newsfirstkannada.com

ಪ್ರೀತಿಸಿದವಳ ಕೊಲೆಗೈದು ರೈಲಿಗೆ ಅಡ್ಡಬಂದು ಸತ್ತ; 34 ದಿನದ ಹಿಂದಿನ ನಾಪತ್ತೆ ಕೇಸ್​ಗೆ ಕ್ಲೂ ಕೊಟ್ಟಿದ್ದು ಆ ಕೋಡ್​ ವರ್ಡ್!

Share :

Published January 27, 2024 at 12:06pm

  ಯುವತಿ ನಾಪತ್ತೆ ಕೇಸ್​​ಗೆ ಹೊಸ ಟ್ವಿಸ್ಟ್ ಕೊಟ್ಟ ಪೊಲೀಸ್ ಅಧಿಕಾರಿಗಳು

  ಆತ್ಮಹತ್ಯೆ ಹಿಂದಿನ ಸತ್ಯವನ್ನು ರೋಚಕವಾಗಿ ಭೇದಿಸಿದ ಪೊಲೀಸರು

  ಒಂದು ಸಾವಿನ ಹಿಂದೆ ಬಿದ್ದಿದ್ದ ಅಧಿಕಾರಿಗಳಿಗೆ ಕಾದಿತ್ತು ಶಾಕಿಂಗ್ ವಿಚಾರ

ಬರೋಬ್ಬರಿ 34 ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ರಹಸ್ಯವನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ..?
ಡಿಸೆಂಬರ್ 12 ರಂದು 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಿಯೋನ್​ನಲ್ಲಿರುವ ಕಾಲೇಜಿಗೆ ಹೋಗಿದ್ದಳು. ಕಾಲೇಜಿಗೆ ಹೋಗಿದ್ದ ಯುವತಿ ಮನೆಗೆ ವಾಪಸ್ ಆಗಿರಲಿಲ್ಲ. ಇದರಿಂದ ಗಾಬರಿಯಾಗಿದ್ದ ಪೋಷಕರು ಮುಂಬೈನ ಕಲಾಂಬೋಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಪೊಲೀಸರಿಗೆ, ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.

ಬೆನ್ನಲ್ಲೇ ಜುಯಿನಗರ ರೈಲ್ವೇ ನಿಲ್ದಾಣದ ಬಳಿ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಇದರ ತನಿಖೆ ಕೈಗೆತ್ತಿಕೊಂಡಿದದ ಪೊಲೀಸರಿಗೆ ವೈಭವ್ ಬುರುಂಗಲೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗೊತ್ತಾಗುತ್ತದೆ. ರೈಲಿಗೆ ಮೊಬೈಲ್ ಸಿಲುಕಿದ್ದರಿಂದ ಯಾವುದೇ ದಾಖಲೆಗಳು ಇರಲಿಲ್ಲ.

ಕೊನೆಗೆ ಹೇಗಾದರೂ ಮಾಡಿ ಸಾವಿನ ತನಿಖೆಯನ್ನು ಬಹಿರಂಗಪಡಿಸಬೇಕು ಅಂದ್ಕೊಂಡ ಪೊಲೀಸರು, ಮೊಬೈಲ್​ನಲ್ಲಿ ದಾಖಲಾಗಿದ್ದ L01-501 ಕೋಡ್​​ಗಳನ್ನು ಡಿಕೋಡ್ ಮಾಡಿದಾಗ ಡೆತ್​ನೋಟ್ ಎಂದು ಗೊತ್ತಾಗಿದೆ. ಅದರಲ್ಲಿ ಯುವತಿಯನ್ನು ಖಾರ್ಘರ್ ಬೆಟ್ಟದಲ್ಲಿ ಕೊಲೆ ಮಾಡಿರೋದಾಗಿ ತಿಳಿಸಿದ್ದ. ಜೊತೆಗೆ ತನ್ನ ಆತ್ಮಹತ್ಯೆಗೆ ಕಾರಣವನ್ನೂ ತಿಳಿಸಿದ್ದ.

ಏನು ಕಾರಣ..?
ವೈಭವ್ ಹಾಗೂ ಕೊಲೆಯಾದ ಯುವತಿ ಪ್ರೀತಿಸುತ್ತಿದ್ದರು. ಕೊನೆ ಗಳಿಗೆಯಲ್ಲಿ ಆಕೆ ಪ್ರೀತಿಯನ್ನು ಮುಂದುವರಿಸಲಿಲ್ಲ. ಇದರಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರೋದಾಗಿ ಆರೋಪಿ ಆತ್ಮಹತ್ಯೆ ನೋಟ್​ನಲ್ಲಿ ಬರೆದಿಟ್ಟಿದ್ದ. ವಿಚಾರ ಗೊತ್ತಾಗುತ್ತಿದ್ದಂತೆಯೇ ಮಹಾರಾಷ್ಟ್ರ ಪೊಲೀಸರು ಖಾರ್ಘರ್ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಯವತಿಯ ಶವ ಪತ್ತೆಯಾಗಿದೆ. ಕಾಲೇಜಿಗೆ ಹೋಗುವ ದಿನ ಯುವತಿ ಧರಿಸಿದ್ದ ಉಡುಗೆ, ಕೈಗಡಿಯಾರ, ಗುರುತಿನ ಚೀಟಿಯ ಆಧಾರದ ಮೇಲೆ ಮೃತದೇಹವನ್ನು ಗುರುತಿಸಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿದವಳ ಕೊಲೆಗೈದು ರೈಲಿಗೆ ಅಡ್ಡಬಂದು ಸತ್ತ; 34 ದಿನದ ಹಿಂದಿನ ನಾಪತ್ತೆ ಕೇಸ್​ಗೆ ಕ್ಲೂ ಕೊಟ್ಟಿದ್ದು ಆ ಕೋಡ್​ ವರ್ಡ್!

https://newsfirstlive.com/wp-content/uploads/2023/06/LOVE.jpg

Load More