/newsfirstlive-kannada/media/post_attachments/wp-content/uploads/2025/04/DHONI_MS.jpg)
ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯವಾಗಿ ಸೋತು ಹೋಗಿದೆ. ಕೆಕೆಆರ್ 8 ವಿಕೆಟ್ಗಳಿಂದ ಭರ್ಜರಿ ಗೆಲುವು ಪಡೆದುಕೊಂಡಿದೆ.
ಚೆನ್ನೈನಲ್ಲಿ ನಡೆದ 25ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯಾ ರಹಾನೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಆಗಮಿಸಿದ ಚೆನ್ನೈ ಪರ ಓಪನರ್ಸ್ ರಚಿನ್ ರವೀಂದ್ರ ಹಾಗೂ ಡಿವೋನ್ ಕಾನ್ವೆ ಉತ್ತಮ ಆರಂಭವೇನು ಪಡೆಯಲಿಲ್ಲ. ರಚಿನ್ ಕೇವಲ 4 ರನ್ಗೆ ಔಟ್ ಆದ್ರೆ, ಕಾನ್ವೆ 12 ರನ್ಗೆ ಎಲ್ಬಿಡಬ್ಲುಗೆ ಬಲಿಯಾದರು.
ವಿಜಯ್ ಶಂಕರ್ 2 ಫೋರ್, 1 ಸಿಕ್ಸರ್ ಸಮೇತ 29 ಹಾಗೂ ಶುವಂ ದುಬೆ ಅವರ 3 ಬೌಂಡರಿಗಳಿಂದ 31 ರನ್ಗಳನ್ನು ಗಳಿಸಿದರು. ಈ ಇಬ್ಬರು ಬ್ಯಾಟರ್ಗಳನ್ನ ಬಿಟ್ಟರೇ ಉಳಿದವರು ಯಾರು ಕೂಡ ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. ಕ್ಯಾಪ್ಟನ್ ಧೋನಿ ಕೂಡ ಕೊನೆಯಲ್ಲಿ ಬ್ಯಾಟಿಂಗ್ಗೆ ಬಂದು ಕೇವಲ 1 ರನ್ಗೆ ಔಟ್ ಆದರು. ಹೀಗಾಗಿ ಚೆನ್ನೈ ತಂಡ 20 ಓವರ್ಗಳಲ್ಲಿ 9 ವಿಕೆಟ್ಗೆ 104 ರನ್ಗಳ ಗುರಿ ನೀಡಿತ್ತು.
ಇದನ್ನೂ ಓದಿ:IPLನಲ್ಲಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ.. ಯಂಗ್ ಪ್ಲೇಯರ್ಗೆ ಬ್ಯಾನ್ ಭೀತಿನಾ?
ಈ ಸುಲಭ ಟಾರ್ಗೆಟ್ ಬೆನ್ನು ಹತ್ತಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬಹು ಬೇಗನೇ ಜಯ ಸಾಧಿಸಿತು. ಕೆಕೆಆರ್ ತಂಡದಲ್ಲಿ ಆರಂಭಿಕ ಬ್ಯಾಟರ್ಗಳಾಗಿ ಬಂದ ಕ್ವಿಂಟನ್ ಡಿ ಕಾಕ್, ಸುನಿಲ್ ನರೈನ್ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಡಿ ಕಾಕ್ 23ಕ್ಕೆ ಔಟ್ ಆದರೆ, ನರೈನ್ 44 ರನ್ಗೆ ವಿಕೆಟ್ ಒಪ್ಪಿಸಿದರು. ಅಜಿಂಕ್ಯಾ ರಹಾನೆ ಅಜೇಯ 20 ಹಾಗೂ ರಿಂಕು ಸಿಂಗ್ ಅಜೇಯ 15 ರನ್ಗಳಿಂದ ಕೆಕೆಆರ್ ತಂಡಕ್ಕೆ ಗೆಲುವು ತಂದು ಕೊಟ್ಟರು.
10.1 ಓವರ್ಗಳಲ್ಲಿ ಕೇವಲ 2 ವಿಕೆಟ್ಗೆ 107 ರನ್ಗಳನ್ನು ಗಳಿಸುವ ಮೂಲಕ ಕೋಲ್ಕತ್ತಾ ತಂಡ ವಿಜಯಶಾಲಿಯಾಯಿತು. ಈ ಮೂಲಕ ಕೆಕೆಆರ್ ತಂಡ 6 ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಕಂಡು, ಮೂರರಲ್ಲಿ ಸೋಲುಂಡಿದೆ. ಅದರಂತೆ ಚೆನ್ನೈ ತಂಡ ಕೂಡ 6 ಮ್ಯಾಚ್ಗಳನ್ನು ಆಡಿದ್ದು ಇದರಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದು ಉಳಿದ ಎಲ್ಲ ಪಂದ್ಯಗಳಲ್ಲಿ ಹೀನಾಯವಾಗಿ ಸೋತು ಹೋಗಿದೆ. ಈ ಪಂದ್ಯಕ್ಕೆ ಧೋನಿ ಕ್ಯಾಪ್ಟನ್ ಆದರೂ ಚೆನ್ನೈನ ಸೋಲಿನ ಓಟ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ