ಮಾಜಿ ಸಚಿವ ಬಿ. ನಾಗೇಂದ್ರ ಅರೆಸ್ಟ್​​ ಬೆನ್ನಲ್ಲೇ ಪತ್ನಿಗೂ ಸಂಕಷ್ಟ.. ಸತತ 7 ಗಂಟೆ ವಿಚಾರಣೆ!

author-image
Veena Gangani
Updated On
ಮಾಜಿ ಸಚಿವ ಬಿ. ನಾಗೇಂದ್ರ ಅರೆಸ್ಟ್​​ ಬೆನ್ನಲ್ಲೇ ಪತ್ನಿಗೂ ಸಂಕಷ್ಟ.. ಸತತ 7 ಗಂಟೆ ವಿಚಾರಣೆ!
Advertisment
  • ಡಾಲರ್ಸ್‌ ಕಾಲೋನಿಯ ನಿವಾಸದಲ್ಲಿ ಪತ್ನಿ ಮಂಜುಳಾ ಇಡಿ ವಶಕ್ಕೆ
  • ಇ.ಡಿ ಕಚೇರಿಗೆ ಕರೆತಂದು ನಾಗೇಂದ್ರ ಪತ್ನಿ ಮಂಜುಳಾಗೆ ವಿಚಾರಣೆ
  • ಪತ್ನಿ ಮಂಜುಳಾ ಹೆಸರಿನಲ್ಲಿ ಕೋಟಿ ಹಣ ವರ್ಗಾವಣೆ ಆಗಿರೋ ಶಂಕೆ

ವಾಲ್ಮೀಕಿ ನಿಗಮದ ಹಗರಣದಲ್ಲಿ ಒಂದ್ಕಡೆ ಬಿ.ನಾಗೇಂದ್ರರನ್ನ ಇ.ಡಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸ್ತಿದೆ. ನಾಗೇಂದ್ರ ಸಂಬಂಧಿಕರು, ಆಪ್ತರನ್ನು ವಿಚಾರಣೆಗೊಳಪಡಿಸ್ತಿರೋ ಇ.ಡಿ ಅಧಿಕಾರಿಗಳು, ಸದ್ಯ ನಾಗೇಂದ್ರ ಪತ್ನಿಯನ್ನೂ ವಿಚಾರಣೆ ನಡೆಸಿದ್ದಾರೆ.

publive-image

ಇದನ್ನೂ ಓದಿ: Kabini: ಉಕ್ಕಿ ಹರಿಯುತ್ತಿದ್ದಾಳೆ ಕಪಿಲೆ! ಪರಶುರಾಮ ದೇವಸ್ಥಾನ ಮುಳುಗಡೆ, ಮನೆ ಖಾಲಿ ಮಾಡುತ್ತಿದ್ದಾರೆ ಜನರು

ಪ್ರಕರಣದಲ್ಲಿ ಈಗಾಗಲೇ ಅಧಿಕಾರಿಗಳು ಹಾಗೂ ಅಕ್ರಮ ವರ್ಗಾವಣೆಗೆ ಸಹಕರಿಸಿದ್ದವರ ಬಂಧನ ಆಗಿದೆ. ಹಣ ವರ್ಗಾವಣೆಯ ಮೂಲ ಕೆದಕಿದ್ದ ಇ.ಡಿ ಸದ್ಯ ನಾಗೇಂದ್ರ ಪತ್ನಿಯನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಂಜುಳಾರನ್ನ ವಶಕ್ಕೆ ಪಡೆದ ಇ.ಡಿ ಅಧಿಕಾರಿಗಳು ಶಾಂತಿನಗರದ ಕಚೇರಿಗೆ ಕರೆತಂದು ವಿಚಾರಣೆ ನಡೆಸ್ತಿದ್ದಾರೆ. ಶಾಸಕ ಬಿ.ನಾಗೇಂದ್ರ ಪತ್ನಿ ಹೆಸರಲ್ಲಿ ಹಣ ವರ್ಗಾವಣೆ ಆಗಿರೋ ಶಂಕೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ನಾಗೇಂದ್ರ ಆಪ್ತಸಹಾಯಕರನ್ನು ವಿಚಾರಣೆ ಮಾಡಿದ್ದ ಇ.ಡಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದೆ.

publive-image

ನಾಗೇಂದ್ರಗೆ ಆಪ್ತರೇ ಕಂಟಕ!

ಇ.ಡಿ ಅಧಿಕಾರಿಗಳು ನಾಗೇಂದ್ರ ಆಪ್ತ ಸಹಾಯಕರಾದ ಹರೀಶ್, ದೇವೇಂದ್ರಪ್ಪ ವಿಚಾರಣೆ ನಡೆಸಿದ್ದರು. ಯಾವೆಲ್ಲಾ ಖಾತೆಗಳಿಗೆ, ಯಾರಿಗೆಲ್ಲಾ ಹಣ ವರ್ಗಾವಣೆ ಆಗಿದೆ ಎಂಬ ಬಗ್ಗೆ ವಿಚಾರಣೆ ನಡೆಸಿದ್ದರು. ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್ ಮೂಲಕ ಆಂಧ್ರದ ಸತ್ಯನಾರಾಯಣ ವರ್ಮಾಗೆ ಹಣ ವರ್ಗಾವಣೆ ಆಗಿರೋ ಬಗ್ಗೆ ಆಪ್ತ ಸಹಾಯಕರಾದ ಹರೀಶ್ ದೇವೇಂದ್ರಪ್ಪಗೆ ಮಾಹಿತಿ ಇತ್ತು, ನಾಗೇಂದ್ರ ಪತ್ನಿ ಹಾಗೂ ಸಂಬಂಧಿಕರ ಹೆಸರಲ್ಲಿ ಬೇನಾಮಿ ಹಣ ವರ್ಗಾವಣೆ ಆಗಿದ್ದು ಸಿಬಿಐ ವಿಚಾರಣೆ ವೇಳೆ ಬಿ.ನಾಗೇಂದ್ರ ವಿರುದ್ಧವೇ ಆಪ್ತರಾದ ನೆಕ್ಕುಂಟಿ ನಾಗರಾಜ್, ಸತ್ಯನಾರಾಯಣವರ್ಮಾ ಹೇಳಿಕೆ ನೀಡಿದ್ದರು.

publive-image

ಮಾಜಿ ಸಚಿವ ಬಿ.ನಾಗೇಂದ್ರಗೆ ಮುಂದುವರಿದ ಡ್ರಿಲ್!

ಇತ್ತ ಮಾಜಿ ಸಚಿವ ಬಿ.ನಾಗೇಂದ್ರ ಇ.ಡಿ ಕಸ್ಟಡಿಯಲ್ಲಿದ್ದು ವಿಚಾರಣೆ ಮುಂದುವರಿದಿದೆ. ನಾಗೇಂದ್ರ ಆಪ್ತರು ನೀಡಿರುವ ಹೇಳಿಕೆ ಆಧರಿಸಿ ಡ್ರಿಲ್ ಮಾಡಿದ್ದಾರೆ. ಇಂದು ನಾಗೇಂದ್ರಗೆ 6 ದಿನಗಳ ಇ.ಡಿ ಕಸ್ಟಡಿ ಅಂತ್ಯ ಹಿನ್ನೆಲೆ ನಾಗೇಂದ್ರರನ್ನ ಶಾಂಗ್ರಿಲಾ ಹೋಟೆಲ್​​ಗೆ ಸ್ಥಳ ಮಹಜರಿಗೂ ಕರೆದೊಯ್ದುವ ಸಾಧ್ಯತೆ ಇದೆ. ಮತ್ತೊಂದೆಡೆ ಶಾಸಕ ದದ್ದಲ್ ನಾಪತ್ತೆಯಾಗಿದ್ದು ಇ.ಡಿ ವಿಚಾರಣೆಗೆ ಹಾಜರಾಗದೇ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದಾರೆ. ಅರೆಸ್ಟ್ ಆಗುವ ಭಯದಲ್ಲಿ ನಿಗೂಢವಾಗಿರೋ ದದ್ದಲ್​ಗೆ ಇ.ಡಿ ಬಲೆ ಬೀಸಿದೆ. ಸದ್ಯ ನಾಗೇಂದ್ರ ಪತ್ನಿ ಮಂಜುಳಾಗೆ ಇ.ಡಿ ತೀವ್ರ ವಿಚಾರಣೆ ನಡೆಸುತ್ತಿದ್ದು ಮಹತ್ವದ ಮಾಹಿತಿಗಳನ್ನು ಕಲೆ ಹಾಕುವ ಯತ್ನ ನಡೆಸ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment