/newsfirstlive-kannada/media/post_attachments/wp-content/uploads/2025/05/MUKUL-DEV.jpg)
ಬಹುಭಾಷಾ ನಟ ಮುಕುಲ್ ದೇವ್ (54) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಆರೋಗ್ಯ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮುಕುಲ್ ದೇವ್, ನಟ ರಾಹುಲ್ ದೇವ್ ಅವರ ಸಹೋದರ ಆಗಿದ್ದರು.
ಮುಕುಲ್ ಜೊತೆ ‘ಸನ್ ಆಫ್ ಸರ್ದಾರ್’ ಚಿತ್ರದಲ್ಲಿ ಕೆಲಸ ಮಾಡಿದ್ದ ವಿಂದು ದರ ಸಿಂಗ್ ಅವರು ಈ ನೋವಿನ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್ಮುಂದೆ ಮುಕುಲ್ ಅವರನ್ನು ದೊಡ್ಡ ಸ್ಕ್ರೀನ್ನಲ್ಲಿ ನೋಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಮುಕುಲ್ ಮತ್ತೊಬ್ಬ ಸ್ನೇಹಿತ ದೀಪ್ಸಿಕಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನೋವನ್ನು ಹಂಚಿಕೊಂಡಿದ್ದಾರೆ.
ಮುಕುಲ್ ಅವರು ಹಿಂದಿ, ಪಂಜಾಬಿ ಸಿನಿಮಾಗಳ ಮೂಲಕ ಜನಪ್ರಿಯತೆಗಳಿಸಿದ್ದರು. ಮಾತ್ರವಲ್ಲಿ ಧಾರಾವಾಹಿ, ಆಲ್ಬಮ್ ಸಾಂಗ್ಸ್ ಮೂಲಕವೂ ಪರಿಚಿತರಾಗಿದ್ದರು. ಇವರು ಕೆಲವು ಬಂಗಾಳಿ, ಮಲಯಾಳಂ, ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಕೊರೊನಾ ಭಯ.. ರಾಜ್ಯದ ಜನತೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಶೇಷ ಮನವಿ
ದೆಹಲಿಯಲ್ಲಿ ಜನಿಸಿದ್ದ ಇವರು, ಟಿವಿ ಸೀರಿಯಲ್ಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. 1996ರಲ್ಲಿ ಮುಮ್ಕಿನ್ ಸೀರಿಯಲ್ನಲ್ಲಿ ವಿಜಯ್ ಪಾಂಡೆ ರೋಲ್ ನಿಭಾಯಿಸಿದ್ದರು. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘Ek Se Badh Kar Ek’ ಶೋನಲ್ಲಿ ಕಾಮಿಡಿ ಪಾತ್ರ ಮಾಡಿದ್ದರು. ಕ್ವೈಲಾ (1998), ವಾಜೂದ್ (1998), ಕೊಹ್ರಮ್ (1999) ಮತ್ತು ಮಜೆ ಮೇರಿ ಬಿವಿ ಸೇ ಬಚಾವೋ (2001) ಚಿತ್ರಗಳಲ್ಲಿ ಹೆಸರು ಮಾಡಿದ್ದರು.
ಇದನ್ನೂ ಓದಿ: ಆರ್ಸಿಬಿ ಕ್ಯಾಂಪ್ ತೊರೆದ ಮತ್ತೊಬ್ಬ ಸ್ಟಾರ್.. ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ