newsfirstkannada.com

ಅಯೋಧ್ಯೆ ರಾಮಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆ ಕೊಟ್ಟ ಅಂಬಾನಿ ಫ್ಯಾಮಿಲಿ; ಎಷ್ಟು ಕೋಟಿ?

Share :

Published January 22, 2024 at 8:50pm

Update January 22, 2024 at 8:51pm

  ಕುಟುಂಬ ಸದಸ್ಯರ ಜೊತೆ ಅಯೋಧ್ಯೆಗೆ ಆಗಮಿಸಿದ್ದ ಅಂಬಾನಿ

  ಜೈ ಶ್ರೀರಾಮ್‌.. ಜೈ ಶ್ರೀರಾಮ್‌ ಎಂದ ಮುಕೇಶ್, ನೀತಾ ಅಂಬಾನಿ

  2022ರಲ್ಲಿ ಬದ್ರಿನಾಥ್, ಕೇದರನಾಥ್ ದೇಗುಲಕ್ಕೆ 5 ಕೋಟಿ ರೂ. ದೇಣಿಗೆ

ಮುಂಬೈ: ರಾಮಲಲ್ಲಾ ಪ್ರತಿಷ್ಠಾಪನೆಯ ದಿನವೇ ಅಯೋಧ್ಯೆ ರಾಮಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆಯನ್ನು ಅಂಬಾನಿ ಕುಟುಂಬ ಘೋಷಣೆ ಮಾಡಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಮಗಳು ಇಶಾ, ಅಳಿಯ ಆನಂದ್ ಪಿರಾಮಲ್, ಪುತ್ರರಾದ ಆಕಾಶ್ ಮತ್ತು ಅನಂತ್, ಸೊಸೆ ಶ್ಲೋಕಾ ಮೆಹ್ತಾ ಮತ್ತು ಮತ್ತೊಬ್ಬ ಅಳಿಯ ರಾಧಿಕಾ ಮರ್ಚೆಂಟ್ ಜೊತೆ ಭಾಗಿಯಾಗಿದ್ದರು. ಕುಟುಂಬ ಸಮೇತರಾಗಿ ರಾಮಮಂದಿರ ಉದ್ಘಾಟನೆಗೆ ಆಗಮಿಸಿದ್ದ ಮುಕೇಶ್ ಅಂಬಾನಿ ಕುಟುಂಬ ಶ್ರೀರಾಮನ ಆಶೀರ್ವಾದ ಪಡೆದಿದ್ದರು.

ಅಯೋಧ್ಯೆಗೆ ಆಗಮಿಸಿದ್ದ ಮುಕೇಶ್ ಅಂಬಾನಿ ಇಡೀ ದೇಶವೇ ಇಂದು ದೀಪಾವಳಿ ಆಚರಿಸುತ್ತಿದೆ. ಜೈ ಶ್ರೀರಾಮ್‌ ಎಂದು ಸಂತಸ ವ್ಯಕ್ತಪಡಿಸಿದ್ದರು. ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯಾದ ಕೆಲವೇ ಗಂಟೆಯಲ್ಲಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಮುಕೇಶ್ ಅಂಬಾನಿ ತಮ್ಮ ದೇಣಿಗೆ ಮೊತ್ತವನ್ನು ಪ್ರಕಟಿಸಿದ್ದಾರೆ. ಅಂಬಾನಿ ಕುಟುಂಬ ಬರೋಬ್ಬರಿ 2.51 ಕೋಟಿ ರೂಪಾಯಿ ದೇಣಿಗೆಯನ್ನು ರಾಮಜನ್ಮಭೂಮಿ ಟ್ರಸ್ಟ್‌ಗೆ ನೀಡುವುದಾಗಿ ಘೋಷಿಸಿದ್ದಾರೆ.

ಕೋಟ್ಯಾಂತರ ರೂಪಾಯಿ ದೇಣಿಗೆ ಕೊಟ್ಟು ಸುದ್ದಿಯಾಗುವ ಅಂಬಾನಿ ಕುಟುಂಬ ರಾಮಲಲ್ಲಾ ಪ್ರತಿಷ್ಠಾಪನೆಯಾದ ದಿನವೇ ರಾಮಮಂದಿರ ಟ್ರಸ್ಟ್‌ 2.51 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಹೇಳಿದೆ. ಈ ಹಣವನ್ನು ರಾಮಮಂದಿರ ನಿರ್ಮಾಣ ಮತ್ತು ನಿರ್ವಹಣೆಗೆ ಬಳಸಿಕೊಳ್ಳಲು ಕೋರಲಾಗಿದೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಮುಂಬೈನ ತಮ್ಮ ನಿವಾಸವನ್ನು ಜೈಶ್ರೀರಾಮ್ ಅನ್ನೋ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿಕೊಂಡಿದ್ದರು.

ಯಾವ್ಯಾವ ದೇವಸ್ಥಾನಕ್ಕೆ ಎಷ್ಟು ಕೋಟಿ?
ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್‌ ಅಧ್ಯಕ್ಷರಾದ ಮುಕೇಶ್ ಅಂಬಾನಿ ಅವರು ದೇವಸ್ಥಾನಗಳಿಗೆ ಕೋಟ್ಯಾಂತರ ರೂಪಾಯಿ ದೇಣಿಗೆ ನೀಡುವುದು ಇದೇ ಮೊದಲಲ್ಲ. 2023 ಅಕ್ಟೋಬರ್‌ನಲ್ಲಿ ಬದ್ರಿನಾಥ್, ಕೇದರನಾಥ್ ದೇಗುಲ ಕಮಿಟಿಗೆ 5 ಕೋಟಿ ರೂಪಾಯಿ, 2023 ಫೆಬ್ರವರಿಯಲ್ಲಿ ಗುಜರಾತ್‌ನ ಸೋಮನಾಥ್ ದೇವಾಲಯ ಟ್ರಸ್ಟ್‌ಗೆ 1.51 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. 2022ರ ಸೆಪ್ಟೆಂಬರ್‌ನಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ 1.50 ಕೋಟಿ ರೂಪಾಯಿ, ಕೇರಳದ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೂ 1.50 ಕೋಟಿ ರೂಪಾಯಿಯನ್ನು ದೇಣಿಗೆ ನೀಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆ ರಾಮಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆ ಕೊಟ್ಟ ಅಂಬಾನಿ ಫ್ಯಾಮಿಲಿ; ಎಷ್ಟು ಕೋಟಿ?

https://newsfirstlive.com/wp-content/uploads/2024/01/Mukesh-Ambani-1.jpg

Load More