/newsfirstlive-kannada/media/post_attachments/wp-content/uploads/2024/07/hardik-Padya.jpg)
ರಿಲಯನ್ಸ್​​ ಮಾಲೀಕ ಮುಖೇಶ್​ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ಮನೆಯಲ್ಲಿ ಸಂತಸದ ಸಂಭ್ರಮ. ಮಗ ಅನಂತ್​ ಅಂಬಾನಿಮತ್ತು ರಾಧಿಕಾ ಅವರ ವಿವಾಹ ಸಂತಸದಲ್ಲಿ ಅಂಬಾನಿ ಕುಟುಂಬವಿದೆ. ಈ ಮದುವೆ ಕಾರ್ಯಕ್ರಮಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಅಷ್ಟೇ ಏಕೆ ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಸೇರಿ ಅನೇಕ ಕ್ರಿಕೆಟ್​​ ತಾರೆಯರು ಕೂಡ ಆಗಮಿಸಿದ್ದಾರೆ. ಈ ವೇಳೆ ಅಂಬಾನಿ ಕುಟುಂಬ ವಿಶ್ವಕಪ್​ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
ಅನಂತ್-ರಾಧಿಕಾ ಸಂಗೀತ ಸಮಾರಂಭದಲ್ಲಿ ಟೀಂ ಇಂಡಿಯಾ ಆಟಗಾರರು ಸಮೇತ ಭಾಗಿಯಾಗಿದ್ದರು. ರೋಹಿತ್ ಶರ್ಮಾ, ಸೂರ್ಯಕುಮಾರ್​ ಯಾದವ್​, ಹಾರ್ದಿಕ್ ಪಾಂಡ್ಯ ಕಪ್ಪು ಬಣ್ಣದ ಬಟ್ಟೆ ಧರಿಸಿ ಕಂಗೊಳಿಸಿದ್ದರು. ಈ ವೇಳೆ ನೀತಾ ಅಂಬಾನಿಯವರು ಮೂವರನ್ನ ವೇದಿಕೆ ಮೇಲೆ ಕರೆದು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಪವಿತ್ರಾ ಗೌಡ ಬಗ್ಗೆ ‘ಆಶಿಕಿ’ ನಿರ್ದೇಶಕಿ ಟಾಕ್​.. ಹೀರೋಯಿನ್ ಆಗಬೇಕು ಅನ್ನೋರು ಈ ಥರಾ ಇರಲ್ಲ!
ರೋಹಿತ್ ಶರ್ಮಾ ವೇದಿಕೆ ಮೇಲೆ ಬರುತ್ತಿದ್ದಂತೆ ನೀತಾ ಅಂಬಾನಿ ಅವರನ್ನು ಬಿಗಿದಪ್ಪಿಕೊಂಡು ಭಾವುಕರಾಗಿದ್ದಾರೆ. ಅಷ್ಟು ಮಾತ್ರವಲ್ಲದೆ, ಟೀಮ್ ಇಂಡಿಯಾ ಆಟಗಾರರಿಗೆ ಹೂಮಳೆಯ ಸ್ವಾಗತ ಕೋರಿದ್ದಾರೆ. ಇನ್ನು ಈ ಸಮಾರಂಭದಲ್ಲಿ ಅನೇಕ ಬಾಲಿವುಡ್​ ತಾರೆಯರು ಸಹ ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us