/newsfirstlive-kannada/media/post_attachments/wp-content/uploads/2025/06/PRAKASH-SHAH-1.jpg)
ಇದ್ದವರಿಗೆ ಒಂದು ಚಿಂತೆ.. ಇಲ್ಲದವರಿಗೆ ಇನ್ನೊಂದು ಚಿಂತೆ. ಜೀವನವೇ ಹಾಗೆ ಯಾರನ್ನು ಎಲ್ಲಿಗೆ ತಂದು ನಿಲ್ಲಿಸುತ್ತೆ ಅಂತಾ ಹೇಳೋಕೇ ಆಗಲ್ಲ. ನಿಮಗೆ ಈ ಸ್ಟೋರಿ ಅಚ್ಚರಿ ತರಬಹುದು. 75 ಕೋಟಿ ಸಂಭಾವನೆ ಪಡೆಯುವ ವ್ಯಕ್ತಿಯೊಬ್ಬ, ಲೌಕಿಕ ಬದುಕಿನ ಯಾವುದೇ ಜಂಜಾಟಗಳು ಬೇಡವೆಂದು ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಅಂದ್ಹಾಗೆ ಅವರು ಬೇರೆ ಯಾರೂ ಅಲ್ಲ. ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಬಲಗೈ ಭಂಟ, ಪ್ರಕಾಶ್ ಶಾ! (Prakash Shah) ದೇಶದಲ್ಲಿರುವ ಅತಿದೊಡ್ಡ ಮತ್ತು ಅತ್ಯಂತ ಪ್ರಬಾವಶಾಲಿ ಕಂಪನಿಗಳಲ್ಲಿ ರಿಲಯನ್ಸ್ ಇಂಡಸ್ಟ್ರಿ (Reliance Industries) ಕೂಡ ಒಂದು. ಅಂಬಾನಿ ನಾಯಕತ್ವದಲ್ಲಿ ಈ ಸಂಸ್ಥೆಯು ಪೆಟ್ರೋಕೆಮಿಕಲ್ಸ್, ಚಿಲ್ಲರೆ ವ್ಯಾಪಾರ, ದೂರಸಂಪರ್ಕ ಮತ್ತು ಡಿಜಿಟಲ್ ಸೇವೆಗಳವರೆಗೆ ಕದಂಬಬಾಹು ಚಾಚಿದೆ. ಕೇವಲ ದೇಶದಲ್ಲಿ ಮಾತ್ರವಲ್ಲದೇ, ಅಂತಾರಾಷ್ಟ್ರೀಯ ಮಟ್ಟದಲ್ಲೂ ದೃಢವಾದ ನೆಲೆಯನ್ನು ಕಂಡುಕೊಂಡಿದೆ. ಇಂಥ ದೈತ್ಯ ಕಂಪನಿಯನ್ನು ಮುನ್ನಡೆಸೋದು, ದೂರದೃಷ್ಟಿಯ ಹೆಗ್ಗುರಿಗಳನ್ನು ಕಾರ್ಯಗತಗೊಳಿಸೋದು ಅಷ್ಟು ಸುಲಭದ ಮಾತಲ್ಲ. ಅದರ ಹಿಂದೆ ಸಮರ್ಪಿತ, ಸಮರ್ಥ, ನಿಷ್ಠಾವಂತ ಮತ್ತು ಅನುಭವಿ ವೃತ್ತಿಪರರ ದೊಡ್ಡ ತಂಡವೇ ಕೆಲಸ ಮಾಡ್ತಿದೆ. ಅಂಥವ್ರಲ್ಲಿ ಈ ಪ್ರಕಾಶ್ ಶಾ ಕೂಡ ಒಬ್ಬರು.
ಇದನ್ನೂ ಓದಿ: ‘ಬೆಂಗಳೂರು ಸಹವಾಸ ಸಾಕ್ರಿ’ ಎಂದ ಉದ್ಯಮಿ ದಂಪತಿ ವಿರುದ್ಧ ಭಾರೀ ಆಕ್ರೋಶ.. ಏನಾಯ್ತು..?
ಅಂಬಾನಿಯ ರೈಟ್ ಹ್ಯಾಂಡ್ ಪ್ರಕಾಶ್ ಶಾ..
ಪ್ರಕಾಶ್ ಶಾ, ಇದೀಗ ಲೌಕಿಕ ಅಸ್ತಿತ್ವವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಅದಕ್ಕಾಗಿ ತಮಗೆ ಸಿಗುತ್ತಿದ್ದ ಬರೋಬ್ಬರಿ 75 ಕೋಟಿ ಸಂಬಳವನ್ನೂ ತೊರೆದಿದ್ದಾರೆ. ಅಂಬಾನಿ ಅವರ ರೈಟ್ ಹ್ಯಾಂಡ್ ಎಂದೇ ಬಿಂಬಿತಗೊಂಡಿದ್ದ ಇವರು, ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪ್ರಕಾಶ್ ಶಾ ತಮ್ಮ 63ನೇ ವಯಸ್ಸಿನಲ್ಲಿ ಕರ್ತವ್ಯಕ್ಕೆ ಗುಡ್ಬೈ ಹೇಳಿದ್ದರು. ಅದಾದ ಸ್ವಲ್ಪ ಸಮಯದಲ್ಲೇ ದೀಕ್ಷೆ ಪಡೆದು ಆಧ್ಯಾತ್ಮಿಕ ಜೀವನಕ್ಕೆ ಪ್ರವೇಶ ಮಾಡಿದ್ದಾರೆ. ಕಳೆದ ಏಪ್ರಿಲ್ನಲ್ಲಿ ಮಹಾವೀರ ಜಯಂತಿಯ ಸಂದರ್ಭದಲ್ಲಿ ಔಪಚಾರಿಕವಾಗಿ ದೀಕ್ಷೆ ಪಡೆದುಕೊಂಡಿದ್ದಾರೆ. ಅವರ ಹಾದಿಯಲ್ಲೇ ಪತ್ನಿ ನೈನಾ ಶಾ (Naina Shah) ಕೂಡ ಸಾಗಿದ್ದಾರೆ.
ಇದನ್ನೂ ಓದಿ: ಐಬ್ರೋ ಶೇಪ್ ಮಾಡಿಸೋ ಮಹಿಳೆಯರೇ ಎಚ್ಚರ.. ವೈದ್ಯರಿಂದ ಶಾಕಿಂಗ್ ಅಂಶ ಬೆಳಕಿಗೆ!
ಓದಿದ್ದು ಏನು..?
ಪ್ರಕಾಶ್ ಶಾ ಕೆಮಿಕಲ್ ಎಂಜಿನಿಯರ್ (Chemical Engineer). ಐಐಟಿ ಬಾಂಬೆಯಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ. ನೈನಾ, ಪ್ರಕಾಶ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಓರ್ವ ಪುತ್ರ ಕೂಡ ದೀಕ್ಷೆ ಪಡೆದುಕೊಂಡಿದ್ದು, ಮತ್ತೋರ್ವನಿಗೆ ಮದುವೆ ಆಗಿದ್ದು, ಒಂದು ಮಗು ಇದೆ. ರಿಲಯನ್ಸ್ ಇಂಡಸ್ಟ್ರಿಯಲ್ಲಿ ಪ್ರಕಾಶ್ ಹಲವು ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡಿ, ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ವರದಿಗಳ ಪ್ರಕಾರ, ಅವರ ನಿವೃತ್ತಿ ಅಂತ್ಯದ ವೇಳೆಗೆ ಇವರ ವಾರ್ಷಿಕ ಸಂಬಳ 75 ಕೋಟಿ ರೂಪಾಯಿ ಎಂದು ವರದಿಯಾಗಿದೆ.
ಸದ್ಯ ಮುಂಬೈನ ಬೋರಿವಳಿ ( Borivali)ಯಲ್ಲಿ ವಾಸವಿದ್ದಾರೆ. ದೀಕ್ಷೆ ಪಡೆದ ನಂತರ ಭುವನ್ ಜೀತ್ ಮಹಾರಾಜ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಕಾರಿನಲ್ಲಿ ಓಡಾಡುತ್ತಿದ್ದ ಪ್ರಕಾಶ್ ಶಾ ಅವರು, ಇಂದು ಬರೀಗಾಲಲ್ಲಿ ಒಂದು ಊರು ಗೋಲು ಹಿಡಿದು ಶಾಂತಿ ಹಾಗೂ ಸರಳತೆಯ ಮಂತ್ರ ಪಠಿಸುತ್ತಿದ್ದಾರೆ.
ಇದನ್ನೂ ಓದಿ: ಯೋಗದ ಅಂತರಂಗ ತೆರೆದಿಡುವ 10 ನುಡಿಮುತ್ತುಗಳು -ರವಿ ಶಂಕರ ಗುರೂಜಿ ಕಿವಿಮಾತುಗಳು ಏನೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ