/newsfirstlive-kannada/media/post_attachments/wp-content/uploads/2025/07/RAJ-LEELA.jpg)
ಆರೋಪಿಗಳು
ಖಾಸಗಿ ಕ್ಷಣಗಳ ವಿಡಿಯೋ ಹರಿಬಿಡುವುದಾಗಿ ಬೆದರಿಸಿ 3 ಕೋಟಿ ರೂಪಾಯಿ ಹಣ ವಸೂಲಿ ಮಾಡಿದ್ದರಿಂದ ನೊಂದ ಚಾರ್ಟೆಡ್ ಅಕೌಟೆಂಟ್ ರಾಜ್ ಲೀಲಾ ಮೋರೆ (Rraj Leela More) ಜೀವ ತೆಗೆದುಕೊಂಡಿದ್ದಾರೆ.
ಮುಂಬೈನ ಸಂತಾಕ್ರೂಜ್‌ನ ಪ್ರದೇಶದ (Santacruz area in Mumbai) ಚಾರ್ಟೆಡ್ ಅಕೌಂಟೆಂಟ್ (Chartered accountant) ರಾಜ್​ ಮೋರೆಯಿಂದ ಕಳೆದ 18 ತಿಂಗಳಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ. ರಾಹುಲ್ ಪರ್ವನಿ (Rahul Parwani ), ಸಾಬಾ ಖುರೇಷಿ (Saba Qureshi) ಎಂಬಿಬ್ಬರು ಚಾರ್ಟೆಡ್ ಅಕೌಂಟೆಂಟ್ ರಾಜ್ ಲೀಲಾ ಮೋರೆಯಿಂದ ಭಾರೀ ಮೊತ್ತದ ಹಣ ವಸೂಲಿ ಮಾಡಿದ್ದಾರೆ. ಇದರಿಂದ ತನ್ನ ಉಳಿತಾಯದ ಹಣವನ್ನೆಲ್ಲಾ ರಾಜ್ ಮೋರೆ ಕಳೆದುಕೊಂಡಿದ್ದರು. ಜೊತೆಗೆ ರಾಜ್ ಮೋರೆಯ ಕಂಪನಿಯ ಖಾತೆಯ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಆರೋಪಿಗಳು ವರ್ಗಾಯಿಸಿಕೊಂಡಿದ್ದರು. ಜೊತೆಗೆ ರಾಜ್ ಲೀಲಾ ಮೋರೆ ಬಳಿ ಇದ್ದ ಲಕ್ಸುರಿ ಕಾರನ್ನು ಬಲವಂತವಾಗಿ ಆರೋಪಿಗಳು ತೆಗೆದುಕೊಂಡ ಹೋಗಿದ್ದರು ಎನ್ನಲಾಗಿದೆ.
ಸ್ಟಾಕ್ ಮಾರ್ಕೆಟ್​ನಲ್ಲಿ ಭಾರಿ ಹಣವನ್ನು ರಾಜ್ ಲೀಲಾ ಮೋರೆ ಹೂಡಿಕೆ ಮಾಡಿದ್ದರು. ಜೊತೆಗೆ ಹೆಚ್ಚಿನ ಸಂಬಳದ ಕೆಲಸದಲ್ಲೂ ರಾಜ್ ಲೀಲಾ ಮೋರೆ ಇದ್ದರು. ಇದೆಲ್ಲವೂ ಆರೋಪಿಗಳಾದ ರಾಹುಲ್ ಪರ್ವನಿ, ಸಾಬಾ ಖುರೇಷಿಗೆ ಗೊತ್ತಿತ್ತು. ಹೀಗಾಗಿ ಈತನನ್ನೇ ಟಾರ್ಗೆಟ್ ಮಾಡಿ ಖಾಸಗಿ ಕ್ಷಣಗಳ ವಿಡಿಯೋ ಹರಿಬಿಡುವುದಾಗಿ ಬೆದರಿಸಿ, ಬ್ಲಾಕ್ ಮೇಲ್ ಮಾಡಿದ್ದಾರೆ. ಮರ್ಯಾದೆಗೆ ಅಂಜಿ 32 ವರ್ಷದ ರಾಜ್ ಲೀಲಾ ಮೋರೆ ಮನೆಯಲ್ಲಿ ವಿಷ ಸೇವಿಸಿದ್ದಾರೆ.
ಇದನ್ನೂ ಓದಿ: CJI ನಿವೃತ್ತಿಯ ನಂತರ ಎಷ್ಟು ತಿಂಗಳಲ್ಲಿ ಬಂಗಲೆಯನ್ನು ಖಾಲಿ ಮಾಡಬೇಕು..? ನಿಯಮಗಳು ಏನೇನು..?
ದುಡುಕಿನ ನಿರ್ಧಾರಕ್ಕೂ ಮುನ್ನ ಮೂರು ಪುಟಗಳ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ರಾಹುಲ್ ಪರ್ವನಿ, ಸಬಾ ಖುರೇಷಿಯೇ ಕಾರಣ ಎಂದು ರಾಜ್ ಲೀಲಾ ಬರೆದಿದ್ದಾರೆ. ಮುಂಬೈನ ವಕೋಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ.
ಸುಂದರಿ ಸಬಾ ಖುರೇಷಿಯ ಗಾಳಕ್ಕೆ ಬಿದ್ದು, ರಾಜ್ ಲೀಲಾ ಮೋರೆ ಸಂಕಷ್ಟಕ್ಕೆ ಸಿಲುಕಿದ್ದಿರಬಹುದು. ಸುಂದರ, ಸಂತೋಷದ ಕ್ಷಣದ ಆಸೆ ತೋರಿಸಿ, ವಿಡಿಯೋ ಮಾಡಿಟ್ಟುಕೊಂಡು ಸಬಾ ಖುರೇಷಿ ಬ್ಲಾಕ್ ಮೇಲ್ ಮಾಡಿದ್ದಾಳೆ. ಸುಂದರಿಯ ಮೋಸದ ಗಾಳಕ್ಕೆ ಬೀಳುವ ಮುನ್ನ ಯುವಕರು ಎಚ್ಚರದಿಂದ ಇರಬೇಕು. ಸುಂದರಿಯರ ಗಾಳಕ್ಕೆ ಬಿದ್ದರೆ ಹಣವೂ ಹೋಗುತ್ತೆ, ಜೀವವೂ ಹೋಗುತ್ತೆ, ಮರ್ಯಾದೆಯೂ ಹೋಗುತ್ತೆ ಎಂಬುದಕ್ಕೆ ರಾಜ್ ಲೀಲಾ ಪ್ರಕರಣ ಸಾಕ್ಷಿಯಾಗಿದೆ.
ಅಮ್ಮ ಹೇಳಿದ್ದೇನು..?
ತಮ್ಮ ಮಗ ಇತ್ತೀಚೆಗೆ ಕೆಲ ತಿಂಗಳಿನಿಂದ ಭಾರಿ ಒತ್ತಡದಲ್ಲಿದ್ದ ಎಂದು ರಾಜ್ ಲೀಲಾ ಮೋರೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಡೆತ್​ನೋಟ್​ನಲ್ಲಿ ತಾಯಿಗೆ ರಾಜ್, ಕ್ಷಮೆ ಕೇಳಿದ್ದಾರೆ. ನಾನು ನಿಮಗೆ ಒಳ್ಳೆಯ ಮಗನಾಗಲಿಲ್ಲ. ನಿಮ್ಮ ಬಗ್ಗೆ ಈಗ ನೀವೇ ಕೇರ್ ತೆಗೆದುಕೊಳ್ಳಬೇಕು. ನನ್ನ ಇನ್ಸೂರೆನ್ಸ್ ಹಣವನ್ನು ನೀವು ತೆಗೆದುಕೊಳ್ಳಿ ಎಂದು ರಾಜ್, ತನ್ನ ತಾಯಿಯನ್ನು ಉದ್ದೇಶಿಸಿ ಬರೆದಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿ 1 ಗಂಟೆ.. ಮಹಾ ದುರಂತದಿಂದ 67 ಮಂದಿಯ ಪ್ರಾಣ ಉಳಿಸಿದ ಶ್ವಾನ..!
ಇದೇ ರೀತಿ ತನ್ನ ಸಹೋದ್ಯೋಗಿಗಳಿಗೂ ರಾಜ್ ಕ್ಷಮೆ ಕೇಳಿದ್ದಾರೆ. ನಿಮ್ಮ ನಂಬಿಕೆಗೆ ನಾನು ಧಕ್ಕೆ ತಂದಿದ್ದೇನೆ. ನನ್ನಿಂದ ಏನೇ ವಂಚನೆಯಾಗಿದ್ದರೂ ಅದನ್ನು ನನಗಾಗಿಯೇ ಮಾಡಿದ್ದೇನೆ. ಕಂಪನಿಯಲ್ಲಿ ಏನಾಗುತ್ತಿದೆ ಅನ್ನೋದ್ರ ಬಗ್ಗೆ ಶ್ವೇತಾ, ಜಯಪ್ರಕಾಶ್​ಗೆ ಐಡಿಯಾ ಇಲ್ಲ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ರಾಜ್ ಮೋರೆ ಬರೆದಿದ್ದಾರೆ.
ಮತ್ತೊಂದು ಡೆತ್​ನೋಟ್​ನಲ್ಲಿ ರಾಹುಲ್ ಪರ್ವನಿ ಕಾರಣ ಎಂದು ನೇರವಾಗಿ ಬರೆದಿದ್ದಾರೆ. ರಾಹುಲ್ ಪರ್ವನಿ ಕಳೆದ ಕೆಲ ತಿಂಗಳಿನಿಂದ ನನಗೆ ಬ್ಲಾಕ್ ಮೇಲ್ ಮಾಡಿದ್ದರು. ನನ್ನ ಕಂಪನಿಯ ಬ್ಯಾಂಕ್ ಖಾತೆಯಿಂದ ಹಣವನ್ನು ಲಪಟಾಯಿಸಿದ್ದಾರೆ. ರಾಹುಲ್ ಪರ್ವನಿ, ಸಬಾ ಖುರೇಷಿಯೇ ನನ್ನ ನಿರ್ಧಾರಕ್ಕೆ ಕಾರಣ ಎಂದು ರಾಜ್ ಬರೆದಿದ್ದಾರೆ. ಪೊಲೀಸರು ಹಣ ವಸೂಲಿ, ಬ್ಲಾಕ್ ಮೇಲ್ ಕೇಸ್ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಆಶಾಳ ಚೌಡವ್ವ ಅವತಾರಕ್ಕೆ ಬೆಚ್ಚಿಬಿದ್ದ ಭದ್ರಾವತಿ.. ದೆವ್ವ ಬಿಡಿಸ್ತೀನಿ ಅಂತಾ ಜೀವ ತೆಗೆದ ಬಗ್ಗೆ ಜನ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ