/newsfirstlive-kannada/media/post_attachments/wp-content/uploads/2025/07/trivikarm.jpg)
ತ್ರಿವಿಕ್ರಮ್​ ನಟನೆಯ ಮತ್ತೊಂದು ಮಜಲು ತೋರಿಸ್ತಿರೋ ಧಾರಾವಾಹಿ ಮುದ್ದು ಸೊಸೆ. ಮಂಡ್ಯ ಹೈದನ ಸ್ಟೈಲ್​ ಆ ಗತ್ತು. ಗಮ್ಮತ್ತು ರೂಢಿಸಿಕೊಂಡು, ನಿಧಾನವಾಗಿ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡ್ತಿದ್ದಾರೆ. ನಾಯಕಿ ಪ್ರತಿಮಾ ವಯಸ್ಸಿಗೆ ತಕ್ಕಂತೆ ಮುದ್ದಾಗಿ ಅಭಿನಯಿಸ್ತಿದ್ದು, ಕಲರ್ಸ್​ ವಾಹಿನಿ ನಂಬರ್​ ಒನ್​ ಧಾರಾವಾಹಿಯಾಗಿ ಮಿಂಚುತ್ತಿದೆ ಮುದ್ದು ಸೊಸೆ.
/newsfirstlive-kannada/media/post_attachments/wp-content/uploads/2025/07/trivikarm1.jpg)
ಸದ್ಯ, ಸೋಷಿಯಲ್​ ಮೀಡಿಯಾದಲ್ಲಿ ಬೆಂಗಾಲ್​ ಬಂಗಾರಿದೇ ಟ್ರೆಂಡು. ಈ ಥೀಮ್​ನ ಸೀರಿಯಲ್​ಗೂ ಅಳವಡಿಸಿದೆ ತಂಡ. ಮುದ್ದಿನ ಮಡದಿಗೆ ಬಳೆ ತೋಡಿಸಿ ಆನಂದಿಸೋ ಭದ್ರೆ ಗೌಡ, ವಿದ್ಯಾಗೆ ದೃಷ್ಟಿ ತೆಗೆದು ಮುದ್ದಿಸ್ತಾನೆ. ಇದು ತೆರೆ ಮೇಲಿನ ಕಥೆ ಒಂದು ಕಡೆಯಾದ್ರೆ, ತೆರೆ ಹಿಂದಿನ ಕಹಾನಿನೇ ಬೇರೆ.
View this post on Instagram
ಡ್ಯಾನ್ಸ್ ಅಂದ್ರೇ ನೂರು ಮೈಲಿ ಓಡಿ ಹೋಗೋ ವಿಕ್ಕಿಗೆ ಪ್ರತಿಮಾ ಬಂಗಾರಿ ಸ್ಟೆಪ್​ ಹೇಳಿ ಕೊಟ್ಟು ಕೊನೆಗೂ ಹೀರೋನ ಕುಣಿಸೇ ಬಿಟ್ಟಿದ್ದಾರೆ. ನಟನೆ ಮಾತ್ರ ಸೀರಿಯಲ್​ಗೆ ​ ಸೀಮಿತ ಆದ್ರೆ ಹೆಂಗೆ ಹೇಳಿ? ಅಭಿಮಾನಿಗಳಿಗಾಗಿ ಆದ್ರೂ ಬಂದು ರೀಲ್ಸ್ ಬೇಕಲ್ವಾ.. ಪ್ರತಿಮಾಳ ಕೈ ಹಿಡಿದುಕೊಂಡು ಬ್ಯಾಂಗಲ್​ ಬಂಗಾರಿ ಅಂತ ಸ್ಟೆಪ್ ಹಾಕಿದ್ದಾರೆ ತ್ರಿವಿಕ್ರಮ್. ಇದೇ ರೀಲ್ಸ್​ ಇನ್​ಸ್ಟಾಗ್ರಾಮ್​ನಲ್ಲಿ 6.1 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ಇದೇ ರೀಲ್ಸ್ ನೋಡಿದ ಅಭಿಮಾನಿಗಳ ಕಣ್ಣು ತಂಪಾಗಿದೆ. ಅಂತೂ ಇಂತೂ ಭದ್ರನ ತೋಳಲ್ಲಿ ವಿದ್ಯಾ ಸೇರೆ ಆಗಿರೋದು ವೀಕ್ಷಕರಿಗೆ ಕಚಗುಳಿ ಇಟ್ಟಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us