newsfirstkannada.com

VIDEO: ರಾಜ್‌ ಕಪೂರ್‌ ಆದ ಮುಖೇಶ್ ಅಂಬಾನಿ; ನೀತಾ ಅಂಬಾನಿ ಜೊತೆ ಡ್ಯಾನ್ಸ್‌ ಪ್ರಾಕ್ಟೀಸ್‌!

Share :

Published March 1, 2024 at 9:02pm

  ಮಗನ ಮದುವೆ ಉತ್ಸವದಲ್ಲಿ ಮುಖೇಶ್ ಅಂಬಾನಿ ಬಿಗ್ ಸರ್‌ಪ್ರೈಸ್

  ಪ್ಯಾರ್ ಹುವಾ ಇಕ್ರಾರ್ ಹುವಾ ಹಾಡಿಗೆ ಸಖತ್‌ ಡ್ಯಾನ್ಸ್ ಪ್ರಾಕ್ಟೀಸ್!

  ನೀತಾ ಅಂಬಾನಿ ಜೊತೆ ಹೆಜ್ಜೆ ಹಾಕಿದ ಮುಖೇಶ್ ಅಂಬಾನಿ ವಿಡಿಯೋ

ಗುಜರಾತ್‌ನ ಜಾಮ್‌ನಗರದಲ್ಲಿ ಅಂಬಾನಿ ಮಗನ ಮದುವೆ ಮಹೋತ್ಸವ ಸ್ವರ್ಗವನ್ನೇ ಧರೆಗಿಳಿಸಿದಂತಿದೆ. ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು, ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದು, ಸಂಭ್ರಮವನ್ನು ಡಬಲ್ ಮಾಡಿದ್ದಾರೆ.

ಅಂಬಾನಿ ಫ್ಯಾಮಿಲಿಯ ಮದುವೆ ಅಂದ್ರೆ ಅದರಲ್ಲಿ ಸ್ಪೆಷಲ್ ಇರಲೇಬೇಕು. ಸದ್ಯ ಜಾಮ್‌ನಗರದಲ್ಲಿ ನಡೆಯುತ್ತಿರುವ ಪ್ರೀ-ವೆಡ್ಡಿಂಗ್ ಉತ್ಸವ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ. ಮದುವೆ ಮನೆಗೆ ಬಂದ ಅತಿಥಿಗಳನ್ನ ರಂಜಿಸಲು ದೇಶ, ವಿದೇಶದ ಗಣ್ಯರು ಆಗಮಿಸಿದ್ದು ಕಲರ್‌ಫುಲ್‌ ಸ್ಟೇಜ್‌ನಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಮನರಂಜನೆಯ ಜೊತೆಗೆ ಮಗ ಹಾಗೂ ಸೊಸೆಗಾಗಿ ಖುದ್ದು ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯವರು ಡ್ಯಾನ್ಸ್‌ ಮಾಡುತ್ತಿದ್ದಾರೆ. ಮುಖೇಶ್ ಅಂಬಾನಿ ಹಾಗೂ ನೀತಾ ಅವರು ಪ್ಯಾರ್ ಹುವಾ ಇಕ್ರಾರ್ ಹುವಾ ಫೇಮಸ್ ಹಾಡಿಗೆ ಡ್ಯಾನ್ಸ್ ಮಾಡಲು ಪ್ರಾಕ್ಟೀಸ್ ಮಾಡಿದ್ದಾರೆ.

ಪ್ಯಾರ್ ಹುವಾ ಇಕ್ರಾರ್ ಹುವಾ ಹಾಡಿಗೆ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 1955ರಲ್ಲಿ ರಿಲೀಸ್ ಆದ ರಾಜ್‌ ಕಪೂರ್ ಅವರ ಎವರ್‌ಗ್ರೀನ್‌ ಹಾಡಿಗೆ ಕಪಲ್ಸ್‌ ಹೆಜ್ಜೆ ಹಾಕಿದ್ದು, ಸಖತ್ ಪ್ರಾಕ್ಟೀಸ್ ಮಾಡಿದ್ದಾರೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ಸ್ ಅವರ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಇಂದು ಭರ್ಜರಿಯಾಗಿ ಆರಂಭವಾಗಿದೆ. ಸುಮಾರು 1,000 ಅತಿಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಶಾರುಖ್ ಖಾನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈಗಾಗಲೇ ಜಾಮ್‌ನಗರದಲ್ಲಿದ್ದಾರೆ. ಇನ್ನೂ ಎರಡು ದಿನ ಜಾಮ್‌ನಗರದಲ್ಲಿ ಅಂಬಾನಿ ಫ್ಯಾಮಿಲಿಯ ಮದುವೆ ಸಂಭ್ರಮ ಮತ್ತಷ್ಟು ಕಳೆಕಟ್ಟಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ರಾಜ್‌ ಕಪೂರ್‌ ಆದ ಮುಖೇಶ್ ಅಂಬಾನಿ; ನೀತಾ ಅಂಬಾನಿ ಜೊತೆ ಡ್ಯಾನ್ಸ್‌ ಪ್ರಾಕ್ಟೀಸ್‌!

https://newsfirstlive.com/wp-content/uploads/2024/03/Mukesh-Ambani-2.jpg

Load More