ಅನಂತ್ ಹಾಗೂ ರಾಧಿಕಾ ಮದುವೆಗೆ ಬರೋಬ್ಬರಿ 3 ಸಾವಿರ ವಿಧದ ಭೋಜನಗಳು
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ದೇಶ ವಿದೇಶದ ಗಣ್ಯರ ಕಲರವ
ವೈಭವಾತೀತವಾಗಿ ನಡೀತಿದೆ ಮೂರು ದಿನದ ಅನಂತ್ ಅಂಬಾನಿ, ರಾಧಿಕಾ ಮದುವೆ
ಶ್ರೀಮಂತಕ್ಕೆ ಅಧಿಪತಿ ಅಂತಾ ಅನಿಸಿಕೊಂಡವರ ಮನೆತನ. ಭೂಲೋಕದ ಅಗಲಕ್ಕೂ ಮದುವೆಯ ಅಲಂಕಾರ ಮಾಡಬಲ್ಲ ಕಿಮ್ಮತ್ತು ಇರುವ ಕುಟುಂಬ. ಆಕಾಶದಷ್ಟು ಎತ್ತರಕ್ಕೆ ಮಂಟಪ ಹಾಕಿಸಬಲ್ಲ ತಾಕತ್ತು ಇರುವವರು. ದೇವಾನುದೇವತೆಗಳ ದೇವ ಇಂದ್ರನ ಲೋಕವನ್ನೇ ಮೀರಿಸಿ, ಕುಬೇರನ ಆಸ್ತಿಗೂ ಸವಾಲೆಸೆದು, ಇಷ್ಟೇ ಏನೂ ಇದಕ್ಕಿಂತಲೂ ದುಪ್ಪಟ್ಟು ಅಬ್ಬರದಲ್ಲಿ ಮದುವೆ ವೈಭೋಗ ನಡೆಸಬಲ್ಲ ಏಕೈಕ ಮನೆತನ ಅಂದ್ರೆ ಅಂಬಾನಿ ಮನೆತನ. ಭರ್ಜರಿ ಮದುವೆಯ ತಯಾರಿ ಈ ದುಬಾರಿ ದುನಿಯಾದಲ್ಲಿ ಎಲ್ಲೆಲ್ಲಿ ಗ್ರೇಟ್ ಸೆಲೆಬ್ರಿಟಿಗಳಿದ್ದಾರೋ, ಅವ್ರೆಲ್ಲರಿಗೂ ಆಹ್ವಾನ.
ಇದನ್ನೂ ಓದಿ: ಅಮಿತಾಬ್ ಬಚ್ಚನ್ ಮಗನನ್ನ ಬಿಟ್ರಾ ಐಶ್ವರ್ಯ ರೈ..? ಅಂಬಾನಿ ಸಂಭ್ರಮದಲ್ಲಿ ಬಿಗ್ ಬಿ ಫ್ಯಾಮಿಲಿ ಬೇರೆ ಬೇರೆ!
ಸ್ವರ್ಗ ಇದ್ರೆ ಹೀಗೇ ಇರ್ಬೋದೇನೋ ಅನಿಸುವಷ್ಟು ವೈಭವ. ಆ ದಿನ ರಾಮನ ಕಲ್ಯಾಣವನ್ನ ಮೂರು ಲೋಕಗಳು ಹೇಗೆ ನಿಂತು ನೋಡಿತ್ತೋ. ಬಹುಶಃ ಈ ಮೂರು ದಿನದ ಮದುವೆ ಕೂಡ ಅಷ್ಟೇ ವೈಭವಾತೀತವಾಗಿ ನಡೀತಿದೆ. ಎಲ್ಲೆಲ್ಲೂ ಸಂಭ್ರಮ ಸಡಗರ. ಅತಿಥಿಗಳ ಧಿರಿಸುಗಳಿಂದ ಹಿಡಿದು ಅಲಂಕಾರಗೊಂಡಿರೋ ಹೂಗಳವರೆಗೂ ಎಲ್ಲವೂ ಅದ್ಧೂರಿ. ಇದು ಭಾರತದ ಕುಬೇರ ಮುಖೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ, ರಾಧಿಕ ಮರ್ಚೆಂಟ್ರ ಅದ್ಧೂರಿ ಮದುವೆ ಸಂಭ್ರಮದ ದೃಶ್ಯಗಳು. ಆ ಮನೆಯ ಆನಂದದ ಕ್ಷಣಗಳು. ಬರೋಬ್ಬರಿ 5000 ಕೋಟಿ ರೂಪಾಯಿಗಳಲ್ಲಿ ಮಾಡ್ತಿರೋ ದುಬಾರಿ ಮದುವೆ ಇದು.
ಅಂಬಾನಿ ದಂಪತಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ವಿವಾಹ ನೆರವೇರ್ತಿದೆ. 18.5 ಎಕರೆಯಷ್ಟಿರೋ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಶುಕ್ರವಾರ ರಾತ್ರಿ ತಾಳಿ ಕಟ್ಟುವ ಮುಹೂರ್ತ ನೆರವೇರಿದೆ. ಇನ್ನೂ ಎರಡು ದಿನ ಅದ್ಧೂರಿ ಕಾರ್ಯಕ್ರಮಗಳು ಬಾಕಿ ಇದ್ದು, ಈ ಮಧ್ಯೆ ಮದ್ವೆಗೆ ಆಗಿರೋ ಖರ್ಚಿನ ಲೆಕ್ಕ ಸಿಕ್ಕಿದೆ. ಆ ಖರ್ಚಿನ ಮೊತ್ತ ಕೇಳಿದ್ರೆ ತಲೆ ತಿರುಗಿ ಹೋಗೋದು ಪಕ್ಕಾ. ಈಗಾಗಲೇ ಅಂಬಾನಿಯವ್ರು ಈ ಮದುವೆಗೆ 5000 ಕೋಟಿ ಖರ್ಚು ಮಾಡಿದ್ದಾರೆ ಅನ್ನೋದು ಗೊತ್ತಾಗಿದ್ದು, ಯಾವ್ಯಾವುದಕ್ಕೆ ಎಷ್ಟೆಷ್ಟು ಸ್ಪೆಂಡ್ ಮಾಡಿದ್ರು ಅನ್ನೋ ವಿಚಾರ ನಿಜಕ್ಕೂ ಹುಬ್ಬೇರಿಸುವಂತಹದ್ದು.
ನೋಡೋರಿಗೆ 5 ಸಾವಿರ ಕೋಟಿಯಷ್ಟು ಖರ್ಚು ಮಾಡಿ ಮದುವೆ ಮಾಡ್ಬೇಕಾ ಅಂತ ಅನಿಸ್ಬೋದು. ಆದ್ರೆ, ಅಂಬಾನಿ ವಿಷ್ಯಕ್ಕೆ ಬಂದ್ರೆ ಆ ಹಣ ನಿಜಕ್ಕೂ ಜುಜಬಿ. ಚಿಕ್ಕ ಮಗನ ಮದುವೆಗೆ ಆಗಿರೋ 5 ಸಾವಿರ ಕೋಟಿ ರೂಪಾಯಿಯಷ್ಟು ಖರ್ಚು ಅಂಬಾನಿಗೆ ಐದು ಪೈಸೆ ಲೆಕ್ಕದಷ್ಟು ಸಮ. ಅಂಬಾನಿಯ ಒಟ್ಟು ಆಸ್ತಿಯನ್ನ ಕೂಡಿಟ್ಟುಕೊಂಡು ಇಲ್ಲಿ ಖರ್ಚು ಮಾಡಿರೋ ಹಣವನ್ನ ಒಂದು ಕಡೆ ಇಟ್ರೆ, ಅಂಬಾನಿ ಆಸ್ತಿಯಲ್ಲಿ ಇದು ಕೇವಲ 0.5 ಪರ್ಸೆಂಟ್ ಅಷ್ಟೇಯಂತೆ. ಮದುವೆಯ ಆಡಂಬರ ಒಳಗೂ, ಹೊರಗೂ ಅಬ್ಬರದಲ್ಲೇ ಇದೆ. ಕಾರ್ಡಿನಿಂದ ಹಿಡಿದು ಮದುವೆಯ ಎಲ್ಲಾ ವ್ಯವಸ್ಥೆಯವರೆಗೂ, ಬಟ್ಟೆಯಿಂದ ಹಿಡಿದು ಅಡುಗೆಯವರೆಗೂ ಎಲ್ಲವೂ ಸೂಪರ್ ರಿಚ್. ತಿಂಗಳುಗಳ ಕಾಲ ಮಾಡ್ಕೊಂಡಿರೋ ಮದುವೆ ಅಂದ್ಮೇಲೆ ಮದುವೆ ಊಟದ ಬಗ್ಗೆ ಹೇಳದಿದ್ರೆ ಹೇಗೆ? ಪ್ರಪಂಚದ ಮೂಲೆ ಮೂಲೆಯಲ್ಲಿ ಏನೇನು ವೆರೈಟಿ ಹೆಸರುವಾಸಿಯಾಗಿರುತ್ತೋ, ಅದೆಲ್ಲವೂ ಈ ಮದುವೆಯಲ್ಲಿತ್ತು.. ಬರೋಬ್ಬರಿ 3 ಸಾವಿರ ವೆರೈಟಿಯ ಭಕ್ಷ್ಯ ಭೋಜ್ಯಗಳು ಮದುವೆ ಮನೆಯ ಪಾಕಶಾಲೆಯಲ್ಲಿ ಬಾಯೂರಿಸುವಂತಿತ್ತು.
ವಿವಾಹ ಭೋಜನವಿದು!
ಅಂಬಾನಿಯ ವಿವಾಹ ಭೋಜನವಿದು. ಇಲ್ಲಿ 230ಕ್ಕೂ ಹೆಚ್ಚು ಫುಡ್ ಕೌಂಟರ್ಗಳಿವೆ. ಕಾಶಿ ಸೇರಿ ಅನೇಕ ಕಡೆಯ ಚಿಕ್ಕ ಚಿಕ್ಕ ಚಾಟ್ ಕೌಂಟರ್ಸ್ ಕೂಡ ಸೇರಿವೆ. ಮಿಡ್ನೈಟ್ ಸ್ನ್ಯಾಕ್ಸ್ ಜೊತೆಗೆ ಬೆಳಗಿನ ಟಿಫನ್ಗೆ 100ಕ್ಕೂ ಹೆಚ್ಚು ಆಪ್ಷನ್ ಇತ್ತು. ಲಂಚ್ಗಾಗಿಯೇ 250ಕ್ಕೂ ಹೆಚ್ಚು ಆಪ್ಷನ್. ಇನ್ನು, ರಾತ್ರಿ ಊಟಕ್ಕೆ 250ಕ್ಕೂ ಹೆಚ್ಚು ಆಪ್ಷನ್ಸ್ ಇದೆಯಂತೆ. ವೆಜ್, ನಾನ್ ವೆಜ್ ತಿನ್ನುವವರಿಗಾಗಿಯೇ ಸಪರೇಟ್ ಕೌಂಟರ್ಗಳು ತೆರೆದಿದ್ದು, ಕೆಲ ಅತಿಥಿಗಳಿಗೆ ಇಂಧೋರ್ ಶೈಲಿಯ ರುಚಿಯನ್ನೂ ಸಿದ್ಧಪಡಿಸಲಾಗಿದ್ಯಂತೆ. ಇನ್ನು, ಇಂಧೋರ್ ಶೈಲಿಯ ಖಾದ್ಯಗಳಿಗಾಗಿಯೇ 25 ಬಾಣಸಿಗರನ್ನ ಕರೆಸಲಾಗಿದೆ. ಬರೀ ಪ್ಯಾನ್ ಇಂಡಿಯಾ ಲೆವೆಲ್ನ ಫುಡ್ ಅಷ್ಟೇ ಅಲ್ಲ, ಮೆಡಿಟರೇನಿಯನ್, ಜಾಪನೀಸ್, ಥಾಯ್, ಮೆಕ್ಸಿಕನ್ ಖಾದ್ಯಗಳನ್ನೂ ತಯಾರಿಸಲಾಗಿದೆ.
ಇನ್ನು, ಮದುವೆಗಾಗಿ ಬಂದು ಹೋಗುವ ಅತಿಥಿಗಳಿಗಾಗಿ, ಪ್ರಯಾಣದ ವ್ಯವಸ್ಥೆಯೂ ಅಷ್ಟೇ ಆಡಂಬರವಾಗಿದೆ. ಹೊರ ದೇಶಗಳಿಂದ ಬರುವವರಿಗಾಗಿ, ಕ್ಲಬ್ ಒನ್ ಏರ್ ಕಡೆಯಿಂದ 100ಕ್ಕೂ ಹೆಚ್ಚು ಖಾಸಗಿ ವಿಮಾನಗಳನ್ನೇ ವ್ಯವಸ್ಥೆ ಮಾಡಲಾಗಿತ್ತು. ಹಾಗೆಯೇ ಮೂರು ಫಾಲ್ಕನ್- 2000 ಜೆಟ್ಗಳನ್ನ ಬುಕ್ ಮಾಡಲಾಗಿತ್ತು. ಜುಲೈ 12ಕ್ಕೆ ಶುರುವಾಗಿರೋ ಈ ಶುಭ ವಿವಾಹ ಉತ್ಸವ, ಜುಲೈ 13ಕ್ಕೆ ಶುಭ ಆಶಿರ್ವಾದ ಅಂತಾ ನಡೆಯುತ್ತೆ. ಅಲ್ಲಿ ದಂಪತಿಗಳು ಗೌರವಾನ್ವಿತ ಅತಿಥಿಗಳಿಂದ ಆಶೀರ್ವಾದ ಪಡೆದುಕೊಳ್ತಾರೆ. ಇನ್ನು, ಜುಲೈ 14ಕ್ಕೆ ಭವ್ಯ ಸ್ವಾಗತವಾದ ಮಂಗಳ ಉತ್ಸವ ನಡೆದು ಕೊನೆಯಾಗುತ್ತೆ.
ಇದನ್ನೂ ಓದಿ: ಸಿಗರೇಟ್ ಸೇದದವರಿಗೆ ಲಂಗ್ ಕ್ಯಾನ್ಸರ್.. ಅಪರ್ಣಾ ಸಾವಿನ ಬೆನ್ನಲ್ಲೇ ಹೆಚ್ಚಿದ ಆತಂಕ; ಏನಿದು ಅಪಾಯ?
ಮುಕೇಶ್ ಅಂಬಾನಿ ದಂಪತಿಗೆ ಮೂರು ಜನ ಮಕ್ಕಳು. ಆ ಮೂವರಲ್ಲಿ ಇಬ್ಬರ ಮದುವೆ ಈಗಾಗಲೇ ಆಗೋಗಿದೆ. ಆದ್ರೆ, ಅನಂತ್ ಅಂಬಾನಿ, ಅಂಬಾನಿ ದಂಪತಿಯ ಕಿರಿಮಗನಾಗಿದ್ದು, ಮೊದಲಿಬ್ಬರು ಮಕ್ಕಳಿಗಿಂತ ಹೆಚ್ಚು ರಿಚ್ ಆಗಿಯೇ ಈ ಮದ್ವೆಗೆ ದುಡ್ಡು ಮಾಡಲಾಗಿದೆ. ಆ ರಿಚ್ನೆಸ್ಗೆ ಮತ್ತೊಂದು ಉದಾಹರಣೆಯೇ ಮದುವೆಗೆ ಅಂತಾ ಮಾಡಿಸಿದ್ದ ಇನ್ವಿಟೇಷನ್. ಹೌದು, ಅಂಬಾನಿ ತಮ್ಮ ಹಿತೈಷಿಗಳಿಗೆ ನೀಡೋದಕ್ಕೆ ಅಂತಾ ಸಿದ್ಧಪಡಿಸಿದ್ದ ಇನ್ವಿಟೇಷನ್ ಒಂದಕ್ಕೆ 6ರಿಂದ 7 ಲಕ್ಷ ರೂಪಾಯಿ ಅಂತೆ. ಅದೂ ಒಂದೇ ಒಂದು ಇನ್ವಿಟೇಷನ್ನ ಬೆಲೆ ಮಾತ್ರ. ಆಮಂತ್ರಣ ಪತ್ರಿಕೆ ಜೊತೆ ಇಟ್ಟಿದ್ದ ಶಾಲಿನ ಬೆಲೆಯೇ 10ರಿಂದ 12 ಸಾವಿರ ರೂಪಾಯಿ ಇದ್ಯಂತೆ.
ಇನ್ವಿಟೇಷನ್ ಕಾರ್ಡ್ನ ಒಳಗೆ ದೇವಾಲಯ ದ್ವಾರದಂತಿತ್ತು. ಅದರೊಳಗಡೆ ದೇವರ ವಿಗ್ರಹಗಳ ಜೊತೆಗೆ ಮದುವೆಯ ಮಮತೆಯ ಕರೆಯೋಲೆ ಇತ್ತು. ಮತ್ತೊಂದು ಕಾರ್ಡ್ನಲ್ಲಿ ವಿಷ್ಣು ಮೂರ್ತಿಯ ಕೆತ್ತನೆ ಇತ್ತು. ಮತ್ತೊಂದರಲ್ಲಿ ಮಂತ್ರಗಳಿದ್ವು. ಹೀಗೆ, ಅನಂತ್ ಮದುವೆಯ ಲಗ್ನ ಪತ್ರಿಕೆಯೇ ಎಲ್ಲರ ದಂಗುಬಡಿಸುವಂತಿತ್ತು. ಇನ್ನು, ಭೂಲೋಕದ ಅದ್ದೂರಿ ಮದುವೆಗೆ ಆಗಮಿಸಿದ ಅತಿಥಿಗಳ ಪಟ್ಟಿಯೂ ನಿಜಕ್ಕೂ ಹುಬ್ಬೇರಿಸುವಂತದ್ದು. ಬರೊಬ್ಬರಿ 5 ಸಾವಿರ ಕೋಟಿಯಲ್ಲಿ ಮದುವೆ ಅಂದ್ರೆ ಕಲ್ಪನೆಗೂ ಮೀರಿದ್ದೇ ಆಗಿರ್ಬೇಕು. ಇಡೀ ಪ್ರಪಂಚದಲ್ಲಿ ಪ್ರಭಾವಿಗಳೆಲ್ಲಾ ಅಂಬಾನಿ ಮನೆ ಮದುವೆ ಬರ್ತಾರೆ ಅಂದ್ರೆ, ಈ ಮಟ್ಟಿನ ಖರ್ಚು ಇದ್ದೇ ಇರುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ