/newsfirstlive-kannada/media/post_attachments/wp-content/uploads/2023/11/Siddaramaiah-HDK.jpg)
ಮಂಡ್ಯ: ಮೈಸೂರು ಮುಡಾ ಕಚೇರಿಗೆ (ED) ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿರೋದು ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಇ.ಡಿ ದಾಳಿಯ ಮಧ್ಯೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸದ್ಯ ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಉಪಚುನಾವಣೆಯ ಕಾವು ಜೋರಾಗುತ್ತಿದೆ. ಬೈ ಎಲೆಕ್ಷನ್ ಜಿದ್ದಾಜಿದ್ದಿನ ಮಧ್ಯೆ ಮುಡಾ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣಕ್ಕೆ ಮೇಜರ್ ಟ್ವಿಸ್ಟ್; ಮೈಸೂರು ಕಚೇರಿಯಲ್ಲಿ ಸಂಚಲನ..!
ಮತ್ತೊಂದು ಅತಿ ದೊಡ್ಡ ಮುಡಾ ಪ್ರಕರಣ?
ಮುಡಾ ಕೇಸ್‌ನ 14 ಸೈಟ್‌ಗಳನ್ನ ಬಿಡಿ. ಮೈಸೂರು ಹಿನಕಲ್‌ನ ಜಮೀನು 1986ರಲ್ಲಿ 434 ಎಕರೆ ಹೊಸ ಬಡಾವಣೆ ಮಾಡಲು ನೋಟಿಫಿಕೇಷನ್ ಆಗುತ್ತೆ. ಸತ್ಯಾಮೇವ ಜಯತೆ ಅನ್ನುತ್ತಾರೆ ಆದ್ರೆ 17/4 ರಲ್ಲಿ ಎಲ್ಲಾ ತೆಗೆದರೆ ಗೊತ್ತಾಗುತ್ತದೆ. ಹಿನಕಲ್ ಜಾಗವನ್ನು ಸಿದ್ದರಾಮಯ್ಯ ಅವರ ಹೆಸರಲ್ಲೇ ರಿಜಿಸ್ಟರ್ ಮಾಡಲಾಗಿದೆ.
ಸಾಕಮ್ಮ ಎಂಬುವವರ ಕೈಯಲ್ಲಿ ಅರ್ಜಿ ಹಾಕಿಸಿದ್ದಾರೆ. ಆಮೇಲೆ 20 ದಿನದಲ್ಲಿ ಡಿನೋಟಿಫಿಕೇಷನ್ ಆಗುತ್ತೆ. ಅದನ್ನ ಸಿಎಂ ಸಿದ್ದರಾಮಯ್ಯ ಅವರು ಕೊಂಡುಕೊಂಡಿದ್ದಾರೆ. ಇದು ಮೈಸೂರಿನ ಮತ್ತೊಂದು ಮುಡಾ ಹಗರಣ, ಸರ್ಕಾರಿ ಭೂಮಿಯನ್ನು ಸಿದ್ದರಾಮಯ್ಯ ಅವರ ಹೆಸರಿಗೆ ಕೊಂಡುಕೊಂಡಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us