ಸಿದ್ದರಾಮಯ್ಯಗೆ ಬಿಗ್ ರಿಲೀಫ್; ಪ್ರಕರಣಕ್ಕೆ ಟ್ವಿಸ್ಟ್​ ಸಿಗಲಿದೆ ಎಂದ ಸ್ನೇಹಮಯಿ ಕೃಷ್ಣ ಪರ ವಕೀಲ

author-image
Bheemappa
Updated On
ಸಿದ್ದರಾಮಯ್ಯಗೆ ಬಿಗ್ ರಿಲೀಫ್; ಪ್ರಕರಣಕ್ಕೆ ಟ್ವಿಸ್ಟ್​ ಸಿಗಲಿದೆ ಎಂದ ಸ್ನೇಹಮಯಿ ಕೃಷ್ಣ ಪರ ವಕೀಲ
Advertisment
  • ಪ್ರಕರಣದ ಮುಂದಿನ ನಿರ್ಧಾರದ ಬಗ್ಗೆ ವಕೀಲರು ಏನಂದ್ರು?
  • ಘನ ನ್ಯಾಯಾಲಯ ಕೊಟ್ಟ ತೀರ್ಪುಗೆ ನಾವು ತಲೆ ಬಾಗಬೇಕು
  • ನಮ್ಮ ಪರ ತೀರ್ಪು ಬರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆ

ಧಾರವಾಡ: ಮುಡಾ ಕೇಸ್​ ಅನ್ನು ಸಿಬಿಐಗೆ ಕೊಡುವ ಕುರಿತು ಹೈಕೋರ್ಟ್​ ನಿರಾಕರಣೆ ಮಾಡಿದೆ. ದೂರದಾರ ಸ್ನೇಹಮಯಿ ಕೃಷ್ಣ ಪರ ವಕೀಲರು ತಮ್ಮ ಪರವಾಗಿ ತೀರ್ಪು ಬರುತ್ತೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ತೀರ್ಪು ಸಿಎಂ ಸಿದ್ದರಾಮಯ್ಯ ಪರವಾಗಿ ಬಂದಿದೆ. ಸದ್ಯ ಈ ಸಂಬಂಧ ದೂರುದಾರರ ಪರವಾದ ವಕೀಲ ಲಕ್ಷ್ಮಣ್ ಕುಲಕರ್ಣಿ, ಸುಪ್ರೀಂ ಕೋರ್ಟ್​ಗೆ ಹೋಗುವುದು ಪಕ್ಕಾ ಎಂದಿದ್ದಾರೆ.

ನ್ಯೂಸ್​ ಫಸ್ಟ್​ ಜೊತೆ ಮಾತನಾಡಿದ ದೂರದಾರ ಸ್ನೇಹಮಯಿ ಕೃಷ್ಣ ಪರ ವಕೀಲ ಲಕ್ಷ್ಮಣ್ ಕುಲಕರ್ಣಿ, ಘನ ನ್ಯಾಯಾಲಯ ಕೊಟ್ಟ ತೀರ್ಪುಗೆ ನಾವು ತಲೆ ಬಾಗಲೇಬೇಕು. ಮೇಲ್ಮನವಿಯನ್ನು ಯಾವ ರೀತಿ ಸಲ್ಲಿಸಬೇಕು ಎನ್ನುವುದನ್ನು ವಿಚಾರ ಮಾಡಿ, ನಮ್ಮ ಹಿರಿಯ ಕೌನ್ಸಲರ್ ಜೊತೆ ಮಾತನಾಡಿ ಮುಂದಿನ ನಿರ್ಧಾರಗಳನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿCM ಸಿದ್ದರಾಮಯ್ಯಗೆ ಶಿಕ್ಷೆ ಕೊಡಿಸುವ ಎಲ್ಲ ಅವಕಾಶ ನನಗಿವೆ.. ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್

publive-image

ಮುಡಾ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಇನ್ನು ನಮಗೆ ಸರ್ಟಿಫೈಯಿಡ್ ಕಾಪಿ (ಕೋರ್ಟ್ ಆದೇಶದ ಪ್ರತಿ) ಸಿಕ್ಕಿಲ್ಲ. ಸರ್ಟಿಫೈಯಿಡ್ ಕಾಪಿ ಸಿಕ್ಕ ಮೇಲೆ ಸಂಪೂರ್ಣವಾಗಿ ಅದನ್ನು ಅಧ್ಯಯನ ಮಾಡಿ, ಕೋರ್ಟ್ ಏನನ್ನು ಫೈಡಿಂಗ್ ಮಾಡಿದೆ ಅದನ್ನು ನೋಡಿಕೊಂಡು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ತೀರ್ಪು ನಮ್ಮ ಪರವಾಗಿ ಬರುತ್ತೆ ಎಂದು ಎಲ್ಲ ವಿಶ್ವಾಸ ಇತ್ತು. ಸಂಪೂರ್ಣವಾದ ವಾದಗಳನ್ನು ನಾವು ಮಾಡಿದ್ವಿ. ಆದರೆ ಘನ ನ್ಯಾಯಾಲಯ ಕೊಟ್ಟ ತೀರ್ಪುಗೆ ನಾವು ತಲೆ ಬಾಗಲೇಬೇಕು. ಕಾನೂನಿನ ವ್ಯಾಪ್ತಿಯಲ್ಲಿ ಮೇಲ್ಮನವಿಯನ್ನು ಯಾವ ರೀತಿ ಸಲ್ಲಿಸಬೇಕು ಎನ್ನುವುದನ್ನು ವಿಚಾರ ಮಾಡುತ್ತೇವೆ. ಆದರೆ ಸುಪ್ರೀಂ ಕೋರ್ಟ್​ಗೆ ಹೋಗುವುದು ಮಾತ್ರ ಖಚಿತ ಎಂದು ವಕೀಲ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment