/newsfirstlive-kannada/media/post_attachments/wp-content/uploads/2024/03/mukesh-ambani-2-1.jpg)
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಮುಖೇಶ್ ಅಂಬಾನಿ ಅವರು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿಯ ಪ್ರಿ-ವೆಡ್ಡಿಂಗ್ ಶೂಟ್ ಅದ್ದೂರಿಯಾಗಿ ನೆರವೇರಿಸಿದ್ದರು. ಗುಜರಾತ್ನ ಜಾಮ್ನಗರದಲ್ಲಿ 3 ದಿನ ಅದ್ಧೂರಿ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು. ಈ ಸಂಭ್ರಮದಲ್ಲಿ ದೇಶ-ವಿದೇಶಗಳಿಂದ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಜಾಮ್‌ನಗರಕ್ಕೆ ಬಂದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ಗೆ ಶುಭ ಹಾರೈಸಿದ್ದಾರೆ. ಇದೀಗ ಅಂಬಾನಿ ಅವರು ಎಷ್ಟೊಂದು ಸಿಂಪಲ್ಲಾ ಅನ್ನೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ಓದಿ: ಲಾಲೂ ಗೇಲಿಗೆ ಮೋದಿ ಕಾ ಪರಿವಾರ್.. ಬಿಜೆಪಿ ಅಟ್ಯಾಕ್‌ಗೆ ಕಾಂಗ್ರೆಸ್ ಕೌಂಟರ್; ಏನದು?
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಕುಟುಂಬಸ್ಥರ ಬಗ್ಗೆ ತಿಳಿದುಕೊಳ್ಳಲು ಜನ ಸಾಮಾನ್ಯರು ಕಾಯುತ್ತಾ ಇರುತ್ತಾರೆ. ಮುಖೇಶ್ ಅಂಬಾನಿ ಅವರ ಜೀವನ ಶೈಲಿ ಹೇಗಿರುತ್ತೆ? ಅವರು ಏನು ತಿನ್ನುತ್ತಾರೆ? ಏನೆಲ್ಲಾ ಕೆಲಸಗಳನ್ನ ಮಾಡುತ್ತಾರೆ? ಅವರ ಇಷ್ಟವಾದ ಜಾಗ ಯಾವುದು ಹೀಗೆ ಹತ್ತಾರು ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ.
ಇದೀಗ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರಿಗೆ ಯಾವ ಊಟ ಎಂದರೆ ಬಲು ಇಷ್ಟ ಅಂತಾ ಖುದ್ದು ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಖಾಸಗಿ ಸಂದರ್ಶನದಲ್ಲಿ ಮಾತಾಡಿದ ಅವರು, ನನಗೆ ಸೌತ್ ಇಂಡಿಯಾ ಆಹಾರ ಎಂದರೆ ತುಂಬಾ ಇಷ್ಟ. ಅದರಲ್ಲೂ ಇಡ್ಲಿ ಸಾಂಬರ್ ತುಂಬಾ ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ಮುಂಬೈನಲ್ಲಿ ಫೇವರೇಟ್ ಜಾಗ ಯಾವುದು ಎಂದು ಕೇಳಿದಾಗ ಮೈಸೂರು ಕೆಫೆ ಅವರ ನೆಚ್ಚಿನ ಊಟದ ಸ್ಥಳವಾಗಿದೆ. ನಾನು ಕೆಮಿಕಲ್ ಎಂಜಿನಿಯರಿಂಗ್ ಓದುತ್ತಿದ್ದಾಗ ಮೈಸೂರು ಕೆಫೆ ಹತ್ತಿರದಲ್ಲಿತ್ತು. ಅಲ್ಲಿ ನಾನು 1974-79 ಬಿಇ ಪದವಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ