/newsfirstlive-kannada/media/post_attachments/wp-content/uploads/2024/07/AMBANI-2-1.jpg)
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದೆ. ಈಗ ಅಂಬಾನಿ ಕುಟುಂಬದಲ್ಲಿ ಮದುವೆ ನಂತರದ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ. ಅಂತೆಯೇ ನಿನ್ನೆ ಹೆಣ್ಣು ಒಪ್ಪಿಸಿ ವಿದಾಯ ಹೇಳುವ ಕಾರ್ಯಕ್ರಮ ನಡೆಯಿತು. ಈ ವೇಳೆ ರಾಧಿಕಾ ಮರ್ಚೆಂಟ್ ಅವರ ಮಾವ ಮುಕೇಶ್ ಅಂಬಾನಿ ಕಣ್ಣೀರು ಇಟ್ಟಿದ್ದಾರೆ.
ರಾಧಿಕಾ ಮರ್ಚೆಂಟ್ ತನ್ನ ಕುಟುಂಬಕ್ಕೆ ವಿದಾಯ ಹೇಳುವ ಕಾರ್ಯಕ್ರಮ (vidai/ bidaai) ದಲ್ಲಿ ಮುಕೇಶ್ ಅಂಬಾನಿ ತುಂಬಾ ಭಾವುಕರಾಗಿದ್ದಾರೆ. ಇನ್ನು ರಾಧಿಕಾ ಮರ್ಚೆಂಟ್ ಸಹಜವಾಗಿಯೇ ಕಣ್ಣೀರು ಹಾಕುತ್ತಿರೋದು ಕಂಡುಬಂದಿದೆ. ಸದ್ಯ ಅಂಬಾನಿ ಕಣ್ಣೀರಿಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಹೆಚ್ಚಿದ ಗೌರವ.. ಸ್ಥಳೀಯ ಆರ್ಥಿಕತೆಗೆ ಬಲ.. ಮುಖೇಶ್ ಅಂಬಾನಿ ಪುತ್ರನ ಮದ್ವೆಯಿಂದ ಯಾರಿಗೆ, ಹೇಗೆ ಲಾಭ..?
ಏನಿದು ವಿದಾಯಿ ಕಾರ್ಯಕ್ರಮ..?
ಭಾರತೀಯ ಮದುವೆ ಸಮಾರಂಭದಲ್ಲಿ ಹೆಣ್ಣು ಒಪ್ಪಿಸಿ ವಿದಾಯ ಹೇಳುವ ಪದ್ದತಿ ತುಂಬಾನೇ ಭಾವನಾತ್ಮಕ ಘಳಿಗೆ ಸಾಕ್ಷಿಯಾಗುತ್ತದೆ. ಹೆಣ್ಣು ಹೆತ್ತ ಕುಟುಂಬ ಮಗುವನ್ನು ಎತ್ತಿ ಆಡಿಸಿ, ಮುದ್ದಾಡಿ ದೊಡ್ಡವರನ್ನಾಗಿ ಮಾಡುತ್ತದೆ. ಆಕೆ ಮದುವೆ ವಯಸ್ಸಿಗೆ ಬಂದಾಗ ಖುಷಿಯಿಂದ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ. ಈ ವೇಳೆ ಹೆಣ್ಣಿನ ಕುಟುಂಬಸ್ಥರು, ಮಗಳಿಗೆ ಗಂಡನ ಮನೆಗೆ ಪ್ರೀತಿ ನೀಡಿ, ಮನೆಯನ್ನು ಬೆಳಗಿಕೊಂಡು ಹೋಗುವಂತೆ ಹಿತನುಡಿಗಳನ್ನು ಹೇಳಿ, ಆಶೀರ್ವಾದ ಮಾಡುತ್ತಾರೆ. ನಂತರ ಆಕೆಯ ಪತಿಯ ಕೈಗೆ ಮಗಳನ್ನು ಒಪ್ಪಿಸುತ್ತಾರೆ. ನಂತರ ಹೆಣ್ಣಿನ ಕಡೆಯ ದಿಬ್ಬಣ ವಾಪಸ್ ಹೋಗಲಿದೆ. ಇದು ಮದುಮಗಳಿಗೆ ಹಾಗೂ ಆಕೆಯ ಹೆತ್ತ ಕುಟುಂಬಕ್ಕೆ ತುಂಬಾ ಭಾರವಾದ ಕ್ಷಣವಾಗಿದೆ.
Indian billionaire Mukesh Ambani tears up during Radhika Merchant’s Vidai. #AnantAmbani#RadhikaMerchant#Anantradhikareception#AnantRadhikaWeddingpic.twitter.com/WPRwOsM8xx
— CineScoop (@Cinescoop7) July 14, 2024
ಇದನ್ನೂ ಓದಿ:‘ತಪ್ಪಾಗಿದ್ದರೆ ಕ್ಷಮಿಸಿ ಬಿಡಿ..’ ಕೈಮುಗಿದ ನೀತಾ ಅಂಬಾನಿ.. ಮದುವೆಯಲ್ಲಿ ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ