/newsfirstlive-kannada/media/post_attachments/wp-content/uploads/2025/03/mukesh.jpg)
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇಂದು ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿಗೆ ವಿವಾಹ ವಾರ್ಷಿಕೋತ್ಸವ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಮದುವೆಯಾಗಿ 40 ವರ್ಷಗಳಾಗಿವೆ.
ಇದನ್ನೂ ಓದಿ:ಕೋಟ್ಯಾಧಿಪತಿ ಮುಖೇಶ್ ಅಂಬಾನಿಗೆ ಇಷ್ಟವಾದ ಫುಡ್ ಯಾವುದು? ಅಂಬಾನಿ ಫ್ಯಾಮಿಲಿ ಇಷ್ಟೊಂದು ಸಿಂಪಲ್ಲಾ!
ಆದ್ರೆ, ಬಹಳ ಜನರಿಗೆ ತಿಳಿದಿಲ್ಲ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರದ್ದು ಅರೇಂಜ್ ಮ್ಯಾರೇಜ್ ಅಂತ. ವಿಶೇಷ ಅಂದರೆ ಫಸ್ಟ್ ಲುಕ್ನಲ್ಲೇ ನೀತಾ ಅವರನ್ನು ನೋಡಿ ಮುಖೇಶ್ ಅಂಬಾನಿ ಫಿದಾ ಆಗಿದ್ದಂತೆ. ಹೌದು, ಇಂದು ವಿಶ್ವದ ಅತ್ಯಂತ ಶ್ರೀಮಂತ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಮಾರ್ಚ್ 8ರಂದು ಮುಖೇಶ್ ಹಾಗೂ ನೀತಾ ಅಂಬಾನಿ 40ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದಾರೆ.
ಮಾರ್ಚ್ 8, 1985ರಲ್ಲಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮುಖೇಶ್ ಹಾಗೂ ನೀತಾ ಇಬ್ಬರು ಮೊದಲ ಭೇಟಿಯು ತುಂಬಾ ಆಶ್ಚರ್ಯಕರವಾಗಿತ್ತಂತೆ. ಮುಖೇಶ್ ಅಂಬಾನಿಯವರನ್ನು ನೋಡಿ ನೀತಾ ಅಚ್ಚರಿಗೊಂಡಿದ್ದರು. ಅಷ್ಟು ಶ್ರೀಮಂತ ಉದ್ಯಮಿ ಪುತ್ರನ ಸರಳತೆ ನೀತಾಗೆ ಭಾರಿ ಮೆಚ್ಚುಗೆ ಆಗಿತ್ತಂತೆ. ಈ ಮೊದಲು ಮುಖೇಶ್ ಅಂಬಾನಿ ಅವರನ್ನು ನೀತಾ ಅವರು ಮೊದಲ ಬಾರಿಗೆ ಭೇಟಿಯಾಗಿದ್ದು ಧೀರೂಭಾಯಿ ಅವರ ಮನೆಯಲ್ಲಿ. ಅವರು ಮುಖೇಶ್ರನ್ನು ಭೇಟಿಯಾಗಲು ಹೋದಾಗ, ಅವರನ್ನು ನೋಡಿ ದಂಗಾದರು.
ಏಕೆಂದರೆ ಮನೆಯ ಬೆಲ್ ಬಾರಿಸಿದಾಗ ಮುಖೇಶ್ ಅಂಬಾನಿ ಅವರೇ ಬಾಗಿಲು ತೆರೆದರು. ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಮುಖೇಶ್ ತುಂಬಾ ಸರಳವಾಗಿ ಕಾಣುತ್ತಿದ್ದರು, ಅದನ್ನು ನೋಡಿದ ನೀತಾಗೆ ನಂಬಲು ಸಾಧ್ಯವಾಗಲಿಲ್ಲವಂತೆ. ಇಷ್ಟು ಶ್ರೀಮಂತ ವ್ಯಕ್ತಿಯ ಮಗ ಇಷ್ಟು ಸರಳವಾಗಿರಲು ಸಾಧ್ಯವೇ ಎಂದು ಅವರು ಕನಸಿನಲ್ಲಿಯೂ ಯೋಚಿಸಿರಲಿಲ್ಲವಂತೆ. ಇನ್ನೂ, ನೀತಾರನ್ನು ಮೊದಲ ನೋಡಿದಾಗಲೇ ಮುಖೇಶ್ ಅವರ ತಂದೆ-ತಾಯಿ ತಮ್ಮ ಸೊಸೆಯೆಂದು ಒಪ್ಪಿಕೊಂಡಿದ್ದರಂತೆ.
ನೀತಾ ಅವರು 20 ವರ್ಷದವರಿದ್ದಾಗಲೇ ನವರಾತ್ರಿಯ ಸಂದರ್ಭದಲ್ಲಿ ಮುಂಬೈನ ಬಿರ್ಲಾ ಮಾತೋಶ್ರೀಯಲ್ಲಿ ನಡೆದಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ರಿಲಯನ್ಸ್‌ನ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಮತ್ತು ಅವರ ಪತ್ನಿ ಕೋಕಿಲಾಬೆನ್ ಕೂಡ ಆಗಮಿಸಿದ್ದರು. ನೀತಾ ಮೇಲೆ ಅವರ ಕಣ್ಣು ಬಿದ್ದ ತಕ್ಷಣ, ಅವರು ತಮ್ಮ ಹಿರಿಯ ಮಗನ ಜೊತೆಗೆ ಮದುವೆ ಮಾಡಿಸಬೇಕು ಅಂತ ಆಸೆ ಪಟ್ಟಿದ್ದರಂತೆ. ಇದಾದ ಬಳಿಕ ಎಲ್ಲ ಮಾತುಕತೆ ನಂತರ ಸಾಕಷ್ಟು ಭಾರೀ ಭೇಟಿಯಾದ ಬೆನ್ನಲ್ಲೇ ನೀತಾ ಅವರು ಮುಖೇಶ್ ಅಂಬಾನಿ ಅವರನ್ನು ಮದುವೆಯಾಗಲು ನಿರ್ಧರಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ