/newsfirstlive-kannada/media/post_attachments/wp-content/uploads/2025/02/mukesh-ambani.jpg)
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ, ಉದ್ಯಮಿ ಮುಕೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಭೇಟಿ ಕೊಟ್ಟಿದ್ದಾರೆ.
ಇದನ್ನೂ ಓದಿ:ರಮ್ಯಾ ಬಳಿ ಪ್ರೀತಿಯ ಮಗಳಿಗಾಗಿ ದುನಿಯಾ ವಿಜಿ ಕೇಳಿಕೊಂಡಿದ್ದು ಏನು ಗೊತ್ತಾ..? Video
ಕುಟುಂಬ ಸಮೇತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರೋ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಇಂದು ಮಧ್ಯಾಹ್ನ ಪ್ರಯಾಗ್‌ರಾಜ್ ಭೇಟಿ ನೀಡಿದ ಮುಕೇಶ್ ಅಂಬಾನಿ, ಅವರ ತಾಯಿ ಕೋಕಿಲಾಬೆನ್ ಅಂಬಾನಿ ಕೂಡ ಬಂದಿದ್ದರು.
ಪುತ್ರರಾದ ಅನಂತ್ ಮತ್ತು ಆಕಾಶ್ ಅಂಬಾನಿ, ಆಕಾಶ್ ಅವರ ಪತ್ನಿ ಶ್ಲೋಕಾ ಮೆಹ್ತಾ ಮತ್ತು ಅವರ ಇಬ್ಬರು ಮಕ್ಕಳಾದ ಪೃಥ್ವಿ ಮತ್ತು ವೇದಾ, ಅನಂತ್ ಅಂಬಾನಿ ಪತ್ನಿ ರಾಧಿಕಾ ಅವರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಸಂಗಮದಲ್ಲಿ ಸ್ನಾನ ಮಾಡಿದ ಬಳಿಕ, ಅಂಬಾನಿ ಕುಟುಂಬಸ್ಥರು ನಿರಂಜನಿ ಅಖಾಡದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರ ಸಮ್ಮುಖದಲ್ಲಿ ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದೆ.
ಕುಂಭಮೇಳ ಭೇಟಿ ವೇಳೆ ಅಂಬಾನಿ ಅವರ ಕುಟುಂಬ ಪರಮತೀರ್ಥ ತ್ರಿವೇಣಿ ಪುಷ್ಪ ಆಶ್ರಮದಲ್ಲಿ ನಡೆದ ಯಜ್ಞದಲ್ಲಿ ಭಾಗವಹಿಸಿದೆ. ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬ ನಮ್ಮ ಆಶ್ರಮಕ್ಕೆ ಭೇಟಿ ನೀಡಿದ್ದು, ಸ್ವಾಮಿ ಚಿದಾನಂದ ಸರಸ್ವತಿ ಅವರ ನೇತೃತ್ವದಲ್ಲಿ ನಡೆದ ಯಜ್ಞದಲ್ಲಿ ಭಾಗವಹಿಸಿತ್ತು ಎಂದು ಆಶ್ರಮ ಪ್ರಕಟಣೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ