/newsfirstlive-kannada/media/post_attachments/wp-content/uploads/2024/06/jio3.jpg)
ಹೊಸ ವರ್ಷಕ್ಕೆ ಈಗಾಗಲೇ ಕಾಲಿಟ್ಟು ಹಲವು ಗಂಟೆಗಳೇ ಕಳೆದಿವೆ. ಹೊಸ ವರ್ಷಕ್ಕೆ ಮುಖೇಶ್ ಅಂಬಾನಿಯವರ ಜೀಯೋ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಒಟ್ಟು 200 ದಿನದ ಪ್ಲ್ಯಾನ್ ಇದಾಗಿದ್ದು. 500 ಜಿಬಿ ಡಾಟಾ ಅದರ ಜೊತೆಗೆ ಅನಿಯಮಿತ ಕರೆ ಹಾಗೂ ಪ್ರತಿದಿನ 100 ಎಸ್ಎಮ್ಎಸ್ಗಳು ಫ್ರೀ ಸಿಗಲಿವೆ. ಈ ಆಫರ್ನ ಬೆಲೆ ಒಟ್ಟು 2,150 ರೂಪಾಯಿಗಳು ಎಂದು ಜೀಯೋ ಹೇಳಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಬಂದ ಸಂದೇಶಗಳ ಬಗ್ಗೆ ಇರಲಿ ಎಚ್ಚರ; ಒಂದೇ ಒಂದು ಕ್ಲಿಕ್ನಿಂದ ಬದುಕಿಗೆ ಬೀಳುತ್ತೆ ಪೆಟ್ಟು..!
ರಿಯಲಯನ್ಸ್ ಜೀಯೋ ಹೊಸ ವರ್ಷದ ಸ್ವಾಗತ ಯೋಜನೆಯನ್ನ ಜನವರಿ 11ರವರೆಗೆ ವಿಸ್ತರಿಸಿದೆ. ಈ ಪ್ಲ್ಯಾನ್ನಲ್ಲಿ ಈಗಾಗಲೇ ಹೇಳಿದಂತೆ ಅನಿಯಮಿತ ಕರೆಗಳನ್ನು ನೀವು ಮಾಡಬಹುದು. ಮೈ ಜಿಯೋ ಆ್ಯಪ್ಗೆ ಹೋಗಿ ನೀವು ಈ ಪ್ಲ್ಯಾನ್ನನ್ನು ಈಗಲೇ ನಿಮ್ಮದಾಗಿಸಿಕೊಳ್ಳಬಹುದು ಇದರ ಮಾಹಿತಿ ಈ ಕೆಳಗಿನಂತಿದೆ.
ಪ್ಯಾಕ್ನ ಅವಧಿ; 200 ದಿನಗಳು
ಒಟ್ಟು ಸಿಗುವ ಡಾಟಾ- 500ಜಿಬಿ
ಡಾಟಾದ ಒಟ್ಟು ಸ್ಪೀಡ್- 2.5/ದಿನಕ್ಕೆ
ಕರೆ- ಅನಿಯಮಿತ
ಎಸ್ಎಂಎಸ್- ದಿನಕ್ಕೆ 100
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ