Atal Setu: 18,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಟಲ್​ ಸೇತುವೆ.. ಅದ್ಭುತ ಫೋಟೋಗಳು

author-image
Ganesh
Updated On
Atal Setu: 18,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಟಲ್​ ಸೇತುವೆ.. ಅದ್ಭುತ ಫೋಟೋಗಳು
Advertisment
  • ದೇಶದ ಅತಿ ಉದ್ದದ ಸಮುದ್ರದಲ್ಲಿನ ಸೇತುವೆ ‘ಅಟಲ್ ಸೇತು’
  • ಮುಂಬೈನ ಸೆವ್ರಿ - ರಾಯಗಡದ ನ್ಹಾವಾ ಶೇವಾ ಮಧ್ಯೆ ಸಂಪರ್ಕ
  • ಸುಮಾರು 21.8 ಕಿಮೀ ಉದ್ದದ ಆರು ಪಥಗಳ ಬೃಹತ್​ ಸೇತುವೆ

ಸಮುದ್ರದ ಮೇಲೆ ನಿರ್ಮಿಸಿರುವ ಭಾರತದ ಅತಿ ಉದ್ದದ ಅಟಲ್‌ ಸೇತು ಇಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಸಮುದ್ರ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.

[caption id="attachment_40909" align="aligncenter" width="800"]ಫೋಟೋ ಕೃಪೆ: ಉಜ್ವಲ್ ಪುರಿ ಫೋಟೋ ಕೃಪೆ: ಉಜ್ವಲ್ ಪುರಿ[/caption]

ಮುಂಬೈನ ಸೆವ್ರಿ- ರಾಯಗಡದ ನ್ಹಾವಾ ಶೇವಾ ಮಧ್ಯೆ ಸಂಪರ್ಕ ಕಲ್ಪಿಸಲು ಸುಮಾರು 21 ಕಿಲೋ ಮೀಟರ್​​​ ಉದ್ದದ ಆರು ಪಥಗಳ ಬೃಹತ್​ ಸೇತುವೆ ಇದಾಗಿದ್ದು, ಸುಮಾರು 18 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

[caption id="attachment_40908" align="aligncenter" width="800"]ಫೋಟೋ ಕೃಪೆ: ಉಜ್ವಲ್ ಪುರಿ ಫೋಟೋ ಕೃಪೆ: ಉಜ್ವಲ್ ಪುರಿ[/caption]

ಪ್ರತಿನಿತ್ಯ ಸುಮಾರು 70 ಸಾವಿರ ವಾಹನಗಳು ಸಂಚರಿಸುವ ನಿರೀಕ್ಷೆ ಇದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಇಂದಿನಿಂದ ಅಟಲ್​ ಸೇತುವೆ ಉದ್ಘಾಟನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಸೇತುವೆಯನ್ನು ಪ್ರವೇಶಿಸುವ ಭಾಗದಲ್ಲಿ ಬಿಜೆಪಿಯ ಬಾವುಟಗಳು ಮತ್ತು ಪ್ರಧಾನಿ ಮೋದಿಯ ಬ್ಯಾನರ್​ಗಳು ರಾರಾಜಿಸುತ್ತಿವೆ.

ಇದನ್ನೂ ಓದಿಸಮುದ್ರಕ್ಕೇ ನಿರ್ಮಿಸಿರೋ ಸೇತುವೆ ಇದು.. ದೇಶದ ಅತಿ ಉದ್ದದ ‘ಅಟಲ್ ಸೇತು’ ಎಷ್ಟು ಕಿಮೀ ದೂರ ಇದೆ..!

[caption id="attachment_40907" align="aligncenter" width="800"]ಫೋಟೋ ಕೃಪೆ: ಉಜ್ವಲ್ ಪುರಿ ಫೋಟೋ ಕೃಪೆ: ಉಜ್ವಲ್ ಪುರಿ[/caption]

ಅಟಲ್​ ವಾಜಪೇಯಿ ಅವರ ಸ್ಮರಣಾರ್ಥವಾಗಿ ಸಮುದ್ರದ ಸೇತುವೆಗೆ ಅವರ ಹೆಸರನ್ನು ಇಡಲಾಗಿದೆ. ನಾಲ್ಕು ಚಕ್ರದ ವಾಹನಗಳ ವೇಗದ ಮಿತಿಯನ್ನು 100 ಕೀ.ಮಿ. ನಿಗದಿ ಮಾಡಲಾಗಿದೆ. ಹೀಗಾಗಿ ದೇಶದ ಅತಿ ಉದ್ಧದ ಸೇತುವೆ ಮೇಲೆ ಬೈಕ್​, ಆಟೋ, ಟ್ರ್ಯಾಕ್ಟರ್​, ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

[caption id="attachment_40904" align="aligncenter" width="800"]ಫೋಟೋ ಕೃಪೆ: ಉಜ್ವಲ್ ಪುರಿ ಫೋಟೋ ಕೃಪೆ: ಉಜ್ವಲ್ ಪುರಿ[/caption]

ಸೇತುವೆಯ ಏಕಮುಖ ಸಂಚಾರಕ್ಕೆ 250 ರೂಪಾಯಿ, ದ್ವಿಮುಖ ಸಂಚಾರಕ್ಕೆ 375 ರೂಪಾಯಿ ಶುಲ್ಕ ಇರಲಿದೆ. ಒಂದು ವರ್ಷದ ಬಳಿಕ ರಾಜ್ಯ ಸರ್ಕಾರ, ಟೋಲ್​ ದರವನ್ನು ಮರು ಪರಿಷ್ಕರಣೆ ಮಾಡುವುದಾಗಿ ಹೇಳಿಕೊಂಡಿದೆ.

publive-image

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment