/newsfirstlive-kannada/media/post_attachments/wp-content/uploads/2024/08/mumbai5.jpg)
2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿ ಯಾರಿಂದಲೂ ಮರೆಯೋಕೆ ಸಾಧ್ಯವಿಲ್ಲ. ನೂರಾರು ಸಾವಿಗೆ ಕಾರಣವಾಗಿದ್ದ ಉಗ್ರಕ್ರಿಮಿಗಳನ್ನ ಭಾರತೀಯ ಸೇನೆ ಹೊಡೆದುರುಳಿಸಿತ್ತು. ಇದೀಗ ಈ ಉಗ್ರರಿಗೆ ನೆರವು ನೀಡಿದ್ದ ಆರೋಪ ಹೊತ್ತವನು ಭಾರತದ ಬಲೆಗೆ ಬಿದ್ದಿದ್ದಾನೆ. ಅಮೆರಿಕಾದಲ್ಲಿದ್ದ ಆತನನ್ನ ಭಾರತಕ್ಕೆ ಒಪ್ಪಿಸಲು ಯುಎಸ್ ಒಪ್ಪಿಗೆ ನೀಡಿದೆ.
ಇದನ್ನೂ ಓದಿ: ಜಸ್ಟ್ ₹800 ಪೆನ್ಷನ್.. ಕಲ್ಯಾಣ ಕರ್ನಾಟಕಕ್ಕೆ ಭಗೀರಥನಾದ ಡ್ಯಾಂ ತಜ್ಞ ಕನ್ನಯ್ಯ; ಇವ್ರು ಇಷ್ಟೊಂದು ಸಿಂಪಲ್ಲಾ!
/newsfirstlive-kannada/media/post_attachments/wp-content/uploads/2024/08/mumbai9.jpg)
ತಹಾವ್ವುರ್ ರಾಣಾ ಪಾಕಿಸ್ತಾನಿ ಮೂಲದವನು. ಕೆನಡಾದ ಉದ್ಯಮಿ ಕೂಡ. ಹೀಗೆ 2008ರಲ್ಲಿ ಭಾರತದ ಮೇಲೆ ವಕ್ರದೃಷ್ಟಿ ಬೀರಿದ್ದ. 16 ವರ್ಷದ ಹಿಂದೆ ವಾಣಿಜ್ಯ ನಗರಿ ಮುಂಬೈ ಮೇಲೆ ಅಟ್ಯಾಕ್ ಮಾಡಿಸಿದ್ದ. 2008ರಲ್ಲಿ ಮುಂಬೈನ ತಾಜ್​ ಹೋಟೆಲ್​ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಸಂಚುಕೋರ ತಹವ್ವುರ್ ರಾಣಾಗೂ ನಂಟಿದೆ. ಪಾಕ್ ಉಗ್ರ ಅಜ್ಮಲ್ ಕಸಬ್​ ನೇತೃತ್ವದ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡಿದ್ದ ಆರೋಪ ರಾಣಾ ಮೇಲಿದೆ.
2008ರ ನವೆಂಬರ್ 26ರಂದು ಲಷ್ಕರ್-ಎ-ತೊಯ್ಬಾದ 10 ಭಯೋತ್ಪಾದಕರು ಪಾಕಿಸ್ತಾನದಿಂದ ಸಮುದ್ರ ಮಾರ್ಗವನ್ನು ಮುಂಬೈಗೆ ಬಂದು, ನಗರದಾದ್ಯಂತ ಹಲವಾರು ಸ್ಥಳಗಳಲ್ಲಿ ದಾಳಿ ಮಾಡಿದರು.
/newsfirstlive-kannada/media/post_attachments/wp-content/uploads/2024/08/mumbai7.jpg)
ನಾಲ್ಕು ದಿನಗಳ ಕಾಲ ನಡೆದ ದಾಳಿಯಲ್ಲಿ 26 ವಿದೇಶಿ ನಾಗರಿಕರು ಸೇರಿದಂತೆ 166 ಜನರು ಸಾವನ್ನಪ್ಪಿದ್ದರು. ಈ ಪ್ರಕರಣ ಮತ್ತು ಕೋಪನ್ ಹ್ಯಾಗನ್ ಸೇರಿದಂತೆ US ನ ಹೊರಗೆ ಭಯೋತ್ಪಾದಕ ಕೃತ್ಯಗಳನ್ನು ಎಸಗುವ ಸಂಚುಗಳ ಭಾಗವಾಗಿದ್ದಕ್ಕಾಗಿ ರಾಣಾನನ್ನ 2009ರಲ್ಲಿ ಅಮೆರಿಕ FBI ಬಂಧಿಸಲಾಗಿತ್ತು. ಇದೀಗ ರಾಣಾನನ್ನ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಅಮೆರಿಕ ಕೋರ್ಟ್ ತೀರ್ಪು ನೀಡಿದೆ. ಇದು ಭಾರತದ ಬೇಡಿಕೆಗೆ ಸಿಕ್ಕ ಜಯವಾಗಿದೆ.
ಭಾರತಕ್ಕೆ ಜಯ!
ಜೂನ್ 2020ರಲ್ಲಿ ಭಾರತವು ರಾಣಾ ಹಸ್ತಾಂತರಕ್ಕಾಗಿ ಅರ್ಜಿ ಸಲ್ಲಿಸಿತ್ತು, ಭಾರತ- ಅಮೆರಿಕ ಹಸ್ತಾಂತರ ಒಪ್ಪಂದವು ಅನುಮತಿ ನೀಡುತ್ತೆ ಅನ್ನೋದನ್ನೂ ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಬೆನ್ನಲ್ಲೇ ರಾಣಾ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಆಪಾದಿತ ರಾಣಾ ಎಸಗಿದ ಅಪರಾಧ ಅಮೆರಿಕ ಮತ್ತು ಭಾರತದ ನಡುವಿನ ಹಸ್ತಾಂತರ ಒಪ್ಪಂದದ ನಿಯಮಗಳಿಗೆ ಒಳಪಟ್ಟಿದೆ ಎಂದು ಅಭಿಪ್ರಾಯಪಟ್ಟಿದೆ.
/newsfirstlive-kannada/media/post_attachments/wp-content/uploads/2024/08/mumbai6.jpg)
ರಾಣಾ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಭಾರತವು ಸಾಕಷ್ಟು ಸಮರ್ಥ ಪುರಾವೆಗಳನ್ನು ಒದಗಿಸಿದೆ ಎಂದು ಅಮೆರಿಕದ ನೈಂತ್ ಸರ್ಕೀಟ್ ಮೇಲ್ಮನವಿ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ಈ ತೀರ್ಪಿನಿಂದ ಲಾಸ್ ಏಂಜಲ್ಸ್​ನ ಜೈಲಿನಲ್ಲಿರೋ ರಾಣಾಗೆ ತೀವ್ರ ಹಿನ್ನಡೆಯಾಗಿದೆ. ಆದ್ರೆ ಮೇಲ್ಮನವಿ ಸಲ್ಲಿಸಲು ರಾಣಾಗೆ ಅವಕಾಶವಿದೆ. ಒಟ್ಟಾರೆ, ಮುಂಬೈನ 10 ದಾಳಿಕೋರರಲ್ಲಿ ಅಜ್ಮಲ್ ಕಸಬ್ ಹೊರತುಪಡಿಸಿ ಎಲ್ಲರನ್ನೂ ಸೇನಾ ಪಡೆ ಹೊಡೆದುರುಳಿಸಿತ್ತು. ಜೀವಂತವಾಗಿ ಸೆರೆಹಿಡಿದಿದ್ದ ಅಜ್ಮಲ್ ಕಸಬ್​ನನ್ನ 2012ರಲ್ಲಿ ಗಲ್ಲಿಗೇರಿಸಲಾಯಿತು. ಇದೀಗ ಇದಕ್ಕೆ ಬೆಂಬಲ ಕೊಟ್ಟ ಆರೋಪ ಹೊತ್ತಿರೋ ರಾಣಾ ಭಾರತಕ್ಕೆ ಬರೋ ಮುನ್ಸೂಚನೆ ಸಿಕ್ಕಿದೆ. ಇದು ಭಾರತದ ಹೋರಾಟಕ್ಕೆ ಸಿಕ್ಕ ಜಯವೇ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us