ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ.. 53 ಕ್ಕೂ ಹೆಚ್ಚು ಮಂದಿಯ ಜೀವ ಹೋಗಿದೆ, ಹೆಚ್ಚಿದ ಆತಂಕ..

author-image
Ganesh
Updated On
ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ.. 53 ಕ್ಕೂ ಹೆಚ್ಚು ಮಂದಿಯ ಜೀವ ಹೋಗಿದೆ, ಹೆಚ್ಚಿದ ಆತಂಕ..
Advertisment
  • ಚೀನಾ, ನೇಪಾಳದಲ್ಲಿ 7.1 ರಷ್ಟು ತೀವ್ರತೆಯ ಭೂಕಂಪ
  • ಭೂಮಿ ನಡುಗಿದ್ದಕ್ಕೆ ಕಟ್ಟಡಗಳು ನೆಲಕ್ಕೆ ಉರುಳಿವೆ
  • ದೆಹಲಿ ಸೇರಿ ಉತ್ತರ ಭಾರತದಲ್ಲೂ ಕಂಪಿಸಿದ ಅನುಭವ

ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ಭೂಕಂಪದಿಂದ ಭಾರೀ ಅನಾಹುತ ಆಗಿದೆ. ಚೀನಾದ ಟಿಬೆಟ್, ನೇಪಾಳ ಸೇರಿದಂತೆ ವಿವಿಧೆಡೆ ಒಟ್ಟು ಆರಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದ್ದು, ಒಟ್ಟು 53 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆಯು 7.1 ರಷ್ಟು ದಾಖಲಾಗಿದೆ. ಚೀನಾ, ನೇಪಾಳ ಮಾತ್ರವಲ್ಲದೇ ದೆಹಲಿ-ಎನ್​ಸಿಆರ್ ಸೇರಿದಂತೆ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಭೂಮಿ ಕಂಪಿಸಿದೆ. ಬಿಹಾರದ ಪಾಟ್ನದಲ್ಲಿ ಭಾರೀ ಭೂಕಂಪನದ ಅನುಭವ ಆಗಿದೆ. ಅಲ್ಲದೇ ಪಶ್ಚಿಮ ಬಂಗಾಳ, ಅಸ್ಸಾಂನಲ್ಲೂ ಭೂಮಿ ನಡುಗಿದೆ.

ಇದನ್ನೂ ಓದಿ:BIGG BOSS; ಗೆದ್ದವರಿಗೆ ಗ್ರ್ಯಾಂಡ್​ ಫಿನಾಲೆ ಟಿಕೆಟ್.. ಬಿಗ್ ಬಾಸ್ ಕೊಟ್ಟ ಟಾಸ್ಕ್ ಹೇಗಿದೆ?

ಎನ್​ಸಿಎಸ್​ (National Centre for Seismology) ವರದಿ ಪ್ರಕಾರ.. ಭೂಕಂಪನದ ತೀವ್ರತೆ 7.1 ರಷ್ಟು ದಾಖಲಾಗಿದೆ. ನೇಪಾಳ-ಟಿಬೆಟ್ ಗಡಿಯಲ್ಲಿ ಬೆಳಗ್ಗೆ 6.35ರ ಸುಮಾರಿಗೆ ದುರಂತ ಸಂಭವಿಸಿದೆ. ನೇಪಾಳ-ಟಿಬೆಟ್ ಗಡಿಯಲ್ಲಿ ತೀವ್ರತೆಯು 7.1 ರಷ್ಟಿದ್ದು, ಭಾರೀ ಹಾನಿಯಾಗಿದೆ. ಇನ್ನು ಚೀನಾದ Xizang ಪ್ರದೇಶದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಮೊದಲ ಬಾರಿಗೆ ಅದರ ತೀವ್ರತೆ 4.7 ಹಾಗೂ ಎರಡನೇ ಬಾರಿಗೆ 4.9 ಆಗಿದೆ ಎಂದು ತಿಳಿಸಿದೆ. ರಾಯಿಟರ್ಸ್ ಸುದ್ದಿ ಸಂಸ್ಥೆ ಮಾಡಿರುವ ವರದಿ ಪ್ರಕಾರ, ಚೀನಾದ ಶಿಗೆಟ್ಸೆ ಸಿಟಿಯಲ್ಲಿ ಭೂಕಂಪನದ ತೀವ್ರತೆ 6.8 ರಷ್ಟು ದಾಖಲಾಗಿದೆ. ಆದರೆ ಇಲ್ಲಿ ಯಾವುದೇ ಜೀವ ಹಾನಿಯಾದ ವರದಿ ಆಗಿಲ್ಲ.

ಇದನ್ನೂ ಓದಿ:ದೆಹಲಿ ದಂಗಲ್​​ಗೆ ಇಂದು ದಿನಾಂಕ ನಿಗದಿ; ಮಧ್ಯಾಹ್ನ 2 ಗಂಟೆಗೆ ಮಹತ್ವದ ಘೋಷಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment