ಮುಡಾ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು
ಬದಲಿ ನಿವೇಶನದ ಹೆಸರಲ್ಲಿ ಅವ್ಯವಹಾರ ನಡೆಸಿದ ಆರೋಪ
ಸಿಎಂ ಪತ್ನಿ ಪಾರ್ವತಿಯವರ ಹೆಸರು ಈ ಪ್ರಕರಣದಲ್ಲೇಕೆ ಬಂತು?
ಬೆಂಗಳೂರು: ಮುಡಾ ಕೇಸ್ನಲ್ಲಿ ಸಂಕಷ್ಟ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೈಕೋರ್ಟ್ನಲ್ಲಿ ಬಿಗ್ ಶಾಕ್ ಆಗಿದೆ. ರಾಜ್ಯಪಾಲರು ಪ್ರಾಸಿಕ್ಯೂಶನ್ಗೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದು, ಸಿಎಂಗೆ ಭಾರೀ ಹಿನ್ನಡೆ ಆಗಿದೆ. ಕೋರ್ಟ್ನಲ್ಲಿ ಅರ್ಜಿ ವಜಾ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮಾಧ್ಯಮದವರಿಗೆ ಪ್ರತಿಕ್ರಿಯಿಸದೆ ಕಾರು ಏರಿ ಹೊರಟಿದ್ದಾರೆ.
ಏನಿದು ಮುಡಾ ಹಗರಣ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ( Mysore Urban Development Authority- MUDA) ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಮೈಸೂರಿನ ಕೆಸರೆ ಗ್ರಾಮದಲ್ಲಿ 3.16 ಎಕರೆ ಸೈಟ್‌ಗೆ ಪ್ರತಿಯಾಗಿ 50:50 ಅನುಪಾತದಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ಪ್ರಖ್ಯಾತ ವಿಜಯನಗರದಲ್ಲಿ 14 ಸೈಟ್ ನೀಡಿರುವುದು ಇದು ಸ್ಕ್ಯಾಮ್ ಎನ್ನಲು ಕಾರಣವಾಗಿದೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ನಾಯಕರು ಪಾರ್ವತಿ ಅವರಿಗೆ ನೀಡಿರುವ ಸೈಟ್ ನ್ಯಾಯಸಮ್ಮತವಾಗಿದೆ ಎಂದು ಹೇಳಿರುವುದಲ್ಲದೆ, ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿಯೇ 50:50 ಅನುಪಾತದಲ್ಲಿ ಸೈಟ್ ನೀಡಲಾಗಿದೆ ಎಂದು ಹೇಳಿವೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್.. ಗವರ್ನರ್ ಆದೇಶ ಎತ್ತಿ ಹಿಡಿದ ಹೈಕೋರ್ಟ್; ಮುಂದೇನು?
ಕೆಸರೆ ಗ್ರಾಮದ ಜಾಗದ ಬದಲು ವಿಜಯನಗರ ಲೇಔಟ್‌ನಲ್ಲಿ ಬದಲಿ ನಿವೇಶನದ ಹೆಸರಲ್ಲಿ ಅವ್ಯವಹಾರ ನಡೆಸಿದ ಆರೋಪ ಕೇಳಿಬಂದಿದೆ. ಮೈಸೂರು ತಾ. ಕೆಸರೆ ಸರ್ವೇ ನಂ. 464 ವ್ಯಾಪ್ತಿಯ 3.16 ಗುಂಟೆ ಜಮೀನನ್ನು ಭೂಸ್ವಾಧೀನಕ್ಕೆ ಪರ್ಯಾಯವಾಗಿ ವಿಜಯನಗರ ಬಡಾವಣೆಯಲ್ಲಿ 14 ಸೈಟ್ ಮಾಡಿ ಹಂಚಿರುವ ಆರೋಪ ಇದಾಗಿದೆ.
ಏನಿದು ಜಮೀನು ವಿವಾದ?
1985ರಲ್ಲಿ ಹರಾಜಿನಲ್ಲಿ 100ರೂ.ಗೆ ಜಮೀನು ಖರೀದಿ ಮಾಡಲಾಗಿತ್ತು. ಜವರ ಎಂಬುವವರಿಂದ ಜಮೀನು ಹರಾಜಲ್ಲಿ ಖರೀದಿಸಲಾಗಿತ್ತು. 1992ರಲ್ಲಿ 3 ಎಕರೆ 17 ಗುಂಟೆ ಜಮೀನು ನೋಟಿಫೈ ಆಗಿದೆ. ಮೊದಲು ಜವರ ಎಂಬುವರ ಹೆಸರಿನಲ್ಲಿ ಜಮೀನಿರುತ್ತೆ.
ಇದನ್ನೂ ಓದಿ: Breaking News: ಸಿಎಂ ಸಿದ್ದರಾಮಯ್ಯಗೆ ಇಲ್ಲ ರಿಲೀಫ್ -ಹೈಕೋರ್ಟ್ನಿಂದ ಮಹತ್ವದ ತೀರ್ಪು
1998ರಲ್ಲಿ ದೇವರಾಜ್ ಎಂಬುವರ ಹೆಸರಿಗೆ ಡಿನೋಟಿಫೈ ಆಗುತ್ತದೆ. ಆದರೆ 2004ರಲ್ಲಿ ಸಿಎಂ ಪತ್ನಿ ತಮ್ಮ ಮಲ್ಲಿಕಾರ್ಜುನ್ರಿಂದ ಖರೀದಿ ಮಾಡಲಾಗುತ್ತದೆ. ಸರ್ವೆ ನಂ 464ರಲ್ಲಿ 3 ಎಕರೆ 16 ಗುಂಟೆ ಜಮೀನು ಖರೀದಿ ಮಾಡಲಾಗುತ್ತದೆ. 2010ರಲ್ಲಿ ಸಿಎಂ ಪತ್ನಿ ಪಾರ್ವತಿಯವರಿಗೆ ಜಮೀನು ನೀಡಲಾಗುತ್ತದೆ. 2005ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಈ ಜಾಗವನ್ನ ಅಭಿವೃದ್ಧಿ ಪಡಿಸಿ ಮಾರಿದೆ. ಅಕ್ರಮವಾಗಿ ಜಾಗ ಸ್ವಾಧೀನಕ್ಕೆ ತೆಗೆದುಕೊಂಡು ಮಾರಾಟ ಮಾಡಿದೆ. ಇದನ್ನು ಗಮನಕ್ಕೆ ತಂದಾಗ ಪರ್ಯಾಯ ಜಾಗ ನೀಡಲು ತೀರ್ಮಾನಿಸಲಾಗಿದೆ. ಬಳಿಕ ಸಿದ್ದರಾಮಯ್ಯರ ಪತ್ನಿಗೆ ಬೇರೆ ಕಡೆ ಜಾಗ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ