newsfirstkannada.com

ಟ್ರೈನ್​ನಲ್ಲಿ ಬೆಲ್ಟ್​​ನಿಂದ ಹೊಡೆದು, ಚಾಕುವಿನಿಂದ ಇರಿದು ರೈತನ ಭೀಕರ ಕೊಲೆ.. ಗಲಾಟೆ ಆಗಿದ್ದೇಕೆ?

Share :

Published May 6, 2024 at 6:10am

Update May 6, 2024 at 6:11am

  ಓರ್ವ ರೈತನ ಮೇಲೆ ದಾಳಿ ಮಾಡಿ ಕೊಲೆ ಮಾಡಿದ ದುಷ್ಕರ್ಮಿಗಳು

  ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್​ ಆಗುವಾಗ ನಡೆದ ಗಲಾಟೆ

  ಲೋಕಲ್ ರೈಲಿನ ಬೋಗಿಯಲ್ಲಿ ರೈತನ ಕೊಲೆ, ಪೊಲೀಸರಿಂದ ತನಿಖೆ

ಮುಂಬೈ: ಚಲಿಸುತ್ತಿರುವ ಲೋಕಲ್​ ರೈಲಿನಲ್ಲಿ ವ್ಯಕ್ತಿ ಓರ್ವನಿಗೆ ಬೆಲ್ಟ್​ನಿಂದ ಹೊಡೆದು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮುಂಬೈನ ಟಿಟ್ವಾಲಾ ಮತ್ತು ವಸಿಂದ್ ರೈಲು ನಿಲ್ದಾಣಗಳ ನಡುವೆ ನಡೆದಿದೆ.

ಮಹಾರಾಷ್ಟ್ರದ ಶಹಾಪುರ ತಾಲೂಕಿನ ಸಜಿವಲಿ ಗ್ರಾಮದ ದತ್ತಾತ್ರೇ ಭೋರ್ (55) ಎಂಬ ರೈತ ಸಾವನ್ನಪ್ಪಿದ್ದಾರೆ. ಇವರು ಮದುವೆಯ ಕಾರ್ಯಕ್ರಮ ಮುಗಿಸಿಕೊಂಡು ರೈಲಿನಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ರೈಲಿನ ಬೋಗಿಯಲ್ಲಿ ಗುಂಪುವೊಂದು ಮದ್ಯ ಸೇವನೆ ಮಾಡಿ ತಮಾಷೆಯಲ್ಲಿ ತೊಡಗಿದ್ದರು. ಇದೇ ಗುಂಪಿನ ಇನ್ನೊಬ್ಬರು ಬಾಗಿಲಿನ ಬಳಿ ನಿಂತಿದ್ದರು. ಆಗ ರೈತ ಭೋರ್ ಕೂಡ ಅಲ್ಲಿಯೇ ನಿಂತಿದ್ದರು. ಕುಳಿತ್ತಿದ್ದ ಗುಂಪಿನವರು ಬಾಗಿಲ ಬಳಿ ನಿಂತಿದ್ದ ತಮ್ಮ ಕಡೆಯವನಿಗೆ ಏನೋ ಅಂದಿದ್ದಾರೆ. ಅದನ್ನೇ ತಪ್ಪಾಗಿ ತಿಳಿದುಕೊಂಡು ರೈತ ಭೋರ್ ಎದುರುತ್ತರ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ರೈಲಿನಲ್ಲಿ ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೆ ಹೋಗಿದೆ. ಆಗ ಗುಂಪಿನಲ್ಲಿದ್ದ ಓರ್ವ ಬೆಲ್ಟ್​ ತೆಗೆದುಕೊಂಡು ವ್ಯಕ್ತಿಗೆ ಥಳಿಸಿದ್ದಾನೆ. ಇನ್ನೊಬ್ಬನು ಬಂದು ನೇರವಾಗಿ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ರೈಲು ನಿಂತ ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರೈತ ಸಾವನ್ನಪ್ಪಿದ್ದಾನೆ. ಆರೋಪಿಗಳು ಪರಾರಿಯಾಗಿದ್ದು ಅವರನ್ನು ಅಮೋಲ್ ಪರದೇಶಿ (40) ಮತ್ತು ತಂಜಿ ಕುಮಾರ್ ಜಮ್ಮುವಾಲ್ (21) ಎಂದು ಗುರುತಿಸಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರೈನ್​ನಲ್ಲಿ ಬೆಲ್ಟ್​​ನಿಂದ ಹೊಡೆದು, ಚಾಕುವಿನಿಂದ ಇರಿದು ರೈತನ ಭೀಕರ ಕೊಲೆ.. ಗಲಾಟೆ ಆಗಿದ್ದೇಕೆ?

https://newsfirstlive.com/wp-content/uploads/2024/05/MUMBAI.jpg

Load More