CM ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ.. ತೆರೆದ ಪುಸ್ತಕದಲ್ಲಿ ಬರೀ ಕಪ್ಪು ಚುಕ್ಕೆ ಎಂದ R ಅಶೋಕ್

author-image
Bheemappa
Updated On
CM ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ.. ತೆರೆದ ಪುಸ್ತಕದಲ್ಲಿ ಬರೀ ಕಪ್ಪು ಚುಕ್ಕೆ ಎಂದ R ಅಶೋಕ್
Advertisment
  • ಸಿಎಂ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರು
  • ಸಿಬಿಐ ಭೀತಿಯಿಂದ ಲೋಕಾಯುಕ್ತ ವಿಚಾರಣೆಗೆ ಹೋಗಿದ್ದಾರೆ
  • ಸಿಎಂ ವಿರುದ್ಧ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಆಕ್ರೋಶ

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ಅಧಿಕಾರಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಲೋಕಾಯುಕ್ತ ಕಚೇರಿ ಎದುರಿಗೆ ಬಿಜೆಪಿಯ ಮಹಿಳಾ, ಪುರುಷ ಮುಖಂಡರು, ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಶಾಸಕ ಶ್ರೀವತ್ಸ ಹಾಗೂ ಜಿಲ್ಲಾಧ್ಯಕ್ಷ ಎಲ್​.ನಾಗೇಂದ್ರ ಅವರು ಭಾಗಿಯಾಗಿದ್ದಾರೆ. ಈ ವೇಳೆ ಸಿಎಂ ವಿರುದ್ಧ ಘೋಷಣೆ, ದಿಕ್ಕಾರ ಕೂಗಿದ್ದಾರೆ. ಇನ್ನು ಬಿಜೆಪಿಯ ಮಹಿಳಾ ಹಾಗೂ ಪುರುಷ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಮುಡಾ ಕೇಸ್; ಮೊದಲ ಬಾರಿ ವಿಚಾರಣೆಗೆ ಹಾಜರಾದ ಸಿಎಂ ಸಿದ್ದರಾಮುಯ್ಯ

publive-image

ಮುಡಾ ಕೇಸ್​ನಲ್ಲಿ ಸಿಎಂ ವಿಚಾರಣೆಗೆ ಸಂಬಂಧಪಟ್ಟಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಮಾತನಾಡಿದ್ದಾರೆ. 40 ವರ್ಷದ ರಾಜಕಾರಣ ತೆರೆದ ಪುಸ್ತಕ ಅಂತ ಸಿಎಂ ಹೇಳುತ್ತಾರೆ. ಆದರೆ ಪುಸ್ತಕ ತೆರೆದ್ರೆ ಬರೀ ಕಪ್ಪು ಚುಕ್ಕೆ ಇವೆ. ರಾಜ್ಯದ ಮುಖ್ಯಮಂತ್ರಿ ಪೊಲೀಸರ ಮುಂದೆ ಕೈ ಕಟ್ಟಿ ಕುಳಿತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಬೇಕು. ಲೋಕಾಯುಕ್ತ ವಿಚಾರಣೆ ಎಲ್ಲ ಮ್ಯಾಚ್ ಫಿಕ್ಸಿಂಗ್​ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.

ನಮಗೆ ನಾಚಿಕೆ ಆಗುತ್ತಿದೆ. 16 ತಿಂಗಳ ಕಾಂಗ್ರೆಸ್‌ನ ಸರ್ಕಾರದಲ್ಲಿ ನಿತ್ಯ ಒಬ್ಬರಲ್ಲ, ಒಬ್ಬರು ಲೂಟಿ ಹೊಡೆಯುತ್ತಿದ್ದಾರೆ. ಪೆಟ್ರೋಲ್, ಹಾಲು ಸೇರಿದಂತೆ ಎಲ್ಲದರ ಬೆಲೆ ಹೆಚ್ಚಳವಾಗಿವೆ. ರಸ್ತೆಯಲ್ಲಿ ಓಡಾಟ ಮಾಡೋಣ ಅಂದರೆ ಗುಂಡಿ ಬಿದ್ದಿವೆ. ಇಂದು ರಾಜ್ಯದ ಸಿಎಂ, ತಮ್ಮ ಕೈ ಕೆಳಗೆ ಕೆಲಸ ಮಾಡುವ ಪೊಲೀಸರ ಮುಂದೆ ಕೈ ಕಟ್ಟಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

10 ಗಂಟೆಗೆ ಲೋಕಾಯುಕ್ತ ಕಚೇರಿ ಆಮೇಲೆ 12 ಘಂಟೆಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಅಂತಾರೆ. ಇದೆಲ್ಲಾ ಮ್ಯಾಚ್ ಫಿಕ್ಸಿಂಗಾ?. ಸಿಬಿಐಗೆ ಮುಡಾ ಪ್ರಕರಣ ಹೋಗುವ ಭೀತಿಯಿಂದ ಇಂದು ಲೋಕಾಯುಕ್ತರ ವಿಚಾರಣೆಗೆ ಹೋಗಿದ್ದಾರೆ. ಸ್ನೇಹಮಯಿ ಕೃಷ್ಣ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ A-4, A-3, A-2 ಆಮೇಲೆ A-1 ವಿಚಾರಣೆನಾ?. ಇದು ಮ್ಯಾಚ್ ಫಿಕ್ಸಿಂಗ್ ಅಲ್ವಾ ಎಂದು ಆರ್ ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment