/newsfirstlive-kannada/media/post_attachments/wp-content/uploads/2025/06/Bullet_Train.jpg)
ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಮುಂಬೈನಿಂದ ಗುಜರಾತ್​ನ ಅಹಮದಾಬಾದ್​ವರೆಗೆ ಬುಲೆಟ್​ ಟ್ರೈನ್ ಕಾರಿಡಾರ್​ ಕಾಮಗಾರಿ ವೇಗದಿಂದ ನಡೆಯುತ್ತಿದೆ. ಈ ಕಾರಿಡಾರ್​ ಕಾಮಗಾರಿಗೆ ಸಂಬಂಧಿಸಿದಂತೆ 8ನೇ ಸ್ಟೀಲ್​ ಬ್ರಿಡ್ಜ್​ ಇದೀಗ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ.
ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್​​​ಹೆಚ್​​ಎಸ್​​ಆರ್​​ಸಿಎಲ್) ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಮುಂಬೈನಿಂದ ಗುಜರಾತ್​ನ ಅಹಮದಾಬಾದ್​ವರೆಗಿನ ಬುಲೆಟ್​ ಟ್ರೈನ್ ಕಾರಿಡಾರ್​ನಲ್ಲಿ ಒಟ್ಟು 28 ಉಕ್ಕಿನ ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ 17 ಸ್ಟೀಲ್​ ಬ್ರಿಡ್ಜ್​ಗಳನ್ನು ಗುಜರಾತ್​​ನಲ್ಲೇ ನಿರ್ಮಾಣ ಆಗಲಿವೆ.
ಈ 17ರಲ್ಲಿ ಸದ್ಯ ಭರೂಚ್ ನಗರದ ಬಳಿಯ 8ನೇ ಸ್ಟೀಲ್ ಬ್ರಿಡ್ಜ್​ ಪೂರ್ಣಗೊಂಡಿದೆ. ಇದರಿಂದ ಗುಜರಾತ್​ನಲ್ಲಿ ಶೇಕಡಾ 50 ರಷ್ಟು ಬ್ರಿಡ್ಜ್​ಗಳ ಕೆಲಸ ಪೂರ್ಣಗೊಂಡಂತೆ ಆಗಿದ್ದು ಇನ್ನು 7 ಉಕ್ಕಿನ ಸೇತುವೆಗಳನ್ನು ನಿರ್ಮಾಣ ಮಾಡಬೇಕಿದೆ. ಉಳಿದಂತೆ 11 ಉಕ್ಕಿನ ಸೇತುವೆಗಳನ್ನು ಮಾರ್ಗದಲ್ಲಿ ಅವಶ್ಯಕತೆ ಇದ್ದ ಕಡೆಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ.
ಸದ್ಯ ಪೂರ್ಣಗೊಂಡ ಸ್ಟೀಲ್​ ಬ್ರಿಡ್ಜ್​ ವಿಶೇಷತೆ ಏನು?
- ಗುಜರಾತ್​ನ ಭರೂಚ್​ ಬಳಿ ಈ ಸೇತುವೆ ನಿರ್ಮಿಸಿ ಪರೀಕ್ಷೆ ಮಾಡಲಾಗಿದೆ
- ಭರೂಚ್ ಬಳಿಯ ಈ ಸ್ಟೀಲ್ ಬ್ರಿಡ್ಜ್​ 100 ಮೀಟರ್​ ಉದ್ದವಾಗಿದೆ
- 1,400 ಮೆಟ್ರಿಕ್ ಟನ್​ ಭಾರವಾಗಿದ್ದು 14.6 ಮೀಟರ್​ ಎತ್ತರ ಹಾಗೂ 14.3 ಮೀಟರ್​ ಅಗಲವಾಗಿದೆ
- ಮುಂಬೈನಿಂದ ಅಹಮದಾಬಾದ್​ವರೆಗೆ ಒಟ್ಟು 28 ಉಕ್ಕಿನ ಸೇತುವೆಗಳು ನಿರ್ಮಾಣ
- ತಿರುಚ್ಚಿಯ (Trichy) ಕಾರ್ಯಾಗಾರದಲ್ಲಿ ತಯಾರಿಸಿ ವಿಶೇಷವಾಗಿ ವಿನ್ಯಾಸಗೊಳಿಸಿದ ಟ್ರೇಲರ್‌ಗಳನ್ನು ಬಳಸಿ ಸ್ಥಳಕ್ಕೆ ಸಾಗಿಸಲಾಯಿತು
- ಈ ಉಕ್ಕಿನ ಸೇತುವೆಗೆ ಒಟ್ಟು 55,300 ಉತ್ತಮ ಗುಣಮಟ್ಟದ ಟಾರ್-ಶಿಯರ್ ಬೋಲ್ಟ್‌ಗಳನ್ನು ಬಳಸಲಾಗಿದೆ
ಇದನ್ನೂ ಓದಿ: ಕನ್ನಡಿಗ KL ರಾಹುಲ್, ಬೂಮ್ರಾ ಸಿಡಿದ್ರೆ ಎದುರಾಳಿ ಫಿನೀಶ್.. ಆಂಗ್ಲರಿಗೆ ಶುರುವಾಗಿದೆ ಢವಢವ!
- ಎಲಾಸ್ಟೊಮೆರಿಕ್ ಬೇರಿಂಗ್ (Elastomeric Bearings) ಗಳು ಮತ್ತು C5-ದರ್ಜೆಯ ರಕ್ಷಣಾತ್ಮಕ ಲೇಪನವಿದೆ. ಇದು 100 ವರ್ಷದವರೆಗೆ ಬಳಕೆ
- ಮಾಡಬಹುದು ಎಂದು ಖಚಿತಪಡಿಸಿಕೊಳ್ಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ