/newsfirstlive-kannada/media/post_attachments/wp-content/uploads/2024/07/BJP-protest-1.jpg)
ಹಗರಣಗಳ ಗದ್ದಲ-ಗಲಾಟೆಗೆ ಸಾಕ್ಷಿಯಾಗಿರೋ ಮುಂಗಾರು ಅಧಿವೇಶನದಲ್ಲಿ ರಾತ್ರಿ ಭಜನೆಯ ಸದ್ದು ಮೊಳಗಿತ್ತು. ಅಧಿವೇಶನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ ಅಂತ ಕೇಸರಿ ಕಲಿಗಳು ಕೆರಳಿ ಕೆಂಡವಾಗಿದ್ರು. ಗೋವಿಂದ, ಗೋವಿಂದ ಅಂತ ವಿಧಾನಸಭೆ ಮೊಗಸಾಲೆಯಲ್ಲಿ ತಾಳ, ಮೇಳ ಹಿಡಿದು ಧರಣಿ ಕೂತಿದ್ರು.
ರಾಜ್ಯ ರಾಜಕಾರಣದ ಶಕ್ತಿಕೇಂದ್ರ ವಿಧಾನಸೌಧದ ಮೊಗಸಾಲೆಯಲ್ಲಿ ಹೈಡ್ರಾಮಾ ನಡೆದಿದೆ. ಬಿಜೆಪಿನ ನಾಯಕರು ಕೈಯಲ್ಲಿ ತಾಳ, ಬಾಯಲ್ಲಿ ರಾಗ ಹಾಡಿದ್ದಾರೆ. ದೇವಸ್ಥಾನದಲ್ಲಿ ಭಜನೆ ಮಾಡಿದಂತೆ ಇವರು ಭಜನೆ ಮಾಡಿದ್ದಾರೆ.
ವಿಧಾನಸಭೆ ಪೂರ್ವ ಮೊಗಸಾಲೆಯಲ್ಲಿ ಭಜನೆ.. ಘೋಷಣೆ
ಮುಂಗಾರು ಅಧಿವೇಶನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ ಅಂತ ಕೇಸರಿ ಕಲಿಗಳು ಕೆರಳಿ ಕೆಂಡವಾಗಿದ್ರು. ವಿಧಾನಸಭೆ ಪೂರ್ವ ಮೊಗಸಾಲೆಯಲ್ಲಿ ವಿಪಕ್ಷನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೀತು. ಗೋವಿಂದ, ಗೋವಿಂದ, 187 ಕೋಟಿ ಗೋವಿಂದ, ಸಾವಿರಾರು ಸೈಟು ಮೈಸೂರಲ್ಲಿ ಗೋವಿಂದ ಅಂತ ಬಿಜೆಪಿ ನಾಯಕರು ಘೋಷಣೆ ಕೂಗಿದ್ರು. ಅಲ್ಲದೇ ಸರ್ಕಾರದ ವತಿಯಿಂದ ನೀಡಿದ ಆಹಾರ, ಹಾಸಿಗೆಯನ್ನು ಇದು ಭ್ರಷ್ಟಾಚಾರದ ದುಡ್ಡಿನದ್ದು ಅಂತ ಬಿಜೆಪಿ ನಾಯಕರು ತಿರಸ್ಕರಿಸಿದ್ರು.
ಇದನ್ನೂ ಓದಿ: ಪ್ರೇಯಸಿ ಜೊತೆ ಇರುವಾಗ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್
ಎನ್.ರವಿಕುಮಾರ್ ಹಾಡಿಗೆ ಧ್ವನಿಗೂಡಿಸಿದ ಬಿಜೆಪಿಗರು!
ವಿಧಾನಸಭೆ ಪೂರ್ವ ಮೊಗಸಾಲೆಯಲ್ಲಿ ಎನ್.ರವಿಕುಮಾರ್ ಹಾಡಿದ ಹಾಡಿಗೆ ತಾಳ-ಮೇಳ ಕೂಡಿಸಿ ಫುಲ್ ಸೌಂಡ್ ಮಾಡಿದ್ರು. ಇನ್ನೂ ಇದೇ ವೇಳೆ ಮಾತನಾಡಿದ ವಿಜಯೇಂದ್ರ ಅಹಿಂದ ನಾಯಕರು ಅಂತ ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡ್ತಿದ್ದಾರೆ ಅಂತ ಕಿಡಿಕಾರಿದ್ರು.
ಡಿಸಿಪಿ ಕರಿಬಸವಗೌಡ ವಿರುದ್ಧ ಆರ್. ಅಶೋಕ್ ಗರಂ
ರಾತ್ರಿ ಧರಣಿಯಲ್ಲಿ ಭಾಗಿಯಾಗಲು ವಿಧಾನಸೌಧಕ್ಕೆ ಎಂಟ್ರಿಕೊಟ್ಟಿದ್ದ ಡೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನುರಾಜು, ಶಾಸಕ ಅನ್ನೋದೆ ತಿಳಿಯದೇ ಡಿಸಿಪಿ ಕರಿಬಸವಗೌಡ ಅವಾಜ್ ಹಾಕಿದ್ರು. ಬಳಿಕ ಶಾಸಕ ಅಂತ ಗೊತ್ತಾದ ಮೇಲೆ ಸಾರಿ ಕೇಳಿದ್ರು. ವಿಷಯ ತಿಳಿದು ಹೊರ ಬಂದ ವಿಪಕ್ಷ ನಾಯಕ ಆರ್.ಅಶೋಕ್ ಡಿಸಿಪಿ ಕರಿಬಸವಗೌಡ ವಿರುದ್ಧ ರಾಂಗ್ ಆದ್ರು.
ಇದನ್ನೂ ಓದಿ: ದೇವಸ್ಥಾನ ಜಲಾವೃತ, ಶಾಲಾ-ಕಾಲೇಜುಗಳಿಗೆ ರಜೆ.. ರಾಜ್ಯದಲ್ಲಿ ಮುಂದುವರೆದ ವರುಣಾರ್ಭಟ
ಒಟ್ಟಿನಲ್ಲಿ ಮುಂಗಾರು ಅಧಿವೇಶನದಲ್ಲಿ ಸದ್ದು-ಗದ್ದಲಕ್ಕೆ ಕಾರಣವಾಗಿರೋ ಹಗರಣಗಳು ರಾತ್ರಿ ಭಜನೆ, ಘೋಷಣೆಯ ಹೈಡ್ರಾಮಕ್ಕೂ ಸಾಕ್ಷಿಯಾಯ್ತು.. ಗೋವಿಂದ, ಗೋವಿಂದ ಅಂತ ಗದ್ದಲಮಾಡಿದ ಬಿಜೆಪಿ ನಾಯಕರು ಬಳಿಕ ಸೋಫಾ ಏರಿ ಮಲಗಿ ನಿದ್ರೆಗೆ ಜಾರಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ