ಪಾಕ್ ವಿರುದ್ಧ ಮತ್ತೆ ಗುಡುಗಿದ ಭಾರತೀಯ ಸೇನೆ.. ಇದೀಗ ಬಂದ ಅಧಿಕೃತ ಮಾಹಿತಿ ಏನು..?

author-image
Ganesh
Updated On
ಪಾಕ್ ವಿರುದ್ಧ ಮತ್ತೆ ಗುಡುಗಿದ ಭಾರತೀಯ ಸೇನೆ.. ಇದೀಗ ಬಂದ ಅಧಿಕೃತ ಮಾಹಿತಿ ಏನು..?
Advertisment
  • ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧದ ಕಾರ್ಮೋಡ
  • ಭಾರತದ ಮೇಲೆ ಇಂದು ಬೆಳಗ್ಗೆ ಡ್ರೋಣ್ ದಾಳಿಗೆ ಯತ್ನ
  • ಪಾಕ್​ನ ಡ್ರೋಣ್​​ ಧ್ವಂಸ ಮಾಡಿ ಬಿಸಾಡಿದ ಭಾರತ

ಉಗ್ರ ಪೋಷಕ ಪಾಕಿಸ್ತಾನ ಈ ಜನ್ಮದಲ್ಲಿ ಬುದ್ಧಿ ಕಲಿಯುವ ಲಕ್ಷಣ ಕಾಣ್ತಿಲ್ಲ. ಪಂಜಾಬ್​ನ ಅಮೃತ ಸರದ ಮೇಲೆ ಮತ್ತೆ ದಾಳಿಗೆ ಯತ್ನಿಸಿರುವ ಬಗ್ಗೆ ಭಾರತೀಯ ಸೇನೆ ಅಧಿಕೃತವಾಗಿ ಮಾಹಿತಿ ನೀಡಿದೆ.

ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸೇನೆ.. ಇಂದು ಮುಂಜಾನೆ 5 ಗಂಟೆಯಲ್ಲಿ ಪಾಕ್​ನಿಂದ ನಮ್ಮ ಮೇಲೆ ಡ್ರೋಣ್​​​ ದಾಳಿಗೆ ಯತ್ನಿಸಿದೆ. ಅಮೃತಸರದ ಕಂಟೋನ್ಮೆಂಟ್ ಮೇಲೆ ಡ್ರೋಣ್ ದಾಳಿಯಾಗಿತ್ತು. ಕೂಡಲೇ ನಮ್ಮ ಏರ್​ ಡಿಫೆನ್ಸ್​ ಸಿಸ್ಟಮ್​ ಆ ಡ್ರೋಣ್​​ಗಳನ್ನು ಹೊಡೆದು ಹಾಕಿದೆ.

ಇದನ್ನೂ ಓದಿ: ಪಾಕ್ ದಾಳಿಗೆ ಹುತಾತ್ಮರಾದ ವೀರಯೋಧ ಮುರಳಿ ನಾಯಕ್ ಯಾರು..?

ಭಾರತದ ಸಾರ್ವಭೌಮತ್ವ ಉಲಂಘಿಸುವ ಪಾಕ್ ಯತ್ನ ಒಪ್ಪಲು ಸಾಧ್ಯವಿಲ್ಲ. ಭಾರತದ ನಾಗರಿಕರಿಗೆ ಅಪಾಯ ತರುವ ಪಾಕ್ ಯತ್ನ ಒಪ್ಪಲ್ಲ. ಭಾರತದ ಆರ್ಮಿ, ವೈರಿಯ ಯತ್ನವನ್ನು ವಿಫಲಗೊಳಿಸುತ್ತೆ ಎಂದು ಸೇನೆ ತಿಳಿಸಿದೆ. ಮಾಹಿತಿಗಳ ಪ್ರಕಾರ ಕಳೆದ ರಾತ್ರಿ ಭಾರತದ ಮೇಲೆ 15ಕ್ಕೂ ಹೆಚ್ಚು ಡ್ರೋಣ್​ಗಳನ್ನು ಉಡಾಯಿಸಿದೆ. ಜೊತೆಗೆ ಲಾಂಗ್ ರೇಂಜ್ ಮಿಸೈಲ್​ಗಳನ್ನೂ ಬಳಸಿದೆ.

ಇನ್ನು ಪಾಕ್ ಸೇನೆ ನಿನ್ನೆಯೂ ಭಾರತದ ಮೇಲೆ ದಾಳಿಗೆ ಯತ್ನಿಸಿತ್ತು. ಆದರೆ ಪಾಕಿಸ್ತಾನದ ಎಲ್ಲಾ ಪ್ರಯತ್ನವನ್ನೂ ಭಾರತ ವಿಫಲಗೊಳಿಸುತ್ತ ಬಂದಿದೆ. ಪ್ರತಿಯಾಗಿ ಭಾರತ ಲಾಹೋರ್ ಹಾಗೂ ಕರಾಚಿಯಲ್ಲಿರುವ ವಾಯುನೆಲೆಗಳ ಮೇಲೆ ಭಾರತ ಭಾರತ ದಾಳಿ ಮಾಡಿ ಧ್ವಂಸ ಮಾಡಿದೆ.

ಇದನ್ನೂ ಓದಿ: IPL ಅಭಿಮಾನಿಗಳಿಗೆ ಸಿಹಿಸುದ್ದಿ.. ಬೆಂಗಳೂರಿನಲ್ಲಿ ನಡೆಯುತ್ತೆ ಮುಂದಿನ ಎಲ್ಲಾ ಪಂದ್ಯಗಳು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment