181 ಮಂದಿಯಲ್ಲಿ ಇಬ್ಬರು ಮಾತ್ರ ಬದುಕಿ ಬಂದರು.. ಇವರ ಜೀವ ಉಳಿಯಲು ನಿಗೂಢ ಕಾರಣ ಏನು?

author-image
Ganesh
Updated On
181 ಮಂದಿಯಲ್ಲಿ ಇಬ್ಬರು ಮಾತ್ರ ಬದುಕಿ ಬಂದರು.. ಇವರ ಜೀವ ಉಳಿಯಲು ನಿಗೂಢ ಕಾರಣ ಏನು?
Advertisment
  • ದಕ್ಷಿಣ ಕೊರಿಯಾದಲ್ಲಿ ಭಾನುವಾರ ವಿಮಾನ ದುರಂತ
  • ಭೀಕರ ದುರ್ಘಟನೆಯಲ್ಲಿ 179 ಮಂದಿಯ ಜೀವ ಹೋಗಿದೆ
  • ಬ್ಯಾಂಕಾಕ್​​ನಿಂದ ದಕ್ಷಿಣ ಕೋರಿಯಾಗೆ ಬರ್ತಿದ್ದ ವಿಮಾನ

ದಕ್ಷಿಣ ಕೊರಿಯಾದಲ್ಲಿ ಭಾನುವಾರ ಸಂಭವಿಸಿದ ವಿಮಾನ ದುರಂತದಲ್ಲಿ 179 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡುವ ವೇಳೆ ರನ್‌ವೇಯಿಂದ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿ ಬೆಂಕಿಗೆ ಆಹುತಿಯಾಯಿತು. ಅಪಘಾತದ ಸಮಯದಲ್ಲಿ ಸಿಬ್ಬಂದಿ ಸೇರಿ 181 ಜನರಿದ್ದರು. ಅವರಲ್ಲಿ ಇಬ್ಬರು ಮಾತ್ರ ಬದುಕುಳಿದಿರುವುದು ಅಚ್ಚರಿ ಮೂಡಿಸಿದೆ.

ಬದುಕಿರುವ ಇಬ್ಬರೂ ವಿಮಾನ ಸಿಬ್ಬಂದಿ. ಅವರಲ್ಲಿ ಒಬ್ಬರು ಮಹಿಳೆ ಮತ್ತು ಇನ್ನೊಬ್ಬರು ಪುರುಷ. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ವಿಮಾನದ ಹಿಂಬದಿ ಭಾಗದಲ್ಲಿ ಕುಳಿತು ಸೀಟ್ ಬೆಲ್ಟ್ ಧರಿಸಿ ಅಪಘಾತದಿಂದ ಪಾರಾಗಿದ್ದಾರೆ. ವಾಣಿಜ್ಯ ವಿಮಾನಗಳಲ್ಲಿ ಹಿಂಭಾಗ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ವಿಮಾನ ಅಪಘಾತದ ಸಂದರ್ಭದಲ್ಲಿ ಹಿಂಬದಿಯ ಆಸನಗಳು ಸುರಕ್ಷಿತವಾಗಿರುತ್ತವೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಮುಂಭಾಗದ ಮತ್ತು ಮಧ್ಯದ ಸಾಲಿನ ಪ್ರಯಾಣಿಕರಿಗಿಂತ ಹಿಂಬದಿ ಸೀಟಿನವರು ಅಪಘಾತಗಳಿಂದ ಬದುಕುಳಿಯುತ್ತಾರೆ ಎಂದು ಅನೇಕ ವರದಿಗಳು ಹೇಳಿವೆ.

ಇದನ್ನೂ ಓದಿ:ಇಂಗ್ಲೆಂಡ್​ ವಿರುದ್ಧ ಸರಣಿ.. ಟೀಂ ಇಂಡಿಯಾದ ಮೂವರು ಹಿರಿಯ ಆಟಗಾರರು ಔಟ್..!

ಜೆಜು ಏರ್‌ಲೈನ್ಸ್‌ನ ಬೋಯಿಂಗ್ 737-800 ವಿಮಾನವು ಬ್ಯಾಂಕಾಕ್‌ನಿಂದ ಮುವಾನ್‌ಗೆ 181 ಜನರೊಂದಿಗೆ ಲ್ಯಾಂಡಿಂಗ್ ಸಮಯದಲ್ಲಿ ದುರ್ಘಟನೆಗೆ ಒಳಗಾಯಿತು. ರನ್​ವೇಯಿಂದ ಸ್ಕಿಡ್​ ಆಗಿ ಕಾಂಕ್ರೀಟ್ ಗೋಡೆಗೆ ಡಿಕ್ಕಿ ಹೊಡೆದಿದೆ. ವಿಮಾನ ನಿಲ್ದಾಣದಲ್ಲಿ ಕಾಂಪೌಂಡ್ ಇಲ್ಲದಿದ್ದರೆ ಇನ್ನೂ ಹಲವರು ಬದುಕುಳಿಯುತ್ತಿದ್ದರು ಅನ್ನೋದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ:Thank You ಹೇಳಿದ ರೋಹಿತ್ ಶರ್ಮಾರ ಪೋಸ್ಟ್​ ವೈರಲ್; ವರ್ಷದ ಮೊದಲ ದಿನವೇ ಶಾಕ್ ಕೊಟ್ರಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment