newsfirstkannada.com

ಮದ್ವೆಗೆ ಬಂದಿದ್ದ ಸಿನಿಮಾ ಮಂದಿಗೆ ಅಂಬಾನಿ ಭರ್ಜರಿ ಗಿಫ್ಟ್​.. 2 ಕೋಟಿ ಬೆಲೆಯ ವಾಚ್​ ಯಾರಿಗೆಲ್ಲ ಕೊಟ್ಟಿದ್ದಾರೆ..?

Share :

Published July 14, 2024 at 10:28am

Update July 14, 2024 at 10:34am

    2 ಕೋಟಿ ರೂಪಾಯಿ ಮೌಲ್ಯದ ವಾಚ್​ ಯಾರಿಗೆಲ್ಲ ಕೊಟ್ಟರು..?

    ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ

    5000 ಕೋಟಿ ವೆಚ್ಚದಲ್ಲಿ ನಡೆದ ಮದುವೆ ಕಾರ್ಯಕ್ರಮ

ದೇಶದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

5000 ಕೋಟಿ ವೆಚ್ಚದಲ್ಲಿ ನಡೆದ ಮದುವೆಯಲ್ಲಿ ದೇಶದ ಹಾಗೂ ವಿಶ್ವದ ದಿಗ್ಗಜರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಅಂಬಾನಿ ಕುಟುಂಬ ದುಬಾರಿ ಉಡುಗೊರೆಗಳನ್ನು ನೀಡಿದೆ. ಕೆಲವರಿಗೆ ಅನಂತ್ ಅಂಬಾನಿ ಕೋಟಿಗಟ್ಟಲೇ ಬೆಲೆ ಬಾಳುವ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ:6, 6, 6, 4 ಪಠಾಣ್ ಭರ್ಜರಿ ಬ್ಯಾಟಿಂಗ್, ರಾಯುಡು ಅರ್ಧಶತಕ.. ಪಾಕ್ ವಿರುದ್ಧ ಯಾರು ಎಷ್ಟು ರನ್ ಹೊಡೆದ್ರು..?

ವರದಿಗಳ ಪ್ರಕಾರ.. ಈ ವಿವಾಹದಲ್ಲಿ ಭಾಗಿಯಾದ ಸಿನಿಮಾ ತಾರೆಯರಿಗೆ ಅನಂತ್ ಅಂಬಾನಿ ಐಷಾರಾಮಿ ವಾಚ್‌ಗಳನ್ನು ನೀಡಿದ್ದಾರೆ. ವಾಚ್ ಪಡೆದವರಲ್ಲಿ ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ರಣವೀರ್ ಸಿಂಗ್ ಸೇರಿದ್ದಾರೆ. ಅವರಿಗೆ ಉಡುಗೊರೆಯಾಗಿ ನೀಡಿರುವ ವಾಚ್‌ಗಳು ತಲಾ 2 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಅಂಬಾನಿ ನೀಡಿರುವ ವಾಚ್​ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Audemars Piguet ಬ್ರ್ಯಾಂಡ್ ವಾಚ್​ಗಳು..!

ಅಂಬಾನಿಯಿಂದ ಉಡುಗೊರೆಯಾಗಿ ಪಡೆದ ವಾಚ್‌ಗಳು Audemars Piguet ಕಂಪನಿಯದ್ದಾಗಿದೆ. 9.5 ಮಿಮೀ ದಪ್ಪವಿರುವ ಕೈಗಡಿಯಾರ ಇದಾಗಿದೆ. 41 ಎಂಎಂ 18 ಕ್ಯಾರಟ್​​​ನ (41mm 18k Rose gold Dial Color) ಚಿನ್ನದ ವಾಚ್​​ಗಳಾಗಿವೆ. ಚಿನ್ನದ ಟೋನ್ ಒಳಗಿನ ಬೆಜೆಲ್ ಮತ್ತು ಮ್ಯಾನುಫ್ಯಾಕ್ಚರ್ ಕ್ಯಾಲಿಬರ್ 5134 ಸೆಲ್ಫ್-ವೈಂಡಿಂಗ್ ಚಲನೆಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಶಾಶ್ವತ ಕ್ಯಾಲೆಂಡರ್ ಹೊಂದಿದೆ. ಇದು ವಾರ, ದಿನ, ದಿನಾಂಕ, ಖಗೋಳ ಚಂದ್ರ, ತಿಂಗಳು, ಅಧಿಕ ವರ್ಷ, ಗಂಟೆಗಳು ಮತ್ತು ನಿಮಿಷಗಳ ಮಾಹಿತಿಯನ್ನು ನೀಡುತ್ತದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಚಿನ್ನ ಖರೀದಿಸಲು ಸುವರ್ಣಾವಕಾಶ ಬಂದರೂ ಅಚ್ಚರಿ ಇಲ್ಲ.. ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದ್ವೆಗೆ ಬಂದಿದ್ದ ಸಿನಿಮಾ ಮಂದಿಗೆ ಅಂಬಾನಿ ಭರ್ಜರಿ ಗಿಫ್ಟ್​.. 2 ಕೋಟಿ ಬೆಲೆಯ ವಾಚ್​ ಯಾರಿಗೆಲ್ಲ ಕೊಟ್ಟಿದ್ದಾರೆ..?

https://newsfirstlive.com/wp-content/uploads/2024/07/AMBANI-1-1.jpg

Load More