬೆಂಚ್ ಕಾದಿದ್ದ ಸಂಜು, ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಕ್ಕಿದ್ದು 2020ರ ಜನರಿಯಲ್ಲಿ. ಅಂದು ಕೊಹ್ಲಿ ನಾಯಕತ್ವದಲ್ಲಿ ಲಂಕಾ ಎದುರು ಕಣಕ್ಕಿಳಿದರು. ಆದ್ರೆ, ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಲಿಲ್ಲ. ಅದಾಗ್ಯೂ ಸಂಜುಗೆ, ನ್ಯೂಜಿಲೆಂಡ್ ಪ್ರವಾಸದ ಟಿಕೆಟ್ ಸಿಕ್ಕಿತ್ತು. ಆ ಪ್ರವಾಸದ ಕೊನೆ 2 ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸಂಜು ಸಿಕ್ಕ ಅವಕಾಶ ವೇಸ್ಟ್ ಮಾಡಿದರು. ಕೇವಲ ರನ್ 10ಗಳಿಸಿದರು. ಅದಾದ ಬಳಿಕ 2020ರಿಂದ 2023ರ ಅಂತ್ಯದ ತನಕ ನಡೆದಿದ್ದು ಚಾನ್ಸ್.. ಡ್ರಾಪ್.. ಬೆಂಚ್ ಎಂಬ ಹೈಡ್ರಾಮಾ.
2020-23ರ ಅವಧಿಯಲ್ಲಿ ಸಂಜು
2020ರಿಂದ 2023ರ ಅವಧಿಯಲ್ಲಿ 23 ಟಿ20 ಪಂದ್ಯಗಳನ್ನಾಡಿದ ಸಂಜು, 19.72ರ ಬ್ಯಾಟಿಂಗ್ ಅವರೇಜ್ನಲ್ಲಿ ಗಳಿಸಿದ ರನ್ ಕೇವಲ 355. ಈ ಪೈಕಿ ಒಂದೇ ಒಂದು ಬಾರಿ ಮಾತ್ರ ಅರ್ಧಶತಕ ದಾಖಲಿಸಿದ್ದರು. ಈ ಇನ್ ಕನ್ಸಿಸ್ಟೆನ್ಸಿ ಬ್ಯಾಟಿಂಗ್ ಸಂಜು ಸ್ಯಾಮ್ಸನ್ಗೆ ಮುಳುವಾಗಿತ್ತು.
ಸಂಜು ಸ್ಯಾಮ್ಸನ್ರ ಇನ್ ಕನ್ಸಿಸ್ಟೆನ್ಸಿಗೆ ಕಾರಣ ಚಾನ್ಸ್.. ಡ್ರಾಪ್.. ಬೆಂಚ್..! ಮತ್ತೆ ಚಾನ್ಸ್.. ನೆಕ್ಟ್ ಮ್ಯಾಚ್ ಅಗೈನ್ ಬೆಂಚ್ ಎಂಬ ಹೈಡ್ರಾಮಾ. ಸಂಜು ರೋಲ್ ಬಗ್ಗೆ ಕ್ಲಾರಿಟಿಯೇ ಇರಲಿಲ್ಲ. ಫಿಕ್ಸ್ ಬ್ಯಾಟಿಂಗ್ ಸ್ಲಾಟ್ ಇರಲಿಲ್ಲ ಎಂಬ ವಾದವಿದೆ. ಆದ್ರೆ, ಈ ಅವಧಿಯಲ್ಲಿ ಕೆ.ಎಲ್.ರಾಹುಲ್ ಆ್ಯಂಡ್ ರೋಹಿತ್ ಶರ್ಮಾರಂಥ ಆಟಗಾರರು ಪ್ರೈಮ್ ಫಾರ್ಮ್ನಲ್ಲಿದ್ರು. ಹೀಗಾಗಿ ಈ ವೇಳೆ ಸಂಜು ತಂಡಕ್ಕೆ ಎಂಟ್ರಿ ನೀಡಿದ್ದು ಬ್ಯಾಕ್ ಆಪ್ ಪ್ಲೇಯರ್ ಆಗಿ. ಅದಾಗ್ಯೂ ಸಿಕ್ಕ ಅವಕಾಶವನ್ನ ಸಂಜು ಸ್ಯಾಮ್ಸನ್ ಅವಕಾಶಗಳನ್ನ ಬಾಚಿಕೊಳ್ಳಬೇಕಿತ್ತು. ಆದ್ರೆ, ವೈಫಲ್ಯ ಅನುಭವಿಸಿದ ಸಂಜು ಸಹಜವಾಗೇ ಬೆಂಚ್ ಕಾಯಬೇಕಾಗಿತ್ತು.
ಸಂಜುಗೆ ಅವಕಾಶ ಕಲ್ಪಿಸಿದ್ದೆ ರೋಹಿತ್-ದ್ರಾವಿಡ್..!
ಸಂಜು ಕರಿಯರ್ ಹಾಳು ಮಾಡಿದ್ರಲ್ಲಿ ರೋಹಿತ್, ದ್ರಾವಿಡ್ ಪಾತ್ರ ಇದೆ ಎಂದು ಸಂಜು ತಂದೆ ಆರೋಪಿಸಿದ್ದಾರೆ. ಆದ್ರೆ, 2024ರ ಟಿ20 ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್ ಇದ್ರು. ಈ ಟೂರ್ನಿಯ ತಂಡಕ್ಕೆ ಸೆಲೆಕ್ಟ್ ಆಗದಿದ್ರೆ, ಟಿ20 ವಿಶ್ವಕಪ್ ಬಳಿಕ ನಡೆದ ಟಿ20 ಸರಣಿಯಲ್ಲೇ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗುತ್ತಿರಲಿಲ್ಲ. ಅಂದು ಕನ್ನಡಿಗ ರಾಹುಲ್ ಬದಲಾಗಿ ಟಿ20 ವಿಶ್ವಕಪ್ನಲ್ಲಿ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಪರಿಗಣಿಸುವಂತೆ ಸಂಜು ಬೆಂಬಲಕ್ಕೆ ನಿಂತಿದ್ದು ರೋಹಿತ್, ದ್ರಾವಿಡ್. ಅಕಸ್ಮಾತ್ ಅಂದು ಬೆಂಬಲಕ್ಕೆ ನಿಲ್ಲಲಿಲ್ಲ ಅಂದಿದ್ರೆ, ಇವತ್ತಿಗೆ ಸಂಜು ಕರಿಯರ್ ಎಂಡ್ ಆಗ್ತಿತ್ತು.
ಇದನ್ನೂ ಓದಿ: IND vs SA T20; ಪಂದ್ಯ ರದ್ದು ಆದ್ರೆ ಸರಣಿ ಯಾರ ಪಾಲು.. ಸುರ್ಯಕುಮಾರ್ಗೆ ಇದೆಯಾ ಲಕ್?
ರೋಹಿತ್ ಶರ್ಮಾ ಹಾದಿಯಲ್ಲೇ ಸಂಜು ಸ್ಯಾಮ್ಸನ್..!
ಸಂಜು ಸ್ಯಾಮ್ಸನ್ ಹಾಗೂ ರೋಹಿತ್ ಕರಿಯರ್ಗೂ ಸಾಮ್ಯತೆ ಇದೆ. ಯಾಕಂದ್ರೆ, 2007ರಿಂದ ರೋಹಿತ್ ಶರ್ಮಾ ತಂಡದಲ್ಲಿದ್ದರೂ, ಇನ್ ಕನ್ಸಿಸ್ಟೆನ್ಸಿ ಕಾಡಿತ್ತು. 2008ರಿಂದ 2013 ತನಕ ಡಿಫರೆಂಟ್ ಬ್ಯಾಟಿಂಗ್ ಸ್ಲಾಟ್ನಲ್ಲಿ ರೋಹಿತ್ ಆಡಬೇಕಾಯ್ತು. ಆದ್ರೆ, 2013ರ ಚಾಂಪಿಯನ್ಸ್ ಟ್ರೋಪಿ ವೇಳೆ ಧೋನಿ ತೆಗೆದುಕೊಂಡ ಒಂದು ನಿರ್ಧಾರ ರೋಹಿತ್ ಜೀವನವನ್ನೇ ಬದಲಿಸಿತು. ಈಗ ಸಂಜು ಸ್ಯಾಮ್ಸನ್ ಕಥೆ ಹಾಗೆ ಇದೆ.. ಒಂದು ನಿರ್ಧಿಷ್ಟ ಸ್ಲಾಟ್ ಸಿಗದೆ, ರೋಲ್ ಬಗ್ಗೆ ಕ್ಲಾರಿಟಿ ಸಿಗದೇ, ಇನ್ ಕನ್ಸಿಸ್ಟೆನ್ಸಿಯಿಂದ ಬಳಲುತ್ತಿದ್ದ ಸಂಜುಗೆ ಕೋಚ್ ಗಂಭೀರ್, ಕ್ಯಾಪ್ಟನ್ ಸೂರ್ಯ ಬೆಂಬಲಕ್ಕೆ ನಿಂತಿದ್ದಾರೆ. ಮುಂದಿನ 10 ಪಂದ್ಯಗಳು ನೀನೆ ಓಪನರ್ ಎಂಬ ಕ್ಲಾರಿಟಿ ನೀಡಿದ್ದಾರೆ. ಪರಿಣಾಮ ಸಂಜು ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಸಂಜು ಪಾಲಿಗೆ ಸೂರ್ಯ ಈಗ ಧೋನಿಯಾಗಿದ್ದಾರೆ ಅಂದ್ರೆ ತಪ್ಪಿಲ್ಲ.
ಸಂಜು ಅದ್ಭುತ ಆಟಗಾರ ಅನ್ನೋದ್ರಲ್ಲಿ ನೋ ಡೌಟ್. ಆದ್ರೆ, ಇನ್ ಕನ್ಸಿಸ್ಟೆನ್ಸಿ, ಬ್ಯಾಟಿಂಗ್ ಸ್ಲಾಟ್ನ ಬದಲಾವಣೆಯ ಜೊತೆಗೆ ಖಾಯಂ ಆಟಗಾರರ ಜೊತೆಗಿನ ಪೈಪೋಟಿಯಲ್ಲಿ ಸಂಜುಗೆ ಹೆಚ್ಚು ಚಾನ್ಸ್ ಸಿಕ್ಕಿರಲಿಲ್ಲ. ಆದ್ರೀಗ ಇದೆಲ್ಲ ಬದಲಾಗಿದೆ. ಇಂಥಹ ಟೈಮ್ನಲ್ಲಿ ಆರೋಪ ಪ್ರತ್ಯಾರೋಪ ಮಾಡ್ತಾ ಕುಳಿತ್ರೆ, ಸಂಜು ಕರಿಯರ್ಗೆ ಡ್ಯಾಮೇಜ್ ಆಗೋದು ಗ್ಯಾರಂಟಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ