ಹೊಸ ಲುಕ್​ನಲ್ಲಿ MS ಧೋನಿಯ ಐಷಾರಾಮಿ ಕಾರು.. ಇದಕ್ಕೆ ಕೂಲ್ ಕ್ಯಾಪ್ಟನ್​ ಎಲ್ಲರಿಗೂ ಇಷ್ಟ ಆಗೋದು..!

author-image
Bheemappa
Updated On
ಹೊಸ ಲುಕ್​ನಲ್ಲಿ MS ಧೋನಿಯ ಐಷಾರಾಮಿ ಕಾರು.. ಇದಕ್ಕೆ ಕೂಲ್ ಕ್ಯಾಪ್ಟನ್​ ಎಲ್ಲರಿಗೂ ಇಷ್ಟ ಆಗೋದು..!
Advertisment
  • ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ದಿನ?
  • ಪದ್ಮಭೂಷಣ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದ MS ಧೋನಿ
  • ಐಷಾರಾಮಿ ಕಾರುಗಳಿವೆ, ಅದರಲ್ಲಿ ಹಮ್ಮರ್ ಕಾರು ವಿಶೇಷ

ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಸಕ್ಸಸ್​ಫುಲ್ ಕ್ಯಾಪ್ಟನ್. ಟೀಮ್ ಇಂಡಿಯಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ಕೊಟ್ಟ ಲೆಜೆಂಡರಿ ಕ್ಯಾಪ್ಟನ್. ಆದ್ರೆ, ಇದಲ್ಲಕ್ಕೂ ಮಿಗಿಲಾಗಿ ಒಬ್ಬ ದೇಶಭಕ್ತ. ಧೋನಿ ತನ್ನ ಪ್ರತಿ ಹೆಜ್ಜೆಯಲ್ಲೂ ದೇಶ ಪ್ರೇಮವನ್ನ ಮೆರೀತಾರೆ. ಧೋನಿ ದೇಶಪ್ರೇಮ ಇಲ್ಲಿದೆ.

ಮಹೇಂದ್ರ ಸಿಂಗ್ ಧೋನಿ ದಿ ಗ್ರೇಟ್ ಲೀಡರ್, ಟೀಮ್ ಇಂಡಿಯಾ ಕಂಡ ಸರ್ವಶ್ರೇಷ್ಠ ನಾಯಕ. ಧೋನಿಯೊಬ್ಬ ಸಕ್ಸಸ್​ಫುಲ್​​ ಕ್ಯಾಪ್ಟನ್​​, ಕ್ರಿಕೆಟರ್​ ಮಾತ್ರವಲ್ಲ, ಒಬ್ಬ ಅಪ್ಪಟ ದೇಶಭಕ್ತ ಕೂಡ ಹೌದು. ಇದಕ್ಕೆ ಮತ್ತೊಂದು ಲೇಟೆಸ್ಟ್​ ಎಕ್ಸಾಂಪಲ್​ ಧೋನಿಯ ಕಾರ್​.

publive-image

ಮತ್ತೆ ದೇಶ ಭಕ್ತಿ ಮೆರೆದ ಮಹೇಂದ್ರ ಸಿಂಗ್ ಧೋನಿ.!

ಧೋನಿ ಬಳಿ ಹಲವು ಐಷಾರಾಮಿ ಕಾರುಗಳಿವೆ. ಗ್ಯಾರೇಜ್​ನಲ್ಲಿ ಬಗೆ ಬಗೆಯ ಲಕ್ಸುರಿ ಕಾರುಗಳಿವೆ. ಈ ಪೈಕಿ ಹಮ್ಮರ್ ಕಾರು ಕೂಡ ಒಂದಾಗಿದೆ. ಇದೀಗ ಆ ಕಾರನ್ನ ಧೋನಿ ಮಾಡಿಫೈ ಮಾಡಿದ್ದಾರೆ.

ಧೋನಿ ಬಳಿಯಿರುವ 1.5 ಕೋಟಿ ಬೆಲೆಯ ಐಷಾರಾಮಿ ಹಮ್ಮರ್ ಕಾರನ್ನು, ಮಿಲಿಟರಿ ಲುಕ್​ಗೆ ಬದಲಾಯಿಸಿದ್ದಾರೆ. ಈ ಮೂಲಕ ಸೇನೆ ಮೇಲಿನ ಪ್ರೀತಿ ಹೊರ ಹಾಕಿದ್ದಾರೆ. ಇಡೀ ಕಾರಿಗೆ ಆರ್ಮಿ ಗ್ರೀನ್​​ ಕಲರ್​​ ಪೇಂಟ್​ ಮಾಡಲಾಗಿದೆ. ಕಾರಿನ ಮೇಲೆ ಸೇನಾ ಹೆಲಿಕಾಪ್ಟರ್​ ಹಾಗೂ ಸೈನಿಕನ ಚಿತ್ರ ಬಿಡಿಸಲಾಗಿದೆ.

ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ಧೋನಿ ಸೇವೆ.!

ಭಾರತೀಯ ಸೇನೆ ಬಗ್ಗೆ ಅಪಾರ ಗೌರವ ಹೊಂದಿರುವ ಧೋನಿ, ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್‌ ಕರ್ನಲ್‌ ಆಗಿದ್ದಾರೆ. ಆರಂಭದಲ್ಲಿ ಮಾಹಿಗೆ ಸೈನಿಕನಾಗಬೇಕೆಂಬ ದೊಡ್ಡ ಕನಸಿತ್ತು. ವಿಧಿ ಕ್ರಿಕೆಟರ್​ ಮಾಡ್ತು. ಆದ್ರೆ, ಇದೇ ಕ್ರಿಕೆಟ್​​​ನಲ್ಲಿ ಸಿಕ್ಕ ಯಶಸ್ಸು, ಸೈನಿಕನಾಗೋ ಕನಸನ್ನ ನನಸು ಮಾಡಿತು.

ಧೋನಿ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟರು. ಆ ಬಳಿಕ ಧೋನಿ ನೀಡಿದ ಕೊಡುಗೆಯನ್ನ ಪರಿಗಣಿಸಿ ಯುವಕರನ್ನು ಪ್ರೋತ್ಸಾಹಿಸೋ ಸಲುವಾಗಿ, ಸೇನೆಯನ್ನ ಮಹತ್ವದ ತೀರ್ಮಾನ ತೆಗೆದುಕೊಳ್ತು. ನವೆಂಬರ್‌ 1, 2011ರಂದು ಧೋನಿಗೆ ಗೌರವ ಲೆಫ್ಟಿನೆಂಟ್‌ ಕರ್ನಲ್‌ ಗೌರವ ಹುದ್ದೆ ನೀಡಲಾಗಿದೆ.

ಕ್ರಿಕೆಟ್​ನಿಂದ ಬಿಡುವಿನ ವೇಳೆ ಸೇನೆಯಲ್ಲಿ ತರಬೇತಿ..!

ಕ್ರಿಕೆಟ್​​ನಿಂದ ಬಿಡುವು ಪಡೆದಾಗೆಲ್ಲ ಮಾಹಿ, ಸೇನಾ ಟ್ರೈನಿಂಗ್​ನಲ್ಲಿ ಬ್ಯುಸಿಯಾಗ್ತಿದ್ದರು. 2015ರಲ್ಲಿ ಆಗ್ರಾದ ಸೇನಾ ಪ್ಯಾರಾ ಟ್ರೈನಿಂಗ್ ಸ್ಕೂಲ್​ನಲ್ಲಿ ತರಬೇತಿ ಪಡೆದಿದ್ದರು. 1250 ಅಡಿ ಎತ್ತರದಿಂದ ವಿಮಾನದಿಂದ ಜಿಗಿದು ಮೊದಲ ಪ್ಯಾರಾ ಜಂಪ್ ಪೂರ್ಣಗೊಳಿಸಿದ್ದರು.

2018ರಲ್ಲಿ ಪದ್ಮಭೂಷಣ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದ ಧೋನಿ, ಸೇನಾ ಸಮವಸ್ತ್ರದಲ್ಲೇ ಪ್ರಶಸ್ತಿ ಸ್ವೀಕರಿಸಿದ್ದರು. ಈ ಮೂಲಕ ಸೇನೆಯ ಮೇಲಿನ ಗೌರವವನ್ನ ವ್ಯಕ್ತಪಡಿಸಿದ್ದರು.

2019ರ ವಿಶ್ವಕಪ್ ವೇಳೆ ಗ್ಲೌಸ್​​​ನಲ್ಲಿ ಸೇನಾ ಬಲಿದಾನದ ಬ್ಯಾಡ್ಜ್

ಧೋನಿಗೆ ಸೇನೆ ಮೇಲಿನ ಪ್ರೀತಿ, ದೇಶದ ಮೇಲಿನ ಭಕ್ತಿ ಎಂಥದ್ದು ಎಂದು ಹೇಳಲು 2019ರ ಏಕದಿನ ವಿಶ್ವಕಪ್​ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಸಾಕು. ಈ ಪಂದ್ಯದಲ್ಲಿ ಧೋನಿ ಧರಿಸಿದ್ದ ಕೀಪಿಂಗ್ ಗ್ಲೌಸ್‌ನಲ್ಲಿ ಸೇನಾ ಬಲಿದಾನ ಲಾಂಛನವಿತ್ತು. ಸೇನೆಗೆ ಗೌರವ ಸಲ್ಲಿಸೋಕೆ ಧೋನಿ ಈ ಬ್ಯಾಡ್ಜ್​ ಇರೋ ಗ್ಲೌಸ್​ ಬಳಿಸಿದ್ದರು. ಆದ್ರೆ, ಅದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ವಿಶ್ವಕಪ್ ಮುಗಿದ ಬೆನ್ನಲ್ಲೇ 15 ದಿನ ಸೇನೆ ಜೊತೆ ಕಾರ್ಯ.!

ಐಸಿಸಿ ವಿಶ್ವಕಪ್ ಟೂರ್ನಿಯ ಸೋಲಿನ ಬಳಿಕ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗುತ್ತಿತ್ತು. ಪ್ರವಾಸದಿಂದ ಹೊರಗುಳಿಯೋ ನಿರ್ಧಾರ ಮಾಡಿದ ಮಾಹಿ, ಜಮ್ಮು ಕಾಶ್ಮೀರಕ್ಕೆ ತೆರಳಿದ್ದರು. 106 ಟಿಎ ಬೆಟಾಲಿಯನ್ ಜೊತೆ 15 ದಿನಗಳ ಕಾಲ ಸೇವೆ ಮಾಡಿದರು.

ಇದನ್ನೂ ಓದಿ: ಮುಂಬೈ ನಗರದ ಧಾರ್ಮಿಕ ಕಟ್ಟಡಗಳ ಮೇಲಿದ್ದ ಎಲ್ಲ ಧ್ವನಿವರ್ಧಕಗಳು ತೆರವು..!

publive-image

ಸ್ವಾತಂತ್ರ್ಯ ದಿನದಂದೇ ಎಂ.ಎಸ್ ಧೋನಿ ನಿವೃತ್ತಿ..!

ಧೋನಿ ಎಂತಾ ದೇಶಭಕ್ತ ಅನ್ನೋದಕ್ಕೆ ಮತ್ತೊಂದು ಬೆಸ್ಟ್​ ಎಕ್ಸಾಂಪಲ್​ 2020 ಆಗಸ್ಟ್ 15. ಅಂದು ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರು. ಸ್ವಾತಂತ್ರ್ಯ ದಿನಾಚರಣೆಯಂದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿದಾಯದ ಪೋಸ್ಟ್ ಹಂಚಿಕೊಂಡು ಶಾಕ್ ನೀಡಿದ್ದರು.

ಬಹುತೇಕ ಭಾರತೀಯ ಕ್ರಿಕೆಟಿಗರ ಹೆಲ್ಮೆಟ್​ನಲ್ಲಿ ಭಾರತದ ಧ್ವಜ್ ಬ್ಯಾಡ್ಜ್​ ಇರುತ್ತೆ. ಆದ್ರೆ, ಧೋನಿ ಹೆಲ್ಮೆಟ್​ನಲ್ಲಿ ಇದು ಇರಲಿಲ್ಲ. ಯಾಕಂದ್ರೆ, ಕೀಪಿಂಗ್​ ಮಾಡೋ ವೇಳೆ ಕೆಲವೊಮ್ಮೆ ಹೆಲ್ಮೆಟ್​ನ ನೆಲದ ಮೇಲೆ ಇಡಬೇಕಾಗುತ್ತೆ. ಇದು ಧ್ವಜಕ್ಕೆ ಅಗೌರವ ಸೂಚಿಸಿದಂತಾಗುತ್ತೆ ಅನ್ನೋದು ಧೋನಿ ಅಭಿಪ್ರಾಯವಾಗಿತ್ತು. ಹೀಗೆ ಕ್ರಿಕೆಟ್​ನಲ್ಲಿದ್ದಾಗ, ನಿವೃತ್ತಿ ಹೇಳಿದ ಬಳಿಕ ಒಂದಿಲ್ಲೊಂದು ರೀತಿಯಲ್ಲಿ ಮಾಹಿ, ದೇಶ ಪ್ರೇಮವನ್ನ ಮರೆಯುತ್ತಾ ಬಂದಿದ್ದಾರೆ. ಧೋನಿಯ ಈ ನಡೆ ಎಲ್ಲರಿಗೂ ಮಾದರಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment