ಇಂದಿನಿಂದ 3 ದಿನ ಅಂಬಾನಿ ಮಗನ ಮದುವೆ.. ವೆಡ್ಡಿಂಗ್​​ಗೆ ಖರ್ಚಾಗ್ತಿರೋ ಹಣ ಎಷ್ಟು ಸಾವಿರ ಕೋಟಿ?

author-image
Ganesh Nachikethu
Updated On
ನೆಟ್ಟಿಗರ ಕಣ್ಮನ ಸೆಳೆದ ಕ್ಲಿಪ್​.. ಮೊಮ್ಮಕ್ಕಳ ಜೊತೆ ರೆಟ್ರೋ ಹಾಡು ರೀ ಕ್ರಿಯೇಟ್ ಮಾಡಿದ ಅಂಬಾನಿ ದಂಪತಿ; ಏನಿದರ ಸ್ಪೆಷಲ್‌?
Advertisment
  • ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರೋ ಸುದ್ದಿ ಅಂಬಾನಿ ಮಗನ ಮದುವೆ
  • ಮುಖೇಶ್​ ಅಂಬಾನಿ ಮಗ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಮ್ಯಾರೇಜ್​​
  • ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರೋ ಅದ್ದೂರಿ ವೆಡ್ಡಿಂಗ್​​ ಇದು!

ಇಡೀ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರೋ ಸುದ್ದಿ ಎಂದರೆ ಅದು ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗನ ಮದುವೆ. ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ ಭರ್ಜರಿ ತಯಾರಿ ನಡೆದಿದೆ. ಇನ್ನೇನು ಮದುವೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಇದೇ 12ರಂದು ಇವರು ಸಪ್ತಪದಿ ತುಳಿಯಲಿದ್ದಾರೆ.

ಇನ್ನು, ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ. ಮದುವೆ ಮೂರು ದಿನಗಳ ಕಾಲ ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳ ಇರಲಿವೆ. ನಾಳೆ ಎಂದರೆ ಮೊದಲ ದಿನ ಜುಲೈ 12ಕ್ಕೆ ಶುಭ ವಿವಾಹ ನಡೆಯಲಿದೆ. ಮದುವೆಗೆ ಡ್ರೆಸ್​ ಕೂಡ ಇದೆ. ಎಲ್ಲರೂ ಭಾರತೀಯ ಟ್ರೆಡಿಷನಲ್ ಡ್ರೆಸ್ ಹಾಕಿಕೊಂಡು ಬರಬೇಕು ಎಂದು ವರದಿಯಾಗಿದೆ.

publive-image

ಎರಡನೇ ದಿನ ಜುಲೈ 13ಕ್ಕೆ 'ಶುಭ ಆಶೀರ್ವಾದ್' ಇದೆ. ಈ ಕಾರ್ಯಕ್ರಮಕ್ಕೆ ಭಾರತೀಯ ಶೈಲಿಯ ಫಾರ್ಮಲ್ ಉಡುಪುಗಳನ್ನು ಧರಿಸಬೇಕಿದೆ. ಮೂರನೇ ದಿನ ಜುಲೈ 14ಕ್ಕೆ 'ಮಂಗಳ ಉತ್ಸವ್' ನಡೆಯಲಿದೆ. ಇದು ಆರತಕ್ಷತೆಯಾಗಿರುತ್ತೆ. ಮೂರು ದಿನಗಳು ನಡೆಯೋ ಮದುವೆಗೆ ಕ್ರೀಡಾ ಲೋಕದ ದಿಗ್ಗಜರು, ಕ್ರಿಕೆಟರ್ಸ್​​, ಬಾಲಿವುಡ್​ ಸೆಲೆಬ್ರಿಟಿಗಳು, ದೇಶದ ಪ್ರತಿಷ್ಠಿತ ಉದ್ಯಮಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ವಿವಿಧ ರಂಗದ ಗಣ್ಯರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಮದುವೆಗೆ ಎಷ್ಟು ಸಾವಿರ ಕೋಟಿ ಖರ್ಚು ಗೊತ್ತಾ?

ಇನ್ನು, ಮದುವೆ ಮದುವೆ, ವಿಡಿಯೋ ಶೂಟ್​​, ಊಟ, ಗಣ್ಯರ ಸ್ಟೇಯಿಂಗ್​​​ಗೆ ವ್ಯವಸ್ಥೆ, ಡೆಕೋರೇಷನ್, ಮ್ಯೂಸಿಕಲ್​ ಪ್ರೋಗ್ರಾಮ್ಸ್​​, ಸ್ಟೇಜ್​ ಪ್ರೋಗ್ರಾಮ್ಸ್​​, ಟ್ರಾವೆಲಿಂಗ್​​ ವೆಚ್ಚ ಸೇರಿದಂತೆ ಬರೋಬ್ಬರಿ 5 ಸಾವಿರ ಕೋಟಿ ಖರ್ಚಾಗಲಿದೆ ಎಂದು ತಿಳಿದು ಬಂದಿದೆ. ಸಾವಿರ ಕೋಟಿ ಮದುವೆ ಎಂದೇ ಖ್ಯಾತಿ ಪಡೆದಿದೆ.

ಇದನ್ನೂ ಓದಿ:ಅಂಬಾನಿ ಮದ್ವೆಯ ಎಫೆಕ್ಟ್‌.. ಒಂದು ರಾತ್ರಿಗೆ ಮುಂಬೈ ಹೋಟೆಲ್ ರೂಂ ರೇಟ್ ಎಷ್ಟು ಗೊತ್ತಾ? ಶಾಕ್ ಆಗ್ತೀರಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment