/newsfirstlive-kannada/media/post_attachments/wp-content/uploads/2024/07/RCR_FIRE_1.jpg)
ರಾಯಚೂರು: ಮೊಹರಂ ಆಚರಣೆ ವೇಳೆ ಕೊಂಡ ಹಾಯುವಾಗ ವ್ಯಕ್ತಿಯೊಬ್ಬರು ಆಯತಪ್ಪಿ ಬೆಂಕಿಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಮಸ್ಕಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ಫಿಲ್ಮಿ ರೇಂಜ್ನಲ್ಲಿ ಶೆಡ್ಗೆ ಬೆಂಕಿಯಿಟ್ಟು ಸಾಯಿಸಿದ್ರು.. ಮೃತ ಸಭಾನಾಳ PSI ಕನಸು ಸುಟ್ಟು ಹೋಯ್ತು..
ಬೊಮ್ಮನಾಳ ಗ್ರಾಮದ ನಿವಾಸಿ ಯಮನಪ್ಪ ನಾಯಕ್ (45) ಮೃತಪಟ್ಟ ವ್ಯಕ್ತಿ. ಹಿಂದೂ- ಮುಸ್ಲಿಂರ ಭಾವೈಕ್ಯತೆ ಹಬ್ಬ ಮೊಹರಂ. ಈ ಹಬ್ಬದ ಆಚರಣೆ ವೇಳೆ ದೇವರು ತಮ್ಮ ಬೇಡಿಕೆ ಈಡೇರಿಸುತ್ತಾರೆ ಎಂದು ಕೆಲವರು ಕೊಂಡ ಹಾಯುತ್ತಾರೆ. ಅದರಂತೆ ಯಮನಪ್ಪ ಕೊಂಡ ಆಯುವಾಗ ಆಯತಪ್ಪಿ ಬೆಂಕಿಯಲ್ಲಿ ಬಿದ್ದು ಸುಟ್ಟು ಹೋಗಿದ್ದಾರೆ. ತಕ್ಷಣ ಗ್ರಾಮಸ್ಥರೆಲ್ಲ ಸೇರಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಕೆಂಡದಲ್ಲಿ ಬಿದ್ದ ಪರಿಣಾಮ ವ್ಯಕ್ತಿಗೆ ಗಂಭೀರವಾದ ಸುಟ್ಟ ಗಾಯಗಳು ಆಗಿದ್ದವು.
ಇದನ್ನೂ ಓದಿ: PUC ರಿಸಲ್ಟ್ ಔಟ್.. ದ್ವಿತೀಯ ಪಿಯುಸಿ ಪರೀಕ್ಷೆ- 3ರಲ್ಲೂ ಬಾಲಕಿಯರೇ ಮೇಲುಗೈ
ವ್ಯಕ್ತಿ ಕೆಂಡದಲ್ಲೇ ಶೇಕಡಾ 90 ರಷ್ಟು ಸುಟ್ಟು ಹೋಗಿದ್ದರಿಂದ ಮೃತಪಟ್ಟಿದ್ದಾರೆ. ಇನ್ನು ಬೆಂಕಿಯಲ್ಲಿ ಬಿದ್ದು ವ್ಯಕ್ತಿ ದಹನವಾಗುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಈ ಸಂಬಂಧ ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ