newsfirstkannada.com

ಬಿಜೆಪಿಗೆ ಗುಡ್​ ಬಾಯ್​ ಹೇಳಿ ಮಾತೃ ಪಕ್ಷದತ್ತ ಮುಖ ಮಾಡಿದ ಮುದ್ದಹನುಮೇಗೌಡ‌; ಇಂದು ಸಂಜೆ ಕಾಂಗ್ರೆಸ್​ಗೆ ಸೇರ್ಪಡೆ

Share :

Published February 22, 2024 at 9:13am

    ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್

    ಬಿಜೆಪಿಯಿಂದ ಕಾಂಗ್ರೆಸ್​ನತ್ತ ಹೊರಟ ಮಾಜಿ ಸಂಸದ ಮುದ್ದಹನುಮೇಗೌಡ‌

    ಇಂದು ಸಂಜೆ ಮಾತೃ ಪಕ್ಷದತ್ತ ಮುಖ ಮಾಡುತ್ತಿರುವ ಮಾಜಿ ಸಂಸದ

ತುಮಕೂರು: ದೇಶದಾದ್ಯಂತ ಲೋಕಸಭಾ ಚುನಾವಣೆ ಗರಿಗೆದರಿಗೆ. ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಈ ಹೊತ್ತಲ್ಲಿ ರಾಜ್ಯ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಮಾಜಿ ಸಂಸದ ಮುದ್ದಹನುಮೇಗೌಡ‌ ಮಾತೃ ಪಕ್ಷದತ್ತ ಮುಖ ಮಾಡಿದ್ದಾರೆ.

ಮಾಜಿ ಸಂಸದ ಮುದ್ದಹನುಮೇಗೌಡ‌ ಇಂದು ಬಿಜೆಪಿಗೆ ಗುಡ್ ಬಾಯ್ ಹೇಳಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಇಂದು ಸಂಜೆ‌ 4 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಸಚಿವರಾದ ಜಿ.ಪರಮೇಶ್ವರ್, ಕೆ ಎನ್ ರಾಜಣ್ಣ‌ ಸಮ್ಮುಖದಲ್ಲಿ ಸೇರ್ಪಡೆ ಆಗಲಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮುದ್ದಹನುಮೇಗೌಡ‌ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿಯಲ್ಲೂ ವಿಧಾನಸಭಾ ಟಿಕೆಟ್ ವಂಚಿತರಾಗಿದ್ದರು. ಇದೀಗ ಬಿಜೆಪಿಯಿಂದ ತುಮಕೂರು ಲೋಕಸಭಾ ಚುನಾವಣೆಗೆ ಪ್ರಬಲ ಟಿಕೆಟ್ ಅಕಾಂಕ್ಷಿ ಆಗಿದ್ದ ಮುದ್ದಹನುಮೇಗೌಡ‌ ಟಿಕೆಟ್ ಕೈ ತಪ್ಪುವ ಭೀತಿ ಹಿನ್ನೆಲೆ ಮತ್ತೆ ಮಾತೃ ಪಕ್ಷ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಗೆ ಗುಡ್​ ಬಾಯ್​ ಹೇಳಿ ಮಾತೃ ಪಕ್ಷದತ್ತ ಮುಖ ಮಾಡಿದ ಮುದ್ದಹನುಮೇಗೌಡ‌; ಇಂದು ಸಂಜೆ ಕಾಂಗ್ರೆಸ್​ಗೆ ಸೇರ್ಪಡೆ

https://newsfirstlive.com/wp-content/uploads/2024/02/mudda-hanumegowda.jpg

Load More