ದೇಶದ ಭದ್ರತೆಗೆ ಹೊಸ ಕ್ರಾಂತಿ.. ಬ್ಯಾಟಲ್ ರೋಬೋ​​ ಎಂಟ್ರಿ.. ಇವುಗಳ ವಿಶೇಷತೆ ಏನು?

author-image
Ganesh
Updated On
ದೇಶದ ಭದ್ರತೆಗೆ ಹೊಸ ಕ್ರಾಂತಿ.. ಬ್ಯಾಟಲ್ ರೋಬೋ​​ ಎಂಟ್ರಿ.. ಇವುಗಳ ವಿಶೇಷತೆ ಏನು?
Advertisment
  • ದೇಶಕ್ಕೆ ಸಿಗಲಿದೆ ಮತ್ತಷ್ಟು ಹೈಟೆಕ್ ಸೆಕ್ಯೂರಿಟಿ
  • ‘ರೋಬೋ ಡಾಗ್’ ವೈಶಿಷ್ಟ್ಯ ಏನೇನು ಗೊತ್ತಾ?
  • ಯಾವೆಲ್ಲ ಕ್ಷೇತ್ರದಲ್ಲಿ ರೋಬೋ ಡಾಗ್ ಬಳಸಿಕೊಳ್ಳಬಹುದು?

ರೋಬೋಟ್​ಗಳು ಮನೆ, ಕಚೇರಿಯ ಕೆಲಸ ಮಾತ್ರವಲ್ಲದೇ ಯುದ್ಧವನ್ನೂ ಮಾಡುತ್ತವೆ. ಅನೇಕ ದೇಶಗಳಲ್ಲಿ ಭದ್ರತೆಗಾಗಿ ರೋಬೋಟ್​​ಗಳನ್ನು ನಿಯೋಜಿಸಲಾಗಿದೆ. ಭಾರತದಲ್ಲೂ ಕೂಡ ಇದೇ ಮೊದಲ ಬಾರಿಗೆ ಆರ್ಮಿ ಪರೇಡ್​ನಲ್ಲಿ ರೋಬೋಟ್​ಗಳು ತಮ್ಮ ಶಕ್ತಿ ಪ್ರದರ್ಶನ ಮಾಡಲಿವೆ.

ಜನವರಿ 15 ರಂದು ‘ಆರ್ಮಿ ಡೇ’ ನಡೆಯಲಿದೆ. ಈ ಸೇನಾ ದಿನಾಚರಣೆಯಲ್ಲಿ ಭಾರತೀಯ ಸೇನೆಯು ಮಿಲಿಟರಿ ತಂತ್ರಜ್ಞಾನದಲ್ಲಿರುವ ಎಲ್ಲಾ ಪ್ರಗತಿಗಳನ್ನೂ ಪ್ರದರ್ಶನ ಮಾಡಲಿದೆ. ಅಂತೆಯೇ ರೋಬೋಟ್​ಗಳು ಕೂಡ ಮಿಲಿಟರಿ ಪರೇಡ್​ನಲ್ಲಿ ಭಾಗಿಯಾಗಲಿವೆ. ಇವುಗಳನ್ನು MULE (ಮಲ್ಟಿ ಯುಟಿಲಿಟಿ ಲೆಗ್ ಇಕ್ಯುಪ್ಮೆಂಟ್) ಎಂದು ಕರೆಯಲಾಗುತ್ತದೆ. ಸದ್ಯ ಭಾರತೀಯ ಸೇನೆಯ ದಕ್ಷಿಣ ಕಮಾಂಡ್ ಪುಣೆಯ ಮೈದಾನದಲ್ಲಿ ರೋಬೋಟ್​ಗಳ ತಾಲೀಮು ನಡೆಸಿದೆ.

ಇದನ್ನೂ ಓದಿ: ಜಿಯೋ ಬಳಕೆದಾರರೇ ಎಚ್ಚರ! ಈ ನಂಬರ್​​ನಿಂದ ಮಿಸ್ಡ್​ ಕಾಲ್ ಬಂದ್ರೆ ವಾಪಸ್ ಮಾಡಲೇಬೇಡಿ..!

ಇವುಗಳ ವಿಶೇಷತೆ ಏನು..?

  • ಸೇನೆಯು ARCV-MULE ನ 100 ಘಟಕಗಳನ್ನು ಖರೀದಿಸಿದೆ
  • ಈ ರೋಬೋಟಿಕ್ ಹೆಸರು ಗತ್ತೆಗಳು ತುಂಬಾ ಶಕ್ತಿಯುತವಾಗಿವೆ
  • ಇವುಗಳನ್ನು ‘ರೋಬೋ ಡಾಗ್’ ಅಂತಲೂ ಕರೆಯಲಾಗುತ್ತದೆ
  • ಮೆಟ್ಟಿಲುಗಳನ್ನು ಹತ್ತುತ್ತವೆ, ಕಡಿದಾದ ದಾರಿಯಲ್ಲೂ ಚಲನೆ ಮಾಡ್ತವೆ
  • ಇವುಗಳಲ್ಲಿ ಕೆಲವು ಸ್ವಾಯತ್ತವಾಗಿ ಕಾರ್ಯನಿರ್ವಹಿಸುತ್ತವೆ
  • ಕೆಲವು ರೋಬೋಟ್‌ಗಳನ್ನು ದೂರದಿಂದಲೇ ನಿರ್ವಹಿಸಬಹುದು
  • ಮೈನಸ್ 40 ಡಿಗ್ರಿಯಿಂದ ಪ್ಲಸ್ 50 ಡಿಗ್ರಿ ಸೆಲ್ಸಿಯಸ್​​ನಲ್ಲೂ ಕೆಲಸ
  • 15 ಕೆಜಿ ಪೆಲೋಡ್​ಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿವೆ
  • ರೋಬೋಟ್​ಗಳು ವಿಕಿರಣಶೀಲ ಪತ್ತೆ ಮಾಡುವ ಶಕ್ತಿ ಹೊಂದಿದೆ
  • ಇದರಿಂದ ಸೇನೆಗೆ ವಾಸ್ತವದ ಪರಿಸ್ಥಿತಿ ಅರಿವು ಸಿಗುತ್ತದೆ
  • ಈ ರೋಬೋಟ್‌ಗಳು ಕಂಪ್ಯೂಟ್ ಬಾಕ್ಸ್, ಬ್ಯಾಟರಿ, ಲೆಗ್​​
  • ಫ್ರಂಟ್ ಸೆನ್ಸಾರ್ ಹೆಡ್, ರಿಯರ್ ಸೆನ್ಸಾರ್ ಹೆಡ್ ಹೊಂದಿವೆ
  • ಅಡೆತಡೆ ತಪ್ಪಿಸುವ ಕ್ಯಾಮೆರಾ ಸಂವೇದಕಗಳನ್ನು ಹೊಂದಿವೆ
  • ಎಲ್ಲಿಯೂ ಡಿಕ್ಕಿ ಹೊಡೆಯೋದಿಲ್ಲ, ದೂರದಿಂದಲೇ ತಪ್ಪಿಸಿಕೊಳ್ತವೆ
  • ಮೂಲೆ, ಮೂಲೆಯಲ್ಲೂ ಭದ್ರತೆ ಖಚಿತಪಡಿಸಿಕೊಳ್ಳಬಹುದಾಗಿದೆ

ಅಂದ್ಹಾಗೆ ಈ ರೋಬೋಟ್​ಗಳನ್ನು ದೆಹಲಿ ಮೂಲದ ಏರೋಆರ್ಕ್ ಕಂಪನಿ ಸಿದ್ಧಪಡಿಸಿದೆ. ಈ ರೋಬೋಟ್​​ಗಳ ತೂಕ 51 ಕೆಜಿ ಆಗಿದ್ದು, NVIDIA ಗ್ರಾಫಿಕ್ ಕಾರ್ಡ್​ಗಳನ್ನು ಹೊಂದಿದೆ. ಒಮ್ಮೆ ಚಾರ್ಜ್​ ಮಾಡಿದ್ರೆ 20 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತವೆ. ಭದ್ರತೆ, ವಿಕಿರಣಶಾಸ್ತ್ರ, ಪರಮಾಣು, ಜೈವಿಕ, ಸ್ಫೋಟ ಹಾಗೂ ಗುಪ್ತಚರ ಕಣ್ಗಾವಲಾಗಿ ಬಳಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ:Whatsapp ನಲ್ಲಿ ಅಪ್ಪಿ ತಪ್ಪಿಯೂ ಹೀಗೆ ಮಾಡಿಬಿಟ್ರೆ ಜೈಲು ಶಿಕ್ಷೆ ಆಗುತ್ತೆ; ಇರಲಿ ಎಚ್ಚರ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment