Advertisment

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಹಳದಿ ಶಾಸ್ತ್ರ; ಬಾಲಿವುಡ್ ತಾರೆಯರ ರಂಗು ಹೇಗಿದೆ ನೋಡಿ!

author-image
Veena Gangani
Updated On
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಹಳದಿ ಶಾಸ್ತ್ರ; ಬಾಲಿವುಡ್ ತಾರೆಯರ ರಂಗು ಹೇಗಿದೆ ನೋಡಿ!
Advertisment
  • ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅರಿಶಿನ ಶಾಸ್ತ್ರಕ್ಕೆ ಯಾರೆಲ್ಲಾ ಬಂದ್ರು!
  • ಜುಲೈ 12ಕ್ಕೆ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ, ರಾಧಿಕಾ ಮದುವೆ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ ಹಳದಿ ಶಾಸ್ತ್ರದ ಫೋಟೋ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆಗೆ 3 ದಿನಗಳು ಮಾತ್ರ ಬಾಕಿ ಉಳಿದಿವೆ. ಜುಲೈ 12 ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

Advertisment

publive-image

ಈಗಾಗಲೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ಮದುವೆಗೆ ಬೇಕಾದ ತಯಾರಿಗಳನ್ನು ಮುಖೇಶ್ ಅಂಬಾನಿ ಕುಟುಂಬಸ್ಥರು ಮಾಡಿಕೊಂಡಿದ್ದಾರೆ. ಈಗಾಗಲೇ 2 ಬಾರಿ ಪ್ರೀ-ವೆಡ್ಡಿಂಗ್ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಸಾವಿರಾರು ಕೋಟಿ ರೂಪಾಯಿ ಹಣ ಈ ವೈಭವದ ಮದುವೆಗೆ ಖರ್ಚಾಗುತ್ತಿದೆ.

ಇದನ್ನೂ ಓದಿ:ಸೂಪರ್​​ ಸ್ಟಾರ್​ ರಜನಿಕಾಂತ್​​ ಕೂಲಿ ಸಿನಿಮಾದಲ್ಲಿ ಕರ್ನಾಟಕದ ಹುಡುಗ! ಯಾರು ಈ Mr. ಇಂಡಿಯನ್​​?

publive-image

ಇದೀಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅರಿಶಿನ ಶಾಸ್ತ್ರ ಸಮಾರಂಭವನ್ನು ಮುಂಬೈನಲ್ಲಿರುವ ಮುಖೇಶ್ ಅಂಬಾನಿ ಮನೆಯಲ್ಲಿ ಮಾಡಲಾಗಿದೆ. ಅದಕ್ಕಾಗಿ ಮುಖೇಶ್ ಅವರ ಅಂಟಿಲಿಯಾ ಮನೆಯನ್ನು ಅದ್ಧೂರಿಯಾಗಿ ಸಿಂಗಾರಗೊಂಡಿದೆ.

Advertisment

publive-image

ಅರಿಶಿನ ಕಾರ್ಯಕ್ರಮಕ್ಕೆ ಅನಂತ್ ಅಂಬಾನಿ ಭಾವಿ ಪತ್ನಿ ರಾಧಿಕಾ ಮರ್ಚೆಂಟ್ ಹೂವಿನಲ್ಲೇ ಮುಳುಗಿಬಿಟ್ಟಿದ್ದಾರೆ. ಮಲ್ಲಿಗೆ ಮೊಗ್ಗಿನ ಉಡುಪನ್ನು ಹಳದಿ ಶಾಸ್ತ್ರಕ್ಕೆ ಧರಿಸಿಕೊಂಡಿದ್ದಾರೆ. ರಾಧಿಕಾ ಮರ್ಚೆಂಟ್ ಅವರನ್ನು ಪ್ರಸಿದ್ಧ ಫ್ಯಾಷನ್ ಸ್ಟೈಲಿಸ್ಟ್ ರಿಯಾ ಕಪೂರ್ ಅವರು ಕೌಟೂರಿಯರ್ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ ರೋಮಾಂಚಕ ಹಳದಿ ಕಸೂತಿ ಲೆಹೆಂಗಾ ಸೆಟ್‌ನಲ್ಲಿ ರೆಡಿ ಮಾಡಿದ್ದಾರೆ.

ಇದನ್ನೂ ಓದಿ:ಅನಿಲ್ ಅಂಬಾನಿ ಸಾಮ್ರಾಜ್ಯಕ್ಕೆ ಹೊಸ ಆಶಾಕಿರಣ.. ಜೈ ಅನ್ಮೋಲ್ ಯಶಸ್ಸಿನ ಗುಟ್ಟೇನು ಗೊತ್ತಾ?

publive-image

ರಾಧಿಕಾ ಅವರು 90ಕ್ಕೂ ಹೆಚ್ಚು ಚೆಂಡು ಹೂವುಗಳಿಂದ ಅಲಂಕಾರ ಮಾಡಿಕೊಂಡಿದ್ದಾರೆ. ಸಂಪೂರ್ಣವಾಗಿ ಮಲ್ಲಿಗೆ ಮೊಗ್ಗಿನಿಂದ ಕಿವಿಯೋಲೆಗಳು, ಡಬಲ್ ನೆಕ್ಲೇಸ್​ ಅಲಂಕಾರ ಮಾಡಿಕೊಂಡಿದ್ದಾರೆ. ಇನ್ನು, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ಹಳದಿ ಶಾಸ್ತ್ರಕ್ಕೆ ಬಾಲಿವುಡ್​ ನಟ, ನಟಿಯರು ಭಾಗಿಯಾಗಿದ್ದರು.

Advertisment

publive-image

ಬಾಲಿವುಡ್ ನಟ ಸಲ್ಮಾನ್ ಖಾನ್, ರಣವೀರ್ ಸಿಂಗ್, ಆಲಿಯಾ ಭಟ್, ಸಾರಾ ಅಲಿ ಖಾನ್, ಜಾನ್ವಿ ಕಪೂರ್, ಖುಷಿ ಕಪೂರ್, ವೇದಾಂಗ್ ರೈನಾ, ಮಾನುಷಿ ಛಿಲ್ಲರ್, ಬೋನಿ ಕಪೂರ್, ಉದಿತ್ ನಾರಾಯಣ್, ರಾಹುಲ್ ವೈದ್ಯ, ಅರ್ಜುನ್ ಕಪೂರ್, ಅನನ್ಯಾ ಪಾಂಡೆ, ನಿರ್ದೇಶಕ ಅಟ್ಲೀ, ಮುಖೇಶ್ ಅಂಬಾನಿ, ದಿಶಾ ಪಾಮರ್, ಗಾಯಕ ಉದಿತ್ ನಾರಾಯಣ್, ಮುಖೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

publive-image

ಸದ್ಯ ರಾಧಿಕಾ ಮರ್ಚೆಂಟ್ ಹಳದ ಶಾಸ್ತ್ರದ ಲುಕ್​ಗೆ ನೆಟ್ಟಿಗರು ಫುಲ್​ ಫಿದಾ ಆಗಿಬಿಟ್ಟಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜೊತೆಗೆ ರಾಧಿಕಾ ಮರ್ಚೆಂಟ್ ಲುಕ್​​ ಬಗ್ಗೆ ಈ ಸಾಕಷ್ಟು ಚರ್ಚೆಯಾಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment