ಸಿದ್ದರಾಮಯ್ಯಗೆ ಕಳಂಕ ರಹಿತ ರಾಜಕೀಯ ನಿವೃತ್ತಿ ಸಿಗದಿರಬಹುದು?
40 ವರ್ಷಗಳ ಸಿದ್ದು ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಅಂಟುತ್ತಾ..?
ರಾಜಕೀಯ ಸಂಧ್ಯಾಕಾಲದಲ್ಲಿ ಸಿದ್ದರಾಮಯ್ಯಗೆ ಇರುಸು ಮುರಿಸು!
ಭಾಗ್ಯಗಳ ಸರ್ದಾರ ಅಂತಾನೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸಿಎಂ ಸಿದ್ದರಾಮಯ್ಯರ ಸುದೀರ್ಘ ರಾಜಕೀಯ ಜೀವನದ ಮೇಲೆ ಕರಿಮೋಡಗಳ ಛಾಯೆ ಆವರಿಸಿದೆ. ಮುಡಾ ಎಂಬ ಹಗರಣ ಸಿದ್ದರಾಮಯ್ಯರ ಮೂಡನ್ನೇ ಹಾಳು ಮಾಡಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಕೊಟ್ಟ ಅನುಮತಿಯಿಂದ ಸಿದ್ದು ರಾಜಕೀಯ ಸಂಧ್ಯಾಕಾಲದಲ್ಲಿ ತೀವ್ರ ಇರುಸುಮುರಿಸು ಸೃಷ್ಟಿಸಿದೆ. ದಶಕಗಳ ಕಾಲ ಕಟ್ಟಿದ ಚರಿತ್ರೆ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತಾಗಿದೆ.
ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್; ಸಚಿವ ಸಂಪುಟ ಸಭೆಯಲ್ಲಿ ಒಂದು ಸಾಲಿನ ನಿರ್ಣಯ ಅಂಗೀಕಾರ..!
ಒಂದಲ್ಲ ಎರಡಲ್ಲ ಬರೋಬ್ಬರಿ 40 ವರ್ಷಗಳು.. 4 ದಶಕಗಳ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಮೇಲೆ ಯಾವುದೇ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಭಾಗ್ಯಗಳ ಸರ್ದಾರ.. ಅನ್ನರಾಮಯ್ಯ, ಅಹಿಂದರಾಮಯ್ಯ, ಗ್ಯಾರಂಟಿರಾಮಯ್ಯ.. ಹೀಗೆ ತಮ್ಮ ಹಿಂಬಾಲಕರಿಂದ, ಅಭಿಮಾನಿಗಳಿಂದ ತರಹೇವಾರಿ ಬಿರುದುಗಳಿಂದ ಕರೆಸಿಕೊಂಡ ಧೀಮಂತ ನಾಯಕ ಸಿದ್ದರಾಮಯ್ಯ. ಆದ್ರೆ ಶ್ವೇತವರ್ಣದ ಬಟ್ಟೆ ಮೇಲೆ ಬಿದ್ದ ಕಪ್ಪು ಮಸಿಯೇ ಎದ್ದು ಕಾಣುವಂತೆ ಈಗ ಈ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ತಳುಕುಹಾಕಿಕೊಂಡಿದೆ. ಮಾತ್ರವಲ್ಲದೆ ಸಿಎಂ ಕುರ್ಚಿ ಅಲುಗಾಡುತ್ತಿದೆ.
ಸಿಎಂ ಸಿದ್ದರಾಮಯ್ಯ.. ಸಿದ್ಧ ಹಸ್ತದ ಶುದ್ಧ ಹಸ್ತದ ನಾಯಕನೆನಿಸಿಕೊಂಡವರು. ಗುರುತರ ಆರೋಪಗಳಿಂದ ಹೊರಗಿದ್ದವರು. ಸದ್ಯ ಮುಡಾ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಿಂದ ಅನುಮತಿ ಸಿಕ್ಕ ಹಿನ್ನೆಲೆ ಅವರ ರಾಜಕೀಯ ಜೀವನ ಹಾಗೂ ಕುಟುಂಬದ ಮೇಲೆ ಹಲವು ಪರಿಣಾಮಗಳು ಬೀರಲಿವೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಅತಿ ದೊಡ್ಡ ಕಾನೂನು ಸಂಕಷ್ಟ? ಯಾವ ಸೆಕ್ಷನ್ ಏನೇನು ಹೇಳುತ್ತೆ?
ಸಿದ್ದರಾಮಯ್ಯ ಮೇಲೆ ಪರಿಣಾಮಗಳೇನು?
ಇದನ್ನೂ ಓದಿ: ಸಂಪುಟ ಸಭೆ ಬೆನ್ನಲ್ಲೇ ಡಿಕೆ ಶಿವಕುಮಾರ್ಗೆ THANKS ಎಂದ ಸಿದ್ದರಾಮಯ್ಯ..!
ಇಷ್ಟು ಮಾತ್ರವಲ್ಲದೆ ಕೋರ್ಟ್ ಮುಂದೆ ನಿಲ್ಲಬೇಕಾದ ಅನಿವಾರ್ಯತೆ ಕೂಡ ಸಿದ್ದರಾಮಯ್ಯಗೆ ಎದುರಾಗಬಹುದು. ಇದರಿಂದ ಮುಜುಗರವಾಗುವ ಸನ್ನಿವೇಶ ಸೃಷ್ಟಿಯಾಗಲಿದೆ. ಆಪ್ತ ವಲಯವೂ ದೂರ ಸರಿಯುವ ಸಾಧ್ಯತೆ ಇದ್ದು ರಾಜಕೀಯವಾಗಿ ಕಪ್ಪು ಚುಕ್ಕೆಯಾಗಿ ಕಾಡುವ ಸಂಭವವಿದೆ. ಪಕ್ಷದೊಳಗಿನ ಹಾಗೂ ಹೊರಗಿನ ಎದುರಾಳಿಗಳಿಗೆ ಪ್ರಬಲ ಅಸ್ತ್ರವಾಗುವ ಜೊತೆಗೆ ಭ್ರಷ್ಟಾಚಾರ ಕುರಿತಂತೆ ಪ್ರತಿಪಕ್ಷಗಳ ವಿರುದ್ಧ ಮಾತನ್ನಾಡುವುದು ಕಷ್ಟವಾಗಲಿದೆ. ಆದ್ರೆ ಹಗರಣದಿಂದ ಹೊರಬಂದ್ರೆ ಈ ಎಲ್ಲ ಮುಜುಗರದಿಂದ ಬಚಾವ್ ಆಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ