newsfirstkannada.com

ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ ಪ್ರಕರಣ.. ಮನೆಯ ಹಿಂಬದಿಯ ಚರಂಡಿಯಲ್ಲಿ ಚಿನ್ನದ ಬಳೆ, ಶೂಗಳು ಪತ್ತೆ

Share :

Published April 19, 2024 at 7:25am

    ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ

    ಮನೆಯ ಹಿಂಬದಿಯ ಚರಂಡಿಯಲ್ಲಿ ಸಿಕ್ತು ಶೂ ಮತ್ತು ಚಿನ್ನದ ಬಳೆಗಳು

    ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದವರನ್ನು ಕೊಂದ ದುಷ್ಕರ್ಮಿಗಳು

ಗದಗ ನಗರದ ದಾಸರ ಓಣಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ ಪ್ರಕರಣ ನಡೆದಿತ್ತು. ಒಂದೇ ಕುಟುಂಬದ ನಾಲ್ವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ದುಷ್ಕರ್ಮಿಗಳು ಕೊಲೆ ಮಾಡಿದ ಬಳಿಕ ಮೂರು ಜಂಬೆಗಳನ್ನ ಎಸೆದುಹೋಗಿರೋದು ಬೆಳಕಿಗೆ ಬಂದಿದೆ. ಮನೆಯ ಹಿಂಬದಿಯ ಚರಂಡಿಯಲ್ಲಿ ಜಂಬೆಗಳು ಪತ್ತೆಯಾಗಿವೆ. ಚಿನ್ನದ ಬಳೆಗಳು, ಒಂದು ಜತೆ ಶೂಗಳು ಪತ್ತೆಯಾಗಿವೆ.

ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ 27, ಪರಶುರಾಮ 55, ಪತ್ನಿ ಲಕ್ಷ್ಮೀ 45, ಪುತ್ರಿ ಆಕಾಂಕ್ಷಾ 16 ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಕೊಲೆ ಮಾಡಿ  ಪರಾರಿಯಾಗಿದ್ದರು.

ಪತಿ, ಪತ್ನಿ, ಮಗಳು ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದರು. ಈ ಮೂವರು ಕೊಪ್ಪಳ ಮೂಲದವರಾಗಿದ್ದಾರೆ. ಏಪ್ರಿಲ್‌ 17 ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ ನ ಮದುವೆ ಕಾರ್ಯಕ್ರಮವಿತ್ತು. ಹೀಗಾಗಿ ಸಂಬಧಿಗಳು ಆಗಮಿಸಿದ್ದರು. ಬಾಗಿಲು ಸದ್ದು ಕೇಳಿ ಅನುಮಾನಗೊಂಡು ಪೊಲೀಸರಿಗೆ ಕುಟುಂಬಸ್ಥರು‌ ಫೋನ್ ಮಾಡಿದ್ದಾರೆ. ಪೊಲೀಸರಿಗೆ ಫೋನ್ ಮಾಡ್ತಾಯಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಕಾರ್ಪೊರೇಟರ್ ಮಗಳ ಕೊಲೆ ಕೇಸ್​.. ಆರೋಪಿಯನ್ನು ಎನ್​ಕೌಂಟರ್ ಮಾಡುವಂತೆ ಹಿಂದೂ ಕಾರ್ಯಕರ್ತರು ಒತ್ತಾಯ

ಶ್ವಾನದಳ, ಫಾರಿನ್ ಸಿಕ್ ತಂಡಗಳಿಂದ ಇಂಚಿಂಚು ಪರಿಶೀಲನೆ ನಡೆಯುತ್ತಿದೆ. ಸ್ಥಳಕ್ಕೆ ಎಸ್ಪಿ ಬಿ.ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ, ಡಿವೈಎಸ್ಪಿ, ಸಿಪಿಐ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ ಪ್ರಕರಣ.. ಮನೆಯ ಹಿಂಬದಿಯ ಚರಂಡಿಯಲ್ಲಿ ಚಿನ್ನದ ಬಳೆ, ಶೂಗಳು ಪತ್ತೆ

https://newsfirstlive.com/wp-content/uploads/2024/04/Gadaga-1.jpg

Load More