Advertisment

ಅಂಬಾನಿ ಫ್ಯಾಮಿಲಿ ಒಟ್ಟು ಆಸ್ತಿ ₹25750000000000; ಈ 3 ಫ್ಯಾಮಿಲಿಗಳೇ ಭಾರತದ ಟಾಪ್ ಶ್ರೀಮಂತರು!

author-image
Bheemappa
Updated On
ಅಂಬಾನಿ ಫ್ಯಾಮಿಲಿ ಒಟ್ಟು ಆಸ್ತಿ ₹25750000000000; ಈ 3 ಫ್ಯಾಮಿಲಿಗಳೇ ಭಾರತದ ಟಾಪ್ ಶ್ರೀಮಂತರು!
Advertisment
  • ಭಾರತ ಜಿಡಿಪಿಯ ಶೇ.10ರಷ್ಟಕ್ಕೆ ಅಂಬಾನಿ ಕುಟುಂಬದ ಆಸ್ತಿ ಸಮ
  • ಭಾರತದ ಆರ್ಥಿಕ ರಚನೆ ಮೇಲೆ 3 ಕುಟುಂಬ ಪ್ರಭಾವ ಬೀರುತ್ತವಾ?
  • ಅಂಬಾನಿ ಕುಟುಂಬದ ಒಟ್ಟು ಆಸ್ತಿ ಎಷ್ಟಿದೆ ಅಂತ ಲೆಕ್ಕ ಹಾಕುತ್ತೀರಾ?

ಭಾರತದಲ್ಲಿ ಅಂಬಾನಿ ಫ್ಯಾಮಿಲಿ ಎಂದರೆ ಅಗರ್ಭ ಶ್ರೀಮಂತ ಕುಟುಂಬ. ಈ ಕುಟುಂಬದಿಂದ ಯಾವುದೇ ಕಾರ್ಯಕ್ರಮವಾಗಲಿ ಅದು ಜಗಮಗಿಸುತ್ತದೆ. ಮುಖೇಶ್ ಅಂಬಾನಿಯ ಕಿರಿಯ ಪುತ್ರನ ವಿವಾಹ ಸಮಾರಂಭ ಇಡೀ ವಿಶ್ವವನ್ನೇ ಬೆರಗುಗೊಳಿಸಿತ್ತು. ಸದ್ಯ ಇದರ ಬೆನ್ನಲ್ಲೇ ಅಂಬಾನಿ ಕುಟುಂಬದ ಒಟ್ಟು ಆಸ್ತಿ ಎಷ್ಟಿದೆ ಎಂದು ಕೇಳಿದ್ರೆ.. ಅಬ್ಬಾ..! ಇಷ್ಟೊಂದು ಆಸ್ತಿನಾ ಅನಿಸುತ್ತದೆ.

Advertisment

ಇದನ್ನೂ ಓದಿ:ಒಲಿಂಪಿಕ್ಸ್​ನ ಯುವ ಪ್ಲೇಯರ್​ಗೆ ಕೋಟಿ ರೂಪಾಯಿ ಅನೌನ್ಸ್​.. ವಿಡಿಯೋ ಕಾಲ್ ಮಾಡಿ ಮಾತಾಡಿದ CM

2024 ರ ಬಾರ್ಕ್ಲೇಸ್-ಹುರುನ್ ಇಂಡಿಯಾ ವರದಿ ಪ್ರಕಾರ ಅಂಬಾನಿ ಕುಟುಂಬದ ಒಟ್ಟು ಆಸ್ತಿ ₹25.75 ಟ್ರಿಲಿಯನ್ ಆಗಿದೆ. ಅಂದರೆ ₹25750000000000 ರಷ್ಟು ಇದೆ. ಇದು ನಮ್ಮ ದೇಶದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇಕಡಾ 10ಕ್ಕೆ ಸಮನವಾಗಿದೆ. ಅಂಬಾನಿ ಕುಟುಂಬ ಭಾರತದ ಆರ್ಥಿಕ ರಚನೆಯ ಮೇಲೆ ಪ್ರಭಾವ ಬೀರುತ್ತಿದೆ. 2024ರ ಮಾರ್ಚ್​ವರೆಗಿನ ಈ ಮೌಲ್ಯಮಾಪವಾಗಿದೆ. ಇದರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಜಿಯೋ ಪ್ಲಾಟ್‌ಫಾರ್ಮ್‌ಗಳು ಹಾಗೂ ರಿಲಯನ್ಸ್ ರಿಟೇಲ್‌ನಲ್ಲಿನ ಪ್ರಮುಖ ಹಿಡುವಳಿಗಳನ್ನ ಒಳಗೊಂಡಿದೆ. ಅಂದಾಜು ತಪ್ಪಿಸಲು ಪ್ರವೇಟ್ ಇನ್ವೆಸ್ಟ್​ಮೆಂಟ್ ಹಾಗೂ ಲಿಕ್ವಿಡ್ ಅಸೆಟ್ಸ್​​ ಇದರಲ್ಲಿ ಪರಿಹಣನೆಗೆ ತೆಗೆದುಕೊಂಡಿಲ್ಲ. ಇವುಗಳನ್ನ ಬಿಟ್ಟು ಅಂಬಾನಿ ಆಸ್ತಿ ₹25.75 ಟ್ರಿಲಿಯನ್ ಇದೆ ಎಂದು ವರದಿ ಹೇಳುತ್ತಿದೆ.

ಇದನ್ನೂ ಓದಿ: ಪಡ್ಡೆಹುಡುಗರ ಕಣ್ಣು ತಂಪು ಮಾಡಿದ ನಿವೇದಿತಾ ಗೌಡ.. ಹಾಟ್​ ಆಗಿ ಕಾಣಿಸಿದ ಬಿಗ್​ಬಾಸ್​ ಬ್ಯೂಟಿ!

Advertisment

publive-image

ಅಂಬಾನಿ ಕುಟುಂಬದ ನಂತರ ಬಜಾಜ್ ಫ್ಯಾಮಿಲಿ 2ನೇ ಸ್ಥಾನದಲ್ಲಿದ್ದು ₹7.13 ಟ್ರಿಲಿಯನ್ ಆಸ್ತಿ ಹೊಂದಿದೆ. ಆಟೋಮೊಬೈಲ್ ಸೆಕ್ಟರ್​​ನಲ್ಲಿ ಬಜಾಜ್ ಫ್ಯಾಮಿಲಿ ಗಣನೀಯ ಬ್ಯುಸಿನೆಸ್ ಹೊಂದಿದೆ. 3ನೇ ಸ್ಥಾನದಲ್ಲಿ ಬಿರ್ಲಾ ಫ್ಯಾಮಿಲಿ ಇದ್ದು ಮೆಟಲ್ ಹಾಗೂ ಫೈನಾನ್ಸ್​ ಕ್ಷೇತ್ರ ಸೇರಿದಂತೆ ವೈವಿಧ್ಯಮಯ ವಲಯಗಳಲ್ಲಿ ವಹಿವಾಟು ನಡೆಸಿ ಲಾಭ ಗಳಿಸುತ್ತಿದೆ. ಹೀಗಾಗಿ ಬಿರ್ಲಾ ಫ್ಯಾಮಿಲಿ ₹5.39 ಟ್ರಿಲಿಯನ್ ಆಸ್ತಿ ಹೊಂದಿದೆ. ಈ ಪ್ರಮುಖ 3 ಕುಟುಂಬಗಳ ವ್ಯವಹಾರವು 460 ಶತಕೋಟಿ ಡಾಲರ್​ಗೆ ಸಮನಾಗಿದೆ. ಸಿಂಗಾಪುರದ ಜಿಡಿಪಿಗೆ ಈ 3 ಫ್ಯಾಮಿಲಿಗಳ ಆಸ್ತಿಯನ್ನು ಹೋಲಿಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment