ಅಂಬಾನಿ ಐಷಾರಾಮಿ ಮನೆಗೆ ಎಷ್ಟು ಸಾವಿರ ಕೋಟಿ ಖರ್ಚು? ತಿಂಗಳ ಕರೆಂಟ್​ ಬಿಲ್​ ಕೇಳಿದ್ರೆ ಶಾಕ್​ ಆಗ್ತೀರಾ!

author-image
Bheemappa
Updated On
ಅಂಬಾನಿ ಐಷಾರಾಮಿ ಮನೆಗೆ ಎಷ್ಟು ಸಾವಿರ ಕೋಟಿ ಖರ್ಚು? ತಿಂಗಳ ಕರೆಂಟ್​ ಬಿಲ್​ ಕೇಳಿದ್ರೆ ಶಾಕ್​ ಆಗ್ತೀರಾ!
Advertisment
  • ಒಮ್ಮೆ ಕಣ್ಣಾಡಿಸಿ, ಈ ಐಷಾರಾಮಿ ನಿವಾಸದಲ್ಲಿ ಏನೇನು ಇವೆ?
  • ಏಕಕಾಲದಲ್ಲೇ 3 ಹೆಲಿಪ್ಯಾಡ್​ ಸೇರಿ 168 ಕಾರುಗಳ ಪಾರ್ಕಿಂಗ್​
  • ಎಷ್ಟು ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಇದನ್ನ ನಿರ್ಮಿಸಿದ್ದಾರೆ?

ಮುಖೇಶ್ ಅಂಬಾನಿ ಎಂದರೆ ನಮಗೆ ಸಡನ್ ಆಗಿ ನೆನಪಾಗೋದು ಆಗರ್ಭ ಶ್ರೀಮಂತ ಎನ್ನುವುದು. ಇವರು ಇತ್ತೀಚೆಗಷ್ಟೇ ಇಡೀ ವಿಶ್ವವೇ ತಿರುಗಿ ನೋಡುವಂತೆ ತಮ್ಮ ಕಿರಿಯ ಮಗನ ವಿವಾಹ ಮಹೋತ್ಸವ ನೆರವೇರಿಸಿದರು. ಇವರು ಮುಂಬೈನಲ್ಲಿ ವಾಸಿಸುವ ಐಷಾರಾಮಿ ನಿವಾಸದ ಕರೆಂಟ್​ ಬಿಲ್​ ಅನ್ನು ಎಷ್ಟು ಕಟ್ಟುತ್ತಾರೆ ಎಂದು ಗೊತ್ತಾದರೆ ನೀವು ಒಮ್ಮೆ ಶಾಕ್ ಆಗೋದು ಪಕ್ಕಾ.

ಇದನ್ನೂ ಓದಿ:₹200 ಕೋಟಿಗೂ ಅಧಿಕ ಮೊತ್ತದ ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ.. ಭಾರತದ ಇತಿಹಾಸದಲ್ಲೇ ಹೊಸ ದಾಖಲೆ!

publive-image

ಮುಂಬೈನಲ್ಲಿರುವ 27 ಅಂತಸ್ತಿನ ಐಷಾರಾಮಿ ಮನೆಯಾದ ಆಂಟಿಲಿಯಾದಲ್ಲಿ ಮುಖೇಶ್ ಅಂಬಾನಿ ಫ್ಯಾಮಿಲಿ ಇರುತ್ತದೆ. ಈ 27 ಮಹಡಿ ಬಿಲ್ಡಿಂಗ್ ವಾಸ್ತುಶಿಲ್ಪ ಅದ್ಭುತ ಎನ್ನುತ್ತಾರೆ. ಏಕೆಂದರೆ ಇದರಲ್ಲಿ 3 ಹೆಲಿಪ್ಯಾಡ್​ ಸೇರಿದಂತೆ 168 ಕಾರುಗಳನ್ನು ಒಮ್ಮೆಗೆ ಪಾರ್ಕ್​ ಮಾಡಬಹುದು. ಸ್ವಿಮ್ಮಿಂಗ್ ಪೂಲ್, ಸ್ಪಾ, ಹೆಲ್ತ್​ ಕೇರ್, ದೇವಾಲಯ, ಟೆರೇಸ್​ ಗಾರ್ಡನ್, ಲೆಕ್ಕವಿಲ್ಲದಷ್ಟು ದೊಡ್ಡ ಎಲಿವೇಟರ್‌ಗಳು ಹಾಗೂ ಮನಸ್ಸಿಗೆ ಮುದ ನೀಡುವ ಥಿಯೇಟರ್ ಇದೆ. 1.120 ಎಕರೆಯಷ್ಟು ವ್ಯಾಪಿಸಿದ ಆಂಟಿಲಿಯಾ ಒಳಾಂಗಣ ವಿನ್ಯಾಸ ಸೂರ್ಯ ಹಾಗೂ ಕಮಲದಿಂದ ಪ್ರೇರಿತವಾಗಿದೆ. ಈ ಸುಂದರ ಮಹಲಿನಂತ ಕಟ್ಟಡದಲ್ಲಿ ಯಾವುದೇ ಒಂದು ರೂಮ್​ ಇನ್ನೊಂದು ರೂಮ್​ನಂತೆ ಇಲ್ಲ. ಎಲ್ಲವೂ ಭಿನ್ನ, ವಿಭಿನ್ನವಾಗಿ ಆಕರ್ಷಣೆಯಾಗಿ, ಆಂತರಿಕ ವಿನ್ಯಾಸ ಹೊಂದಿವೆ.

600 ಕಾರ್ಮಿಕರು ಇದನ್ನು ನೋಡಿಕೊಳ್ತಾರೆ, ಇವರ ಸ್ಯಾಲರಿ?

ಆಂಟಿಲಿಯಾವನ್ನು 2006ರಿಂದ 2010ರವರೆಗೆ 15,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಹು ಆಕರ್ಷಣೆಯಾಗಿ ನಿರ್ಮಾಣ ಮಾಡಲಾಗಿದೆ. 8 ರಷ್ಟು ತೀವ್ರತೆಯ ಭೂಕಂಪ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಂದರೆ ಸಾಮಾನ್ಯ ಭೂಕಂಪವಾದರೆ ಈ ಕಟ್ಟಡ ಅಲುಗಾಡುವುದಿಲ್ಲ. ಇಷ್ಟೆಲ್ಲ ವಿಶೇಷತೆ ಹೊಂದಿರುವ ಅದ್ಭುತ ಆಂಟಿಲಿಯಾ ಕಟ್ಟಡದ ಇನ್ನೊಂದು ಅಚ್ಚರಿ ಸಂಗತಿ ಎಂದರೆ ಒಟ್ಟು 600 ಕಾರ್ಮಿಕರು ಇದನ್ನ ನಿತ್ಯ ಸುಂದರವಾಗಿ ಇರುವಂತೆ ನೋಡಿಕೊಳ್ಳುತ್ತಾರೆ. ಹೀಗಾಗಿಯೇ ಪ್ರತಿಯೊಬ್ಬರಿಗೂ ತಿಂಗಳಿಗೆ 1.5 ರಿಂದ 2 ಲಕ್ಷ ರೂ.ಗಳವರೆಗೆ ಸ್ಯಾಲರಿ ನೀಡಲಾಗುತ್ತಿದೆ.

ಇದನ್ನೂ ಓದಿ: ಅಬ್ಬಾ.. ನಿಶ್ಚಿತಾರ್ಥಕ್ಕೆ ಆನ್​ಲೈನ್​ನಲ್ಲಿ ಫುಡ್​ ಆರ್ಡರ್ ಮಾಡಿದ ನವಜೋಡಿ.. ನೆಟ್ಟಿಗರು ಫುಲ್ ಶಾಕ್‌!

publive-image

ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಖ್ಯಾತ ಸಿನಿಮಾ ಡೈರೆಕ್ಟರ್ ಸಾವು.. ಇದು ಆತ್ಮ*ತ್ಯೆಯೋ, ಕೊಲೆಯೋ?

ಈ ಆಂಟಿಲಿಯಾಕ್ಕೆ ಹೈಟೆನ್ಷನ್ ಕರೆಂಟ್ ಕನೆಕ್ಷನ್ ಇದೆ. ಹೀಗಾಗಿ ಭಾರೀ ಮೊತ್ತದಲ್ಲಿ ತಿಂಗಳಿಗೆ ಲಕ್ಷ ಲಕ್ಷ ಕರೆಂಟ್​ ಅನ್ನು ಅಂಬಾನಿ ಫ್ಯಾಮಿಲಿ ಪಾವತಿ ಮಾಡುತ್ತಿದೆ. ಮುಂಬೈಯಲ್ಲಿನ 7000 ಮಿಡಲ್​ ಕ್ಲಾಸ್​ ಫ್ಯಾಮಿಲಿಗಳು ಬಳಕೆ ಮಾಡುವಷ್ಟು ಕರೆಂಟ್ ಅನ್ನು ಈ ಒಂದು ಆಂಟಿಲಿಯಾ ಬೀಲ್ಡಿಂಗ್​ಗೆ ಬಳಕೆ ಮಾಡಲಾಗುತ್ತಿದೆ. ಪ್ರತಿ ತಿಂಗಳು ಸುಮಾರು 6,37,240 ಯೂನಿಟ್ ವಿದ್ಯುತ್ ಅನ್ನು ಇದಕ್ಕೆ ಬಳಸಲಾಗುತ್ತಿದೆ. ಹೀಗಾಗಿ ತಿಂಗಳಿಗೆ ಸುಮಾರು 70 ಲಕ್ಷ ರೂಪಾಯಿಗಳಷ್ಟು ಕರೆಂಟ್​ ಬಿಲ್​ ಅನ್ನು ಅಂಬಾನಿ ಫ್ಯಾಮಿಲಿ ಪಾವತಿ ಮಾಡುತ್ತಿದೆ. ಇದು ಕೆಲವೊಮ್ಮೆ ಇನ್ನೂ ಹೆಚ್ಚಾಗಿರುತ್ತದೆ ಎಂದು ಕೆಲವೊಮ್ಮೆ ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment